ವೆಸ್ಪಾ ದುಬಾರಿ ಸ್ಕೂಟರ್ 946 ಜೂನಲ್ಲಿ ಬಿಡುಗಡೆ
ಇಟಲಿ ಮೂಲದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ, ಮಗದೊಂದು ಆಕರ್ಷಕ ವೆಸ್ಪಾ ಸ್ಕೂಟರ್ ಬ್ರಾಂಡನ್ನು ದೇಶಕ್ಕೆ ಪರಿಚಯಿಸಲಿದೆ. ಬಲ್ಲ ಮೂಲಗಳ ಪ್ರಕಾರ ಬಹುನಿರೀಕ್ಷಿತ ವೆಸ್ಪಾ 946 ಸ್ಕೂಟರ್ ಮುಂಬರುವ ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಸಾಲು ಗಟ್ಟಿ ನಿಂತಿರುವ ಹೀರೊ ಸ್ಕೂಟರುಗಳು
ಕೆಲವು ತಿಂಗಳುಗಳ ಹಿಂದೆ ಅಂದರೆ 2014 ಫೆಬ್ರವರಿ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ವೆಸ್ಪಾ 946, ತನ್ನದೇ ಆದ ವಿಶಿಷ್ಟ ರೀತಿಯ ವಿನ್ಯಾಸವನ್ನು ಪಡೆದುಕೊಂಡಿದೆ.

ವರದಿಗಳ ಪ್ರಕಾರ ವೆಸ್ಪಾದ ನೂತನ 946 ವೆರಿಯಂಟ್ ಭಾರತದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗುವುದಿಲ್ಲ. ಬದಲಾಗಿ ಸಿಬಿಯು ಅಂದರೆ ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ದೇಶದಲ್ಲಿ ವಿತರಣೆಯಾಗಲಿದೆ.

ಹಾಗಿದ್ದರೂ ದೇಶದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಇಟಲಿ ಮೂಲದ ಈ ಪ್ರೀಮಿಯಂ ಸಂಸ್ಥೆ ಹೊಂದಿದೆ.

ಅಷ್ಟಕ್ಕೂ 946 ಎಂದರೇನು? ಬಹುತೇಕ ಮಂದಿ ವೆಸ್ಪಾ 946 ಕೇಳಿದಾಕ್ಷಣ ಇದರಲ್ಲಿ ಪವರ್‌ಫುಲ್ ಎಂಜಿನ್ ಆಳವಡಿಸಿಕೊಳ್ಳಲಾಗಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡಿರುತ್ತಾರೆ. ಆದರೆ ನಿಜ ಹೇಳಬೇಕೆಂದರೆ ವೆಸ್ಪಾ 946, 125 ಸಿಸಿ ಫೋರ್ ಸ್ಟ್ರೋಕ್ ಮಿಲ್ ಪಡೆದುಕೊಂಡಿದ್ದು, 11.7 ಅಶ್ವಶಕ್ತಿ (10.3 ಎನ್ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಂದ ಹಾಗೆ ವೆಸ್ಪಾ 946, ಅಲ್ಯೂಮಿನಿಯಂ ಮೊನೊಕಾಕ್ ರಚನೆಯನ್ನು ಪಡೆದುಕೊಂಡಿದೆ. ಈ ಮೂಲಕ ಭಾರವನ್ನು ಸಾಕಷ್ಟು ಇಳಿಕೆ ಮಾಡಲಾಗಿದೆ. ಹಾಗೆಯೇ ಸುಲಲಿತವಾದ ಚಾಲನೆಗಾಗಿ ಸಿವಿಟಿ ಟ್ರಾನ್ಸ್‌ಮಿಷನ್ ಸಹ ಲಗತ್ತಿಸಲಾಗಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಸ್ಟಾಂಡರ್ಡ್ ಆಗಿ ದೊರಕಲಿದೆ. ಹಾಗೆಯೇ ಉನ್ನತ ದರ್ಜೆಯ ಬ್ರೇಕಿಂಗ್‌ಗಾಗಿ ಫ್ರಂಟ್ ಹಾಗೂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವಿದೆ.

ಇವೆಲ್ಲದರ ಜತೆಗೆ ಎಎಸ್‌ಆರ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಕೂಡಾ ಇರಲಿದೆ. ಇದು ಚಕ್ರಗಳಿಗೆ ಉತ್ತಮ ಗ್ರಿಪ್ ಪ್ರದಾನ ಮಾಡಲಿದೆ.

ನೀವು ನೋಡುತ್ತಿರುವಂತೆಯೇ ಪಿಯಾಜಿಯೊ 946 ಆವೃತ್ತಿಯಲ್ಲಿ ಮುಂಭಾಗ ಹಿಂಭಾಗದಲ್ಲಿ ನಯವಾಗಿ ಹರಿಯುವ ಸಾಲುಗಳನ್ನು ನೋಡಬಹುದು. ಹಾಗೆಯೇ ಇದರ ಸಿಂಗಲ್ ಪೀಸ್ ಸೀಟು ಪ್ರಮುಖ ಆಕರ್ಷಣೆಯಾಗಿರಲಿದೆ.

ಇನ್ನುಳಿದಂತೆ ಎಲ್ಲ ಹೊಸತನದ ಡಿಜಿಟಲ್ ಡ್ಯಾಶ್‌ಬೋರ್ಡ್ ಪಡೆದುಕೊಳ್ಳಲಿದೆ. ಇದು ಸ್ಕೂಟರ್‌ಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ನೀಡಲಿದೆ. ಹಾಗೆಯೇ ಎಲ್‌ಇಡಿ ಲೈಟಿಂಗ್ಸ್ ಪಡೆದುಕೊಳ್ಳಲಿದೆ.

ನಿಮ್ಮ ಮಾಹಿತಿಗಾಗಿ, ಕೆಲವು ತಿಂಗಳುಗಳ ಹಿಂದೆಯಷ್ಟೇ ವೆಸ್ಪಾ ಎಸ್ ಭಾರತ ಮಾರುಕಟ್ಟೆ ಪ್ರವೇಶಿಸಿತ್ತು. ಸಂಸ್ಥೆಯು ಈಗಾಗಲೇ ಎಲ್‌ಎಕ್ಸ್ ಹಾಗೂ ವಿಎಕ್ಸ್ ಮಾದರಿಗಳನ್ನು ಪರಿಚಯಿಸಿದೆ. ಇದೀಗ ಈ ಸಾಲಿಗೆ ಮಗದೊಂದು ಸ್ಕೂಟರ್ ಸೇರ್ಪಡೆಯಾಗಲಿದೆ.

ಒಟ್ಟಿನಲ್ಲಿ ವೆಸ್ಪಾದಿಂದ ಇದುವರೆಗೆ ಪರಿಚಯವಾಗಿರುವ ಸ್ಕೂಟರ್‌ಗಳ ಪೈಕಿ ವೆಸ್ಪಾ 946 ಅತ್ಯಂತ ದುಬಾರಿ ಎನಿಸಿಕೊಳ್ಳಲಿದೆ. ಇದರ ಬಲೆ ಎಂಟು ಲಕ್ಷ ರು.ಗಳಿಷ್ಟಿರಲಿದೆ ಎಂದು ಆಟೋ ಮೂಲಗಳು ತಿಳಿಸಿವೆ.


Click it and Unblock the Notifications