ಯಮಹಾ 113 ಸಿಸಿ ಆಲ್ಫಾ ಸ್ಕೂಟರ್ ಲಾಂಚ್; ದರ ಎಷ್ಟು?
2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ನೂತನ 113 ಸಿಸಿ ಆಲ್ಫಾ ಸ್ಕೂಟರನ್ನು ಲಾಂಚ್ ಮಾಡಿದೆ. ಇದರ ಎಕ್ಸ್ ಶೋ ರೂಂ ದರ 49,518 ರು.ಗಳಾಗಿವೆ.
2014 ಆಟೋ ಎಕ್ಸ್ ಪೋ ಲೈವ್
ಯಮಹಾದ ನೂತನ ಆಲ್ಫಾ ಸ್ಕೂಟರ್ ಪ್ರಮುಖವಾಗಿಯೂ ಆಕ್ಟಿವ್, ಜೂಪಿಟರ್ ಮತ್ತು ಆಕ್ಸೆಸ್ ಆವೃತ್ತಿಗಳಿಗೆ ಪೈಪೋಟಿ ಒಡ್ಡಲಿದೆ. ಮಹಿಳೆಯರು ಸೇರಿದಂತೆ ಪುರುಷರನ್ನು ಗುರಿಯಾಗಿರಿಸಿಕೊಂಡು ಯಮಹಾ ಆಲ್ಫಾ ಮಾರುಕಟ್ಟೆಗೆ ಅಪ್ಪಳಿಸಲಿದೆ.

ರೇ ತಲಹದಿಯಲ್ಲಿ ನಿರ್ಮಾಣವಾಗಿರುವ ಈ ಸ್ಕೂಟರ್, ಹೋಂಡಾ ಆಕ್ಟಿವಾ, ಟಿವಿಎಸ್ ಜೂಪಿಟರ್ ಮತ್ತು ಸುಜುಕಿ ಆಕ್ಸೆಸ್‌ಗೆ ಸಮಾನವಾದ ದೇಹ ಶೈಲಿ ಪಡೆದಿದೆ.

ವಾರ್ಷಿಕವಾಗಿ 2,00,000 ಯುನಿಟ್ ಮಾರಾಟದ ಗುರಿಯನ್ನು ಆಲ್ಫಾ ಮೂಲಕ ಯಮಹಾ ಹೊಂದಿದೆ.

ಪ್ರಸ್ತುತ ರೇ ಮತ್ತು ರೇ ಝಡ್ ಸ್ಕೂಟರ್ ಆವೃತ್ತಿಗಳು ಮಾತ್ರ ಯಮಹಾದಿಂದ ದೇಶದಲ್ಲಿ ಲಭ್ಯವಿದೆ. ಈ ಪಟ್ಟಿ ಇನ್ನು ಬೆಳೆದು ನಿಲ್ಲಲಿದೆ.

113 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಟು ವಾಲ್ವೆ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿರುವ ಯಮಹಾ ಆಲ್ಪಾ 7.1 ಪಿಎಸ್ ಪವರ್ (8.1 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇನ್ನು ಸಿಯಾಮ್ ಮಾನ್ಯತೆ ಪ್ರಕಾರ ಯಮಹಾ ಆಲ್ಫಾ ಪ್ರತಿ ಲೀಟರ್‌ಗೆ 62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಕಲರ್ ವೆರಿಯಂಟ್
ಬ್ಲ್ಯಾಕ್, ಗ್ರೇ, ವೈಟ್, ರೆಡ್ ಮತ್ತು ಮ್ಯಾಗ್ನೆಟಾ.


Click it and Unblock the Notifications








