ಯಮಹಾದಿಂದ ಪ್ರಪ್ರಥಮ 250ಸಿಸಿ ಆರ್ ಸಿರೀಸ್ ಬೈಕ್ ಲಾಂಚ್

By Nagaraja

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ತನ್ನ ಮೊತ್ತ ಮೊದಲ 250 ಸಿಸಿ ಆರ್ ಸಿರೀಸ್ ಬೈಕನ್ನು ಇಂಡೋನೇಷ್ಯಾದಲ್ಲಿ ಲಾಂಚ್ ಮಾಡಿದೆ. ಪ್ರಸ್ತುತ ಬೈಕ್ ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ಪ್ರವೇಶಶಿಸಲಿದೆಯೇ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮೊದಲ ಬಾರಿಗೆ ಟೊಕಿಯೋ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಯಮಹಾ ವೈಝಡ್‌ಎಫ್-ಆರ್25, ತನ್ನ ಒಡಹುಟ್ಟಿದವರಾದ ಶಕ್ತಿಶಾಲಿ ಆರ್1, ಆರ್6 ಅಷ್ಟೇ ಯಾಕೆ ಎಂ ಮೊಟೊಜಿಪಿ ಬೈಕ್‌ನಿಂದ ಸ್ಫೂರ್ತಿ ಪಡೆದುಕೊಂಡಿದೆ. ಅಂದ ಹಾಗೆ ಇಂಡೋನೇಷ್ಯಾದಲ್ಲಿ ನೂತನ ಯಮಹಾ ವೈಝಡ್‌ಎಫ್-ಆರ್25 ಬೆಲೆ 2.71 ಲಕ್ಷ ರು.ಗಳಷ್ಟಿದೆ.

ಯಮಹಾದಿಂದ ಪ್ರಪ್ರಥಮ 250ಸಿಸಿ ಆರ್ ಸಿರೀಸ್ ಬೈಕ್ ಲಾಂಚ್

ನಾವಿಲ್ಲಿ ನಿಮಗೆ ಸ್ಪಷ್ಟನೆ ನೀಡಲು ಬಯಸುತ್ತಿದ್ದು, ಪ್ರಸಕ್ತ ಸಾಲಿನಲ್ಲೇ ಈ ಬಹುನಿರೀಕ್ಷಿತ ಬೈಕ್ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಎಂಜಿನ್

ಎಂಜಿನ್

ನೂತನ ಯಮಹಾ ವೈಝಡ್‌ಎಫ್-ಆರ್25 ಆವೃತ್ತಿಯಲ್ಲಿ ಯೂನಿಕ್ ಡೈ ಕಾಸ್ಟಿಂಗ್ ಅಲ್ಯೂಮಿನಿಯಂ ಸಿಲಿಕಾನ್ (DiAsil) ಸಿಲಿಂಡರ್ ಬಳಕೆಯಾಗಿದ್ದು, ಭಾರ ಕಡಿತಗೊಳಿಸಲಿದೆ. ಇದೇ ಮೊದಲ ಬಾರಿಗೆ 2 ಸಿಲಿಂಡರ್ ಎಂಜಿನ್‌ನಲ್ಲಿ ಯಮಹಾ ಇಂತಹದೊಂದು ತಂತ್ರಜ್ಞಾನ ಬಳಕೆ ಮಾಡುತ್ತಿದೆ.

ನಿರ್ವಹಣೆ

ನಿರ್ವಹಣೆ

ಇದರಲ್ಲಿ ಆಳವಡಿಸಲಾಗಿರುವ 249 ಸಿಸಿ, 2 ಸಿಲಿಂಡರ್, ಫೋರ್ ಸ್ಟ್ರೋಕ್, ಲಿಕ್ವಿಡ್ ಕೂಲ್ಡ್ ಎಂಜಿನ್ ಪ್ರತಿ ನಿಮಿಷಕ್ಕೆ 12000 ಆವರ್ತನಕ್ಕೆ 35 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಪ್ರತಿ ನಿಮಿಷಕ್ಕೆ 10,000 ಆವರ್ತನದಲ್ಲಿ 22.6 ಎನ್‌ಎಂ ಟಾರ್ಕ್ ನೀಡಲಿದೆ. ಪ್ರಸ್ತುತ ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

ವಿನ್ಯಾಸ

ವಿನ್ಯಾಸ

ಪ್ರಸ್ತುತ ಬೈಕ್ ಆಕರ್ಷಕ ಹೆಡ್ ಲ್ಯಾಂಪ್ ಪಡೆದುಕೊಂಡಿದ್ದು ಮನಸೆಳೆಯುವಂತಿದೆ. ಹಾಗೆಯೇ ಬಹಳ ನಾಜೂಕಾಗಿ ಯುವ ಜನರನ್ನು ಸೆಳೆಯುವ ಪ್ರಯತ್ನ ಮಾಡಿದೆ.

ಯಮಹಾದಿಂದ ಪ್ರಪ್ರಥಮ 250ಸಿಸಿ ಆರ್ ಸಿರೀಸ್ ಬೈಕ್ ಲಾಂಚ್

ಯಮಹಾ ಸಂಸ್ಥೆಯ ಪ್ರಕಾರ ವೈಝಡ್‌ಎಫ್-ಆರ್25 ಆವೃತ್ತಿಯಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದರೂ ಪ್ರಾಯೋಗಿಕವಾಗಿಯೂ ಉತ್ತಮ ಚಾಲನಾ ಅನುಭವ ಪ್ರದಾನ ಮಾಡುತ್ತದೆ ಎಂದಿದ್ದಾರೆ.

ಆಯಾಮ

ಆಯಾಮ

ಹಗುರ ಭಾರದ ಯಮಹಾ ವೈಝಡ್‌ಎಫ್-ಆರ್25 166 ಕೆ.ಜಿ ಭಾರವನ್ನಷ್ಟೇ ಹೊಂದಿರಲಿದೆ. ಇದು ಇದು 2.09 ಎಂ x 0.720 ಎಂ x 1.135 ಎಂ ಹಾಗೆಯೇ 0.780 ಎಂ ನಿಷ್ಪತ್ತಿಯನ್ನು ಹೊಂದಿದೆ. ಇವೆಲ್ಲದರ ಜೊತೆಗೆ 14 ಲೀಟರ್ ಇಂಧನ ಟ್ಯಾಂಕ್ ಪಡೆಯಲಿದೆ.

ಸಸ್ಪೆಷನ್, ಬ್ರೇಕ್

ಸಸ್ಪೆಷನ್, ಬ್ರೇಕ್

ಇದು ಮುಂದುಗಡೆ 41 ಎಂಎಂ ಇನ್ನರ್ ಟ್ಯೂಬ್ ಹಾಗೂ ಹಿಂದುಗಡೆ ಸ್ವಿಂಗ್ ಆರ್ಮ್ ಪಡೆದುಕೊಂಡಿದೆ. ಅಲ್ಲದೆ ಎದುರುಗಡೆ 298 ಎಂಎಂ ಬ್ರೇಕ್ ಜತೆ ಡ್ಯುಯಲ್ ಪಿಸ್ತಾನ್ ಹಾಗೂ ಹಿಂದುಗಡೆ ಸಿಂಗಲ್ ಪಿಸ್ತಾನ್ 220 ಎಂಎಂ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

More from DriveSpark

Article Published On: Wednesday, May 21, 2014, 10:30 [IST]
English summary
It's here. The Yamaha YZF-R25. The company's first 250cc R-Series motorcycle. First showcased as a concept last year during the Tokyo Motor Show, the production version of the Yamaha YZF-R25 has now been launched in Indonesia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+