ವೆಸ್ಪಾ ಸ್ಕೂಟರಿನಲ್ಲಿ ಎಬಿಎಸ್, ಮಲ್ಟಿಮಿಡಿಯಾ ವೈಶಿಷ್ಟ್ಯ
ಇಟಲಿಯ ವಾಹನ ತಯಾರಕ ಸಂಸ್ಥೆ ಪಿಯಾಜಿಯೊದ ಐಕಾನಿಕ್ ದ್ವಿಚಕ್ರ ಬ್ರಾಂಡ್ ಆಗಿರುವ ವೆಸ್ಪಾದಿಂದ ಮಾರಾಟುತ್ತಿರುವ ಅತ್ಯಂತ ಶಕ್ತಿಶಾಲಿ ಸ್ಕೂಟರ್ ಜಿಟಿಎಸ್, ಇದೀಗ ಹೊಸ ಹೊಸ ತಾಂತ್ರಿಕ ಬದಲಾವಣೆಗಳನ್ನು ಪಡೆದುಕೊಂಡಿದೆ.
ಸ್ಕೂಟರ್ ಪ್ರೇಮಿಗಳ ಆನಂದ - ವೆಸ್ಪಾ ಎಸ್ 125 ವಿಮರ್ಶೆ
ನೂತನ ವೆಸ್ಪಾ ಜಿಟಿಎಸ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವರ್ಧಿತ ಸ್ಲೈಡಿಂಗ್ ಸಸ್ಪೆಷನ್ (ಇಎಸ್‌ಎಸ್) ಮತ್ತು ವೆಸ್ಪಾ ಮಲ್ಟಿಮೀಡಿಯಾ ಫ್ಲ್ಯಾಟ್‌ಫಾರ್ಮ್ ಪಡೆದುಕೊಳ್ಳಲಿದೆ. ಅಮೆರಿಕ ಹಾಗೂ ಯುರೋಪ್‌ನಲ್ಲಿ ಮಾರಾಟವಾಗುತ್ತಿರುವ ವೆಸ್ಪಾ ಜಿಟಿಎಸ್, ನಿರ್ವಹಣೆ ಜತೆಗೆ ಪ್ರೀಮಿಯಂ ಪ್ಯಾಕೇಜ್‌ಗಳನ್ನು ಪಡೆದುಕೊಂಡಿದೆ.

ಹಾಗಿದ್ದರೂ ವೆಸ್ಪಾ ಜಿಟಿಎಸ್, 946 ಮಾದರಿಗಿಂತಲೂ ಕಡಿಮೆ ದುಬಾರಿಯೆನಿಸಲಿದೆ.

ವೆಸ್ಪಾದ ಎಬಿಎಸ್ ಸೆನ್ಸಾರ್ ವ್ಯವಸ್ಥೆಯು ಮುಂಭಾಗ ಹಾಗೂ ಹಿಂಭಾಗದ ಚಕ್ರಗಳ ವೇಗತೆಯನ್ನು ಅಳೆಯಲಿದೆ. ಇದು ಉತ್ತಮ ಗ್ರಿಪ್ ಪ್ರದಾನ ಮಾಡಲಿದೆ

ಇನ್ನೊಂದೆಡೆ ಇಎಸ್‌ಎಸ್ ವ್ಯವಸ್ಥೆಯು, ಸಾಂಪ್ರದಾಯಿಕ ವೆಸ್ಪಾ ಸಿಂಗಲ್ ಸೈಡ್ ಫ್ರಂಟ್ ಸಸ್ಪೆಷನ್ ಜತೆ ಕೆಲಸ ಮಾಡಲಿದೆ. ಹಾಗೆಯೇ ಆರಾಮದಾಯಕ ಚಾಲನೆ ನೀಡಲಿದೆ.

ಇನ್ನು ಪಿಯಾಜಿಯೊ ಮಲ್ಟಿಮಿಡಿಯಾ ಫ್ಲ್ಯಾಟ್‌ಫಾರ್ಮ್ ಮುಖಾಂತರ ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಬಹುದಾದಿದೆ. ಇದು ರಿಯಲ್ ಟೈಮ್ ಮಾಹಿತಿ ಹಂಚಿಕೊಳ್ಳಲಿದೆ.

ವೇಗ, ಆವರ್ತನ, ಇಂಧನ ಕ್ಷಮತೆಯ ಹೊರತಾಗಿಯೂ ಪವರ್ ಹಾಗೂ ಟಾರ್ಕ್ ಮಾಹಿತಿಯನ್ನು ಈ ಡಿವೈಸ್ ಕೊಡಲಿದೆ. ಇದರಲ್ಲಿ ಯುಎಸ್‌ಬಿ ಪೋರ್ಟ್ ಕೂಡಾ ಇರಲಿದೆ.

ವೆಸ್ಪಾ ಜಿಟಿಎಸ್ ಹಾಗೂ ಜಿಟಿಎಸ್ ಸೂಪರ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.

ಇದು 278 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ವಾಲ್ವೆ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 22 ಅಶ್ವಶಕ್ತಿ (21.69 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಮೇಲೆ ತಿಳಿಸಿದ ಎಲ್ಲ ಸುರಕ್ಷಾ ವೈಶಿಷ್ಟ್ಯಗಳನ್ನು ಸ್ಕೂಟರ್‌ನಲ್ಲಿ ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿದೆ. ಈ ಪೈಕಿ ಕೆಲವೊಂದು ಫೀಚರ್ಸ್‌ಗಳನ್ನು ಭಾರತದಲ್ಲಿ ಲಾಂಚ್ ಆಗಲಿರುವ ವೆಸ್ಪಾ 946 ಸಹ ಪಡೆಯಲಿದೆ.


Click it and Unblock the Notifications