ದೆಹಲಿಯಲ್ಲಿ ಚೆಂದುಳ್ಳಿ ಚೆಲುವೆ ವೆಸ್ಪಾ ಮಿಂಚಿಂಗ್
ಇಟಲಿ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಪಿಯಾಜಿಯೊ, ದೆಹಲಿಯಲ್ಲಿ ಸಾಗುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ಬಹುನಿರೀಕ್ಷಿತ ವೆಸ್ಪಾ 946 ಅನಾವರಣಗೊಳಿಸಿದೆ.
2014 ಆಟೋ ಎಕ್ಸ್ ಪೋ
ಆಧುನಿಕತೆಯ ಸಂಕೇತಕ್ಕೆ ಪೂರಕವಾಗಿ ನೂತನ ವೆಸ್ಪಾ ಮಾದರಿ ವಿನ್ಯಾಸಗೊಳಿಸಲಾಗಿದೆ. ಇದು ಅತ್ಯಂತ ಐಷಾರಾಮಿ ಹಾಗೂ ಅಷ್ಟೇ ಹೆಚ್ಚು ಗರಿಷ್ಠ ತಂತ್ರಗಾರಿಕೆಗಳನ್ನು ಹೊಂದಿದೆ.

ಪ್ರೀಮಿಯಂ ಸ್ಕೂಟರ್ ಬಯಸುವವರಿಗೆ ವೆಸ್ಪಾ ಅತ್ಯುತ್ತಮ ಆಯ್ಕೆಯಾಗಿರಲಿದೆ. ಪ್ರಸಕ್ತ ಸಾಲಿನಲ್ಲೇ ಇದು ಮಾರುಕಟ್ಟೆ ತಲುಪುವ ನಿರೀಕ್ಷೆಯಿದೆ.

ಎರಡು ವರ್ಷಗಳ ಹಿಂದೆಯಷ್ಟೇ ದೇಶದ ಮಾರುಕಟ್ಟೆ ಪ್ರವೇಶಿಸಿದ್ದ ವೆಸ್ಪಾ, ಜಗತ್ತಿನ ನಂ.1 ಹಾಗೂ ದೇಶದಲ್ಲೂ ಅತಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ.

ಮೂಲಗಳ ಪ್ರಕಾರ ವೆಸ್ಪಾ 946 ಜತೆಗೆ ಎಸ್ ಮಾದರಿಗಳು ಸದ್ಯದಲ್ಲೇ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ವೆಸ್ಪಾ 946, ಹಳೆಯ ವೆಸ್ಪಾ ಮಾದರಿಯ ಹೊಸರೂಪವಾಗಿರಲಿದೆ. ಆದರೆ ಸಂಪೂರ್ಣ ಹೊಸ ತಂತ್ರಜ್ಞಾನವನ್ನು ಹೊಂದಿರಲಿದೆ. 1946 ಎಂಪಿ6 ಸ್ಕೂಟರ್ ತಲಹದಿಯಲ್ಲಿ ವಿನ್ಯಾಸ ರಚಿಸಲಾಗಿದೆ. ಇದು 2012ರಲ್ಲಿ ಇಟಲಿಯ ಆಟೋ ಶೋವೊಂದರಲ್ಲಿ ಮೊದಲ ಮಾದರಿ ಪ್ರದರ್ಶಿಸಲಾಗಿತ್ತು.

ವೆಸ್ಪಾ 946, 125 ಸಿಸಿ ಎಂಜಿನ್ ಹೊಂದಿರಲಿದ್ದು, 11 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹಾಗೆಯೇ ಎಲ್‌ಇಡಿ ಲೈಟ್ಸ್ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎಲ್‌ಸಿಡಿ ಡಿಸ್ ಪ್ಲೇಗಳಲ್ಲಿ ಲಭ್ಯವಿರಲಿದೆ. ಇನ್ನುಳಿದಂತೆ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಇರಲಿದೆ.

ವೆಸ್ಪಾ 946, ಹಗುರ ಭಾರವಾಗಿರಲಿದ್ದು, ಅಲ್ಯೂಮಿನಿಯಂ ಬಳಕೆ ಮಾಡಲಿದೆ. ಅಲ್ಲದೆ ಸಾಮಾನ್ಯ ಮಾದರಿಗಿಂತ ಶೇಕಡಾ 30ರಷ್ಟು ಹೆಚ್ಚು ಮೈಲೇಜ್ ಹಾಗೂ ಶೇಕಾಡ 10ರಷ್ಟು ಟಾರ್ಕ್ ನೀಡುವಲ್ಲಿ ಯಶಸ್ವಿಯಾಗಲಿದೆ.

ಇದೇ ಸಂದರ್ಭದಲ್ಲಿ ಎನ್‌ಟಿ3 ಮೊದಲ ಮಾದರಿ ವಾಹನ ಹಾಗೂ ಬಹುನಿರೀಕ್ಷಿತ ವೆಸ್ಪಾ ಎಸ್ ಮಾದರಿಯನ್ನು ಪ್ರದರ್ಶಿಸಲಾಗಿತ್ತು.


Click it and Unblock the Notifications








