ಜಗತ್ತಿನ ಟಾಪ್ 10 ಮೊಟೊಜಿಪಿ ರೈಡರ್ಸ್

By Nagaraja

ಸ್ಪೀಡ್, ಏಕಾಗ್ರತೆ, ಛಲ, ಸಾಹಸ ರೈಡಿಂಗ್ ಜತೆಗೆ ಪ್ರಾಣವನ್ನೇ ಮುಡಿಪಾಗಿಟ್ಟುಕೊಂಡು ಶರವೇಗದಲ್ಲಿ ಟ್ರ್ಯಾಕ್‌ನಲ್ಲಿ ರುಯಿಂ ರುಯಿಂ ಶಬ್ದಗಳೊಂದಿಗೆ ಸಾಗುವ ಮೋಟಾರ್ ಬೈಕ್ ರೇಸ್ ಜಗತ್ತಿನ ಅತ್ಯಾದ್ಭುತ ರೇಸ್‌ಗಳಲ್ಲಿ ಒಂದಾಗಿದೆ.

ಜಗತ್ತಿನ ಅತ್ಯಂತ ರೋಮಾಂಚಕ ಮತ್ತು ಆಸಕ್ತಿದಾಯಕ ಕ್ರೀಡೆಯಾಗಿರುವ ಮೋಟಾರ್‌‌ಬೈಕ್ ರೇಸ್ ಇತ್ತೀಚೆಗಿನ ಕಾಲದಲ್ಲಿ ಭಾರತದಲ್ಲೂ ಅತ್ಯಂತ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದೆ.

ಮೊಟೊಜಿಪಿ (ಮೋಟಾರ್‌ಬೈಕ್) ರೇಸಿಂಗ್‌ನಲ್ಲಿ ಬೈಕರುಗಳು ಅತ್ಯಾದ್ಭುತ ರೈಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಇಂದಿನ ಈ ಲೇಖನದಲ್ಲಿ ಜಗತ್ತಿನ ಟಾಪ್ 10 ಮೊಟೊಜಿಪಿ ರೈಡರ್ಸ್‌ಗಳ ಪಟ್ಟಿಮಾಡಿ ಕೊಡಲಾಗಿದೆ. ಬೇಸರದ ಸಂಗತಿಯೆಂದರೆ ಭಾರತದ ಯಾವ ಸ್ಪರ್ಧಿ ಕೂಡಾ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಮುಂದಿನ ಬಾರಿ ಟಾಪ್ 10 ಪಟ್ಟಿ ಬಿಡುಗಡೆ ಮಾಡುವಾಗ ಭಾರತೀಯರೂ ಕಾಣಿಸಿಕೊಳ್ಳಲಿದ್ದಾರೆಂಬ ನಿರೀಕ್ಷೆ ನಮ್ಮದು...

ಜಗತ್ತಿನ ಟಾಪ್ 10 ಮೊಟೊಜಿಪಿ ರೈಡರ್ಸ್

ಜಗತ್ತಿನ ಟಾಪ್ 10 ಮೊಟೊಜಿಪಿ ರೈಡರ್ಸ್

ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ಜಗತ್ತಿನ ಟಾಪ್ 10 ಮೋಟಾರ್ ಬೈಕ್ ರೇಸರುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿರಿ...

10. Randy de Puniet

10. Randy de Puniet

ರಾಂಡಿ ತಮ್ಮ ಕೆರಿಯರ್ ಹೋಂಡಾ RS125R ಬೈಕ್‌ನಿಂದ ಆರಂಭಿಸಿದ್ದರು. 1998ನೇ ಇಸವಿಯಲ್ಲಿ ಅವರು ಫ್ರಾನ್ಸ್ ಚಾಂಪಿಯನ್‌ ಆಗಿ ಹೊರ ಬಂದಿದ್ದರು. 2006ರಲ್ಲಿ ಕವಾಸಕಿ ರೇಸಿಂಗ್ ತಂಡ ಸೇರಿದ್ದ ಅವರು 2008ರಲ್ಲಿ ಎಲ್‌ಸಿಆರ್ ಜತೆಗೂಡಿದ್ದರು.

9. Marco Simoncelli

9. Marco Simoncelli

ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್‌ನ ಸೆಪಾಂಗ್ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ದುರ್ಘಟನೆ ಸಾವಿಗೀಡಾಗಿದ್ದ ಮಾರ್ಕೊ, ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಮೊಟೊಜಿಪಿ ರೇಸಿಂಗ್ ಡ್ರೈವರುಗಳಲ್ಲಿ ಒಬ್ಬರಾಗಿದ್ದಾರೆ. 2002ನೇ ಇಸವಿಯಿಂದ ಕಳೆದ ಒಂದು ದಶಕದಷ್ಟು ಕಾಲ ರೇಸಿಂಗ್ ಜಗತ್ತಿನಲ್ಲಿ ಅವರು ತಮ್ಮ ಸಾನಿಧ್ಯವನ್ನು ಮೆರೆದಿದ್ದರು.

8. Nicky Hayden

8. Nicky Hayden

ನಿಕ್ಕಿ ಹೇಡನ್ ತಮ್ಮ ಮೊಟೊಜಿಪಿ ಕೆರಿಯರ್ 2003ರಲ್ಲಿ ಆರಂಭಿಸಿದ್ದರು. ಹೋಂಡಾ ಎಚ್‌ಆರ್‌ಸಿಗಾಗಿ ಹೋಂಡಾ ಆರ್‌ಸಿ211ವಿ ಸ್ಪರ್ಧಿಸಿದ್ದ ಅವರು 2006ರಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದರು.

7. Ben Spies

7. Ben Spies

ತನ್ನದೇ ಆದ ವಿಭಿನ್ನ ರೈಡಿಂಗ್ ಶೈಲಿ ಹೊಂದಿರುವ ಬೆನ್ ಸಜುಕಿ ಜಿಎಸ್‌ಎಕ್ಸ್‌ಆರ್-1000 ಬೈಕ್‌ನಲ್ಲಿ 2006ರಲ್ಲಿ ರೇಸ್ ಗೆದ್ದಿದ್ದರು.

6. Andrea Dovizioso

6. Andrea Dovizioso

ಸ್ಪೀಡ್ ಹುಚ್ಚುತನಕ್ಕೆ ಇಟಲಿಯನ್ನರು ಹೆಸರುವಾಸಿಯಾಗಿದ್ದಾರೆ. 2007ರಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ್ದ ಆಂಡ್ರಿಯಾ ನಮ್ಮ ಪಟ್ಟಿಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

5. Michael Doohan

5. Michael Doohan

ಮೈಕಲ್ ಅಥವಾ ಮಿಕ್ ವೃತ್ತಿ ನಿರತ ಆಸ್ಟ್ರೇಲಿಯಾ ರೇಸರ್ ಆಗಿದ್ದು, 1994ರಿಂದ 1998ರ ವರೆಗೆ ಸತತ ಐದು ಬಾರಿ ಗ್ರಾಂಡ್ ಪ್ರಿಕ್ಸ್ ಮೋಟಾರ್‌ಸೈಕಲ್ ರೋಡ್ ರೇಸಿಂಗ್ ವರ್ಲ್ಡ್ ಚಾಂಪಿಯನ್ ಎನಿಸಿಕೊಂಡಿದ್ದರು. ರೆಪ್ಸೊಲ್ ಹೋಂಡಾ ತಂಡದ ಸದಸ್ಯರಾಗಿರುವ ಮಿಕ್, 500ಸಿಸಿ ಎನ್‌ಎಸ್‌ಆರ್500 ಬೈಕ್ ರೈಡ್ ಮಾಡುತ್ತಿದ್ದರು.

4. Casey Stoner

4. Casey Stoner

1985 ಜನಿಸಿದ್ದ ಸ್ಟೋನರ್, 2007 ಹಾಗೂ 2011ರಲ್ಲಿ ಮೊಟೊಜಿಪಿ ವಲ್ಡ್ ಚಾಂಪಿಯನ್ ಎನಿಸಿಕೊಂಡಿದ್ದರು. ಇದು ಗೆಲುವು ಅನುಕ್ರಮವಾಗಿ ಡುಕಾಟಿ ಕೋರ್ಸೆ ಹಾಗೂ ರೆಪ್ಸೊಲ್ ಹೋಂಡಾ ತಂಡದಿಂದ ದಾಖಲಾಗಿತ್ತು. ಹಾಗೆಯೇ ಡುಕಾಟಿ ಜಿಪಿ7 ಹಾಗೂ ಹೋಂಡಾ ಆರ್‌ಸಿ212ವಿ ಅವರ ಪಾಲಿಗೆ ಅದೃಷ್ಟ ತಂದುಕೊಟ್ಟಿತ್ತು.

3. Dani Pedrosa

3. Dani Pedrosa

ಆಕಾರದಲ್ಲಿ ಕಿರಿದಾಗಿ ಕಾಣಿಸಿದ್ದರೂ ತನ್ನ ರೈಡಿಂಗ್ ಕೌಶಲ್ಯದಲ್ಲಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿರುವ 28ರ ಹರೆಯದ ಡ್ಯಾನಿ, 250ಸಿಸಿ ವಿಭಾಗದಲ್ಲಿ ಗ್ರಾಂಡ್ ಪಿಕ್ಸ್ ವಿಶ್ವ ಚಾಂಪಿಯನ್ ಗೆದ್ದ ಯುವ ಸ್ಪರ್ಧಿ ಎನಿಸಿಕೊಂಡಿದ್ದರು. ಹೋಂಡಾ RSW250 ಡ್ರೈವ್ ಮಾಡುತ್ತಿರುವ ಅವರು 2004 ಹಾಗೂ 2005ರಲ್ಲಿ ಸತತವಾಗಿ ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ ಆಲಂಕರಿಸಿದ್ದರು.

2. Jorge Lorenzo

2. Jorge Lorenzo

ಪ್ರಸ್ತುತ ಯಮಹಾ ಫ್ಯಾಕ್ಟರಿ ತಂಡದ ಸದಸ್ಯರಾಗಿರುವ ಲಾರೆನ್ಜೊ, 2006, 2007 ಹಾಗೂ 2010ರಲ್ಲಿ 250ಸಿಸಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು. ಈ ಪೈಕಿ ಮೊದಲೆರಡು ಸಾಧನೆಗಳು ಎಪ್ರಿಲಿಯಾ ಆರ್‌ಎಸ್‌ಡಬ್ಲ್ಯು 250 ಬೈಕ್‌ನಿಂದ ದಾಖಲಾಗಿದ್ದರೆ ಕೊನೆಯದ್ದು ಯಮಹಾ ವೈಝಡ್‌ಆರ್-ಎಂ ಮೋಟಾರ್ ಬೈಕ್‌ನಿಂದ ದಾಖಲಾಗಿತ್ತು.

1. Valentino Rossi

1. Valentino Rossi

ವ್ಯಾಲೆಂಟಿನೊ ರೊಸ್ಸಿ ಪ್ರತಿಭೆಯನ್ನು ಯಾರಿಂದ ಮೀರಿಸಲು ಸಾಧ್ಯ? ಇವರನ್ನು ಬೇಕಿದ್ದರೆ ಸರ್ವಕಾಲಿಕ ಮೊಟೊಜಿಪಿ ರೇಸರ್ ಎಂದು ಬಣ್ಣಿಸಬಹುದು. ಯಾಕೆಂದರೆ ಅವರ ಹೆಸರಲ್ಲಿ ಒಂಬತ್ತು ಗ್ರಾಂಡ್ ಪ್ರಿಕ್ಸ್ ವಿಶ್ವ ಚಾಂಪಿಯನ್ ಪ್ರಶಸ್ತಿಗಳಿವೆ. ಈ ಪೈಕಿ ಏಳು ಪ್ರಶಸ್ತಿಗಳು ಪ್ರೀಮಿಯಂ ವಿಭಾಗದಲ್ಲಿ ದಾಖಲಾಗಿದ್ದವು. ರೊಸ್ಸಿ 126ಸಿಸಿ, 250ಸಿಸಿ ಹಾಗೂ 500ಸಿಸಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಸಾಧನೆ ಮಾಡಿದ್ದರೆ. ಇದೇ ಕಾರಣಕ್ಕೆ ನಂ.1 ಮೊಟೊಜಿಪಿ ರೈಡರ್ ಎನಿಸಿಕೊಂಡಿದ್ದಾರೆ.

More from DriveSpark

Article Published On: Saturday, July 20, 2013, 11:31 [IST]
English summary
Ever wondered about best riders from Moto GP (Motorcycle Race). Here we are going to give a list of world's top 10 best and fastest Moto GP riders, check out in pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+