ಮರ್ಸಿಡಿಸ್ಸಿಗೆ ಮುನ್ನಡೆ ಬಿಟ್ಟುಕೊಡದ ಬಿಎಂಡಬ್ಲ್ಯು

By * ಪ್ರವೀಣ್ ಚಂದ್ರ

BMW India Car Sales report
ನವದೆಹಲಿ, ಜ.17: ದೇಶದ ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಸತತವಾಗಿ ನಾಯಕನಾಗಿ ಮುನ್ನಡೆದಿದೆ. 2010ರಲ್ಲಿ ಕಂಪನಿಯು 6,246 ಕಾರು ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ ಮಾರಾಟಕ್ಕಿಂತ ಶೇಕಡಾ 23ರಷ್ಟು ಏರಿಕೆ ದಾಖಲಿಸಿದೆ. 2009ರಲ್ಲಿ ಕಂಪನಿಯ ಪ್ರತಿಸ್ಪರ್ಧಿ ಮರ್ಸಿಡಿಸ್ ಬೆಂಝ್ ಸುಮಾರು 5,819 ಕಾರು ಮಾರಾಟ ಮಾಡಿತ್ತು.

ಕಳೆದೆರಡು ವರ್ಷಗಳಿಂದ ಬಿಎಂಡಬ್ಲ್ಯು ಇಂಡಿಯಾದ ಐಷಾರಾಮಿ ಕಾರುಗಳ ವಿಭಾಗದಲ್ಲಿ ಅತ್ಯಧಿಕ ಮಾರಾಟ ಕಾಣುತ್ತಿದ್ದು ಈ ವಿಭಾಗದಲ್ಲಿ ಕಂಪನಿಯ ಒಟ್ಟಾರೆ ಪಾಲು ಶೇಕಡಾ 40ಕ್ಕಿಂತಲೂ ಹೆಚ್ಚಾಗಿದೆ.

"ಭವಿಷ್ಯದ ಕುರಿತು ಕಂಪನಿ ಎಚ್ಚರಿಕೆಯಿಂದ ರೂಪಿಸಿದ ಕಾರ್ಯತಂತ್ರಗಳು ಮಾರಾಟ ಹೆಚ್ಚಳಕ್ಕೆ ನೆರವಾಗಿದೆ' ಕಂಪನಿಯ ವಕ್ತಾರರು ಹೇಳಿಕೊಂಡಿದ್ದಾರೆ.

ಐಷಾರಾಮಿ ಕಾರುಗಳ ವಿಭಾಗದಲ್ಲಿ ಬಿಎಂಡಬ್ಲ್ಯು3 ಸೀರಿಸ್ ಕಾರು ಮಾರಾಟ 2,432 ಯೂನಿಟ್ ಗೆ ತಲುಪಿದ್ದು, ಶೇಕಡ 51ರಷ್ಟು ಏರಿಕೆ ಕಂಡಿದೆ. ಬಿಎಂಡಬ್ಲ್ಯು 7 ಸೀರಿಸ್ ಮಾರಾಟ 545 ಯೂನಿಟ್ ಅಂದರೆ ಶೇಕಡಾ 53ರಷ್ಟು ಏರಿಕೆ ದಾಖಲಿಸಿದೆ. ಉಳಿದಂತೆ ಬಿಎಂಡಬ್ಲ್ಯು 6ಸೀರಿಸ್ 12 ಯೂನಿಟ್, 187 ಎಕ್ಸ್ 1 ಕಾರ್, ಬಿಎಂಡಬ್ಲ್ಯು ಎಕ್ಸ್3 28 ಯೂನಿಟ್ ಮತ್ತು ಬಿಎಂಡಬ್ಲ್ಯು ಎಕ್ಸ್5ನ 228 ಯೂನಿಟ್ ಮಾರಾಟಗೊಂಡಿವೆ. [ಆಟೋಮೊಬೈಲ್]

Most Read Articles

Kannada
English summary
BMW India has achieved a leadership position in the luxury car segment in India for the second consecutive year selling 6, 246 cars in the year 2010, a 73 percent growth over 2009. Arch-rival, Mercedes-Benz sold 5819 cars in the same period. In 2010, BMW India achieved a market share of over 40% in the country’s luxury car segment.
Story first published: Monday, January 17, 2011, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X