ಬರುತ್ತಿದೆ ಯಮಹಾ ಮಲ್ಟಿ ವೀಲರ್ ಬೈಕ್
ಹೆಸರಲ್ಲಿ ಸೂಚಿಸಿರುವಂತೆಯೇ ಮಲ್ಟಿ ವೀಲರ್ ಬೈಕ್ ಶೋಧನೆಯಲ್ಲಿ ಜಗತ್ತಿನ ಮುಂಚೂಣಿಯ ದ್ವಿಚಕ್ರ ಉತ್ಪಾದಕ ಸಂಸ್ಥೆಯಾದ ಯಮಹಾ ಕಾರ್ಯ ಮಗ್ನವಾಗಿದ್ದು, ಮುಂದಿನ ವರ್ಷ ಬಿಡುಗಡೆಗೊಳಿಸುವ ಯೋಜನೆ ಹೊಂದಿದೆ.
ಕೆಳಗಡೆಯ ಚಿತ್ರದಲ್ಲಿರುವಂತೆಯೇ ಯಮಹಾ ಲೀನಿಂಗ್ ಮಲ್ಟಿ ವೀಲರ್ (ಎಲ್‌ಎಂಡಬ್ಲ್ಯು) ಬೈಕ್ ತಿರುಗು ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಪಿಯಾಜಿಯೊ ಎಂಪಿ3 ಕಾನ್ಸೆಪ್ಟ್ ಸಾಮತ್ಯೆಯನ್ನು ಹೊಂದಿದೆ.
ಪ್ರಸಕ್ತ ವರ್ಷದಲ್ಲೇ ಸಾಗಲಿರುವ ಟೊಕಿಯೊ ಮೋಟಾರ್ ಶೋದಲ್ಲಿ ಈ ತ್ರಿಚಕ್ರ ಬೈಕ್ ಪ್ರದರ್ಶಿಸುವುದಾಗಿ ಜಪಾನ್ ಮೂಲದ ಯಮಹಾ ಕಂಪನಿ ಪ್ರಕಟಿಸಿದೆ. ನಿಮ್ಮ ಮಾಹಿತಿಗಾಗಿ, ಟೊಕಿಯೊ ಮೋಟಾರ್ ಶೋ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಸಾಗಲಿದೆ. ಹಾಗೆಯೇ 2013 ಇಐಸಿಎಂಎ ಆಟೋ ಶೋದಲ್ಲೂ ಅನಾವರಣಗೊಳ್ಳುವ ಸಾಧ್ಯತೆಗಳಿವೆ.

ಯಮಹಾ ಲೀನಿಂಗ್ ಮಲ್ಟಿ ವೀಲರ್ ಸ್ಪೋರ್ಟಿ ಲುಕ್ ಪಡೆದುಕೊಳ್ಳಲಿದೆ. ಇದು ಪಿಯಾಜಿಯೊ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದೆ.

ಪಿಯಾಜಿಯೊ ಎಂಪಿ3 ತ್ರಿಚಕ್ರ ಬೈಕ್

ಬೇಸರದ ಸಂಗತಿಯೆಂದರೆ ಟೆಸ್ಸೆರಾಕ್ಟ್ (Tesseract) ಕಾನ್ಸೆಪ್ಟ್ ಯಮಹಾ ಉತ್ಪಾದಿಸುವ ಸಾಧ್ಯತೆಗಳು ಕಡಿಮೆಯಾಗಿದೆ.

ಪ್ರಾಯೋಗಿಕವಾಗಿ ಈ ತ್ರಿಚಕ್ರ ವಾಹನ ಎಷ್ಟರ ಮಟ್ಟಿಗೆ ಯಶ ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.



Click it and Unblock the Notifications








