HSRP ನಂಬರ್ ಪ್ಲೇಟ್‌ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
ರಾಜ್ಯ ಸರ್ಕಾರ ವಾಹನಗಳ ನಂಬರ್‌ಪ್ಲೇಟ್ ಅನ್ನು HSRP ನಂಬರ್ ಪ್ಲೇಟ್ ಆಗ ಬದಲಿಸಲು ಫೆಬ್ರವರಿ ತಿಂಗಳಲ್ಲಿ ಗಡುವನ್ನು ನೀಡಿತ್ತು. ಏಕರೂಪದ ನಂಬರ್‌ಪ್ಲೇಟ್ ಬಳಕೆಯಾಗಬೇಕು ಎಂಬ ಕಾರಣದಿಂದಾಗಿ ಭಾರತ ಸರ್ಕಾರ ಈ HSRP ನಂಬರ್ ಪ್ಲೇಟ್ ಅನ್ನು ದೇಶದೆಲ್ಲೆಡೆ ಜಾರಿಗೆ ತಂದಿತ್ತು.
ಇದೀಗ ಈ ನಂಬರ್ ಪ್ಲೇಟ್ ಅನ್ನು ನೀವು ಬುಕ್ ಮಾಡಿಲ್ಲವಾದರೆ, ಇತ್ತ ಗಮನಿಸಿ. ಕರ್ನಾಟಕ ಸರ್ಕಾರ ಕನ್ನಡಿಗರು ಈ ನಂಬರ್‌ಪ್ಲೇಟ್ ಅನ್ನು ಅಳವಡಿಸಲು ಮೇ ತಿಂಗಳ 31ನೇ ದಿನಾಂಕದವರೆಗೆ ಗಡುವನ್ನು ನೀಡಿದೆ. ಈಗಾಗಲೇ ಹಲವರು ಈ HSRP ನಂಬರ್ ಪ್ಲೇಟ್‌ಗಾಗಿ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿದ್ದು, ಸಾಕಷ್ಟು ಮಂದಿ ಇನ್ನೂ ಸಹ ಇದರತ್ತ ಗಮನವೇ ಹರಿಸಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಈ HSRP ನಂಬರ್ ಪ್ಲೇಟ್ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವರಿಗೆ ಆಗುತ್ತಿರುವ ವಂಚನೆ ಬಗ್ಗೆಯೂ ಸಾರಿಗೆ ಇಲಾಖೆ ಕರ್ನಾಟಕದ ಜನತೆಗೆ ವಿವರಣೆ ನೀಡಿದೆ. ಇದರಲ್ಲಿ ಕೆಲವರು ಮೋಸ ಮಾಡಿ ವಂಚನೆ ಮಾಡುತ್ತಿದ್ದಾರೆ ಎಂದು ಸಂಸ್ಥೆ ಜನರಿಗೆ ವಿವರಿಸಿದೆ. ಸೈಬರ್ ಅಪರಾಧಿಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿ ಪ್ರಕ್ರಿಯೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಇಲಾಖೆ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಕೆಲ ನಕಲಿ ಲಿಂಕ್ ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯುವಂತಹ ವಂಚನೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ನೋಂದಣಿಗೆ ಅಂತರ್ಜಾಲದಲ್ಲಿ ಸಾಕಷ್ಟು ಸುಳ್ಳು ಲಿಂಕ್‌ಗಳು ಸಹ ಸೃಷ್ಟಿಯಾಗಿದ್ದು, ಅದನ್ನು ಕ್ಲಿಕ್ ಮಾಡಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೆಲ್ಲ ಒಂದು ರೂಪಾಯಿ ಉಳಿಯದೆ ಮಾಯವಾಗುತ್ತದೆ ಎನ್ನಲಾಗಿದೆ.

ಸದ್ಯಕ್ಕೆ ನೀವು ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ಪಡೆಯಲು ನೀವು ಕೇವಲ SIAM ಅಥವಾ ಸೊಸಯಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನುಫಾಕ್ಚರ್ಸ್ ಔದ್ಯೋಗಿಕ ವೆಬ್‌ಸೈಟ್‌ನಲ್ಲಿ ಮಾತ್ರ ಸಾಧ್ಯ. HSRP ನಂಬರ್ ಪ್ಲೇಟ್‌ಗೆ ಅರ್ಜಿ ಹಾಕಲು ನೀವು ಆ ವೆಬ್‌ಸೈಟ್‌ನಲ್ಲಿ ಕೇಳುವ ಮಾಹಿತಿಗಳನ್ನು ತುಂಬಿಸಬೇಕಾಗುತ್ತದೆ. ಇದರಲ್ಲಿ ಸಾಧಾರಣವಾಗಿ ನಿಮ್ಮ ಹೆಸರು, ಈಮೈಲ್, ವಾಹನದ ನಂಬರ್, ಚೇಸಿಸ್ ನಂಬರ್, ರಾಜ್ಯದ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ.
ಇನ್ನು ಈ ಸಂಬರ್ ಪ್ಲೇಟ್ ಅಳವಡಿಸದೇ ಸಿಕ್ಕಿ ಬಿದ್ದರೆ, ಮೊದಲ ಬಾರಿಗೆ 1000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಮೊದಲು ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ ಫೆಬ್ರವರಿ17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪೇಟ್ ಹಾಕಿಸಲು ಸಾಧ್ಯವಿಲ್ಲ ಎಂದು ತಿಳಿದ ಸಾರಿಗೆ ಇಲಾಖೆಯು 2024 ರ ಮೇ 31 ರವರೆಗೆ ವಿಸ್ತರಣೆ ಮಾಡಲಾಗಿದೆ.

ನಿಮಗೆ ನಂಬರ್ ಪ್ಲೇಟ್ ಅನ್ನು ನಿಮ್ಮ ಮನೆಗೆ ಅಥವಾ ನಿಮ್ಮ ಸಮೀಪದಲ್ಲಿರುವ ಶೋ ರೂಮ್‌ಗೆ ಡೆಲಿವರಿ ಮಾಡಿಸಿಕೊಂಡು ಅಲ್ಲಿಂದ ಪಡೆಯಬಹುದಾಗಿದೆ. ನೀವು ಅಲ್ಲಿಂದ ನಿಮ್ಮ ವಾಹನದಲ್ಲಿ ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದಾಗಿದೆ. ಆನ್‌ಲೈನ್‌ನಲ್ಲಿ ಇದನ್ನು ಬುಕ್ ಮಾಡಲು ಸಾಧ್ಯವಾಗದೆ ಇದ್ದರೆ ಸಮೀಪದ ಆರ್‌ಟಿಒ ಕಛೇರಿ ಅಥವಾ ಶೋ ರೂಮ್‌ಗೆ ಭೇಟಿ ನೀಡಬಹುದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications