ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಅಮೆರಿಕ ಮೂಲದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಜೀರೋ ಮೋಟಾರ್‌ಸೈಕಲ್ಸ್ ಭಾರತಕ್ಕೆ ಇ-ಮೋಟಾರ್ ಬೈಕ್ ಪರಿಚಯಿಸಲಿದೆಯೇ ಎಂಬುದು ವಾಹನ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ವಿಶ್ವದ ಅತ್ಯಂತ ಶ್ರೇಷ್ಠ ಇ-ಬೈಕ್ ಉತ್ಪಾದಕ ಸಂಸ್ಥೆ ಎನಿಸಿಕೊಂಡಿರುವ ಜೀರೋ ಮೋಟಾರ್‌ಸೈಕಲ್ಸ್ ಉಪಸ್ಥಿತಿಯ ಕೊರತೆ ದೇಶದ ಮಾರುಕಟ್ಟೆಯನ್ನು ಕಾಡುತ್ತಿದೆ. ಯಾಕೆಂದರೆ ಗರಿಷ್ಠ ನಿರ್ವಹಣೆ, ಚಾರ್ಜಿಂಗ್ ಹಾಗೂ ಜೀವಮಾನ ಬಾಳ್ವಿಕೆ ಈ ಎಲೆಕ್ಟ್ರಿಕ್ ಬೈಕ್‌ನ ವಿಶೇಷತೆಯಾಗಿದೆ.

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಗೆ ಇ-ಬೈಕಿನ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಜೀರೋ ಎಸ್ ಹಾಗೂ ಜೀರೋ ಡಿಎಸ್ ಮೋಟಾರ್ ಬೈಕ್‌ಗಳು ಜೀರೋ ಮೋಟಾರ್ ಸೈಕಲ್ಸ್ ಉತ್ಪಾದಿಸುತ್ತಿರುವ ಪ್ರಮುಖ ಉತ್ಪನ್ನಗಳಾಗಿವೆ.

ಅಷ್ಟೇ ಅಲ್ಲದೆ 2013 ಸಾಲಿನ ಯುರೋಪ್‌ನ ಶ್ರೇಷ್ಠ 'ಇ ಮೋಟಾರ್ ಬೈಕ್' ಪ್ರಶಸ್ತಿಗೂ ಜೀರೋ ಎಸ್ ಭಾಜನವಾಗಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಈ ಸಾಧನೆ ಮಾಡಿದಂತಾಗಿದೆ. ವಿದ್ಯುತ್ ಚಾಲಿತ ಬೈಕ್‌ಗಳ ಸಾಮರ್ಥ್ಯವನ್ನು ಇದು ನಿರೂಪಿಸಿದೆ.

ಭವಿಷ್ಯ ಸಂಚಾರದ ವಾಹಕ ಎಂದೇ ವಿದ್ಯುತ್ ಚಾಲಿತ ವಾಹನಗಳನ್ನು ವಿಶ್ಲೇಷಿಸಲಾಗುತ್ತದೆ. ಇದಲ್ಲದೆ ಎಫ್‌ಎಕ್ಸ್, ಎಕ್ಸ್‌ಯು, ಎಂಎಕ್ಸ್‌ಗಳಂತಹ ಡರ್ಟ್ ಬೈಕ್‌ಗಳನ್ನು ಜೀರೋ ಮೋಟಾರ್‌ಸೈಕಲ್ಸ್ ಹೊಂದಿದ್ದು, ತನ್ನ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಎನಿಸಿಕೊಂಡಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಝಡ್ ಫೋರ್ಸ್ ಬ್ಯಾಟರಿ ಪ್ಯಾಕ್‌ನಲ್ಲಿ ಲಭ್ಯವಾಗುವ ಜೀರೋ ಎಸ್ ಇ-ಬೈಕ್ ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಲಭ್ಯ. ಇದರ ಮೊದಲ ವೆರಿಯಂಟ್ ಪ್ರಭಾವತ್ಮಾಕ 165 ಕೀ.ಮೀ. ಹಾಗೂ ಎರಡನೇ ವೆರಿಯಂಟ್ ಗರಿಷ್ಠ 220 ಕೀ.ಮೀ ರೇಂಜ್ ನೀಡುತ್ತದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಸಾಮಾನ್ಯ ಎಲೆಕ್ಟ್ರಿಕ್ ಪ್ಲಗ್‌ಗಳಲ್ಲಿ ಇದನ್ನು ಚಾರ್ಜ್ ಮಾಡಿಸಬಹುದಾಗಿದ್ದು, ಕೇವಲ ಒಂದು ಗಂಟೆಯೊಳಗೆ ಶೇಕಡಾ 90ರಷ್ಟು ಚಾರ್ಜಿಂಗ್ ಪೂರ್ಣಗೊಳ್ಳುತ್ತದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಇನ್ನು ಇದರ ಝಡ್-ಫೋರ್ಸ್ ಬ್ಯಾಟರಿ 4,97,287 ಕೀ.ಮೀ ತನಕ ಬಾಳ್ವಿಕೆ ಬರಲಿದೆ. ಅಂದರೆ ಜೀರೋ ಎಸ್ ಇ-ಬೈಕ್ ಜೀವಮಾನ ಪರ್ಯಂತ ಬಳಕೆ ಮಾಡಬಹುದಾಗಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಇದರ ಝಡ್-ಫೋರ್ಸ್ ಮೋಟಾರನ್ನು ಸಂಪೂರ್ಣವಾಗಿಯೂ ಜೀರೋ ಮೋಟಾರ್ ಸೈಕಲ್ಸ್ ಅಭಿವೃದ್ಧಿಪಡಿಸಿದ್ದು, 54 ಹಾರ್ಸ್ ಪವರ್ ಉತ್ಪಾದಿಸುತ್ತದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಜೀರೋ ಪ್ರಕಾರ ಇದರ ಝಡ್-ಫೋರ್ಸ್ ಎಂಜಿನ್ ಜಗತ್ತಿನ ಅತ್ಯಂತ ಸಮರ್ಥ ಹಾಗೂ ಏರ್ ಕೂಲ್ಡ್ ಎಂಜಿನ್ ಹೊಂದಿದೆ. ಇನ್ನು ಇತರ ಇ-ಬೈಕ್‌ಗಳಲ್ಲಿ ಇರುವಂತೆಯೇ ಬ್ರೇಕಿಂಗ್ ಹಾಗೂ ಆವೇಗ ಕಡಿಮೆ ಮಾಡುವಾಗ ಸ್ವಯಂಚಾಲಿತವಾಗಿ ಚಾರ್ಜ್ ಆಗಲಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಹಾಗೆಯೇ ಜೀರೋ ಎಸ್ ಬೈಕ್ ಪ್ರತಿ ಗಂಟೆಗೆ 152 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಇನ್ನು ಹಿಂಬದಿ ಟೈರ್‌ನಲ್ಲಿ ಕಾರ್ಬನ್ ಫೈಬರ್ ಬೆಲ್ಟ್ ಆಳವಡಿಸಲಾಗಿದ್ದು, ಇದರಿಂದಾಗಿ ಘರ್ಷಣೆ ಕಡಿಮೆಯಾಗಲಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಇಕೊ ಹಾಗೂ ಸ್ಪೋರ್ಟ್‍ಗಳೆಂಬ ಎರಡು ಡ್ರೈವಿಂಗ್ ಮೋಡ್‌ಗಳಲ್ಲಿ ಇದು ಲಭ್ಯವಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಇದು ನಗರ ಪ್ರದೇಶದ ಚಾಲನೆಗೆ ಉತ್ತಮವಾಗಿರಲಿದೆ. ಯಾಕೆಂದರೆ ಸಿಟಿ ಪ್ರದೇಶದಲ್ಲಿ ಟ್ರಾಫಿಕ್ ಜಾಸ್ತಿಯಾಗಿದ್ದರಿಂದ ಎನರ್ಜಿ ಸೇವ್ ಮಾಡಲು ಸಾಧ್ಯವಾಗಲಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಈ ಇ-ಬೈಕ್ ದರ 7ರಿಂದ 9 ಲಕ್ಷ ಅಸುಪಾಸಿನಲ್ಲಿದೆ. ದರವು ಬ್ಯಾಟರಿಯನ್ನು ಅವಲಂಬಿಸಿರಲಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಪ್ರಸ್ತುತ ಜೀರೊ ಎಸ್ ಭಾರತ ಮಾರುಕಟ್ಟೆಯನ್ನು ಯಾವಾಗ ಪ್ರವೇಶಸಲಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಮಹೀಂದ್ರ ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೋಲಿಸಿದರೆ ಜೀರೋ ಮೋಟಾರ್ ಸೈಕಲ್ಸ್ ಬ್ಯಾಟರಿ ಬಾಳ್ವಿಕೆ ಹೆಚ್ಚಾಗಿದೆ. ಇದೇ ಇದರ ಯಶಸ್ಸಿಗೆ ಕಾರಣವಾಗಿದೆ.

ಜೀರೋ ಇ-ಮೋಟಾರ್ ಬೈಕ್ ಭಾರತಕ್ಕೆ ಬರುತ್ತಾ?

ಇದೀಗ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Zero S

Zero S

Zero S

Zero S

Zero S

Zero S

Zero S

Zero S

Zero S

Zero S

Zero S

Zero S

Zero S

Zero S

Article Published On: Tuesday, May 21, 2013, 15:02 [IST]
English summary
Zero Motorcycles is an US based electric motorcycle manufacturer, widely considered to be the best production e-bike maker in the world. While Zero Motorcycles may not have a presence in India, we think it has the potential to build the perfect e-bike for the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+