'ಎಕೆ-47'ಗಾಗಿ 7 ಲಕ್ಷ ಪಾವತಿಸಿದ ಈ ಮಹಾನ್ ರೈತ!

By Nagaraja

ಅನೇಕರಿಗೆ ಹಲವು ರೀತಿಯ ಕಾರು ಕ್ರೇಜ್ ಇರುತ್ತದೆ. ಇದರಲ್ಲಿ 'ನಂಬರ್ ಕ್ರೇಜ್' ಅಂತೂ ಶ್ರೀಮಂತರಿಗೆ ಮೀಸಲಿಟ್ಟಿದ್ದು ಎಂದೇ ಬಿಂಬಿಸಲಾಗುತ್ತಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಬಡವರಲ್ಲೂ ಶ್ರೀಮಂತರಿದ್ದಾರೆ ಅಲ್ಲಲ್ಲ ರೈತರಲ್ಲೂ ಉಲ್ಲವರಿದ್ದಾರೆ ಎಂಬುದು ಸಾಬೀತಾಗಿದೆ.

ಇಲ್ಲೊಬ್ಬ ರೈತ ತನ್ನ ಸ್ಕೂಟರ್‌ಗಾಗಿ 'ಎಕೆ 47' ಫ್ಯಾನ್ಸಿ ನಂಬರ್ ಗಿಟ್ಟಿಸಿಕೊಳ್ಳುವುದಕ್ಕಾಗಿ ಬರೋಬ್ಬರಿ ಏಳು ಲಕ್ಷ ರು.ಗಳನ್ನು ಪಾವತಿಸಿದ್ದಾನೆ. ಹೌದು ಪಂಬಾಬ್‌ನ ಕಟೋವಾಲ ಹಳ್ಳಿಯ ರೈತ ಕುಲ್‌ಬೀರ್ ಸಿಂಗ್ ತನ್ನ ಹೋಂಡಾ ಆಕ್ಟಿವಾ ಸ್ಕೂಟರ್‌ನ ನೂತನ 'ಪಿಬಿ-07 ಎಕೆ-47' ನಂಬರ್ ರಿಜಿಷ್ಟ್ರೇಷನ್ ಮಾಡಿಕೊಳ್ಳುವುದಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತ ಪಾವತಿ ಮಾಡಿದ್ದಾನೆ.

ಮಹಾನ್ ರೈತನಲ್ಲಿ ಈ ಬಗ್ಗೆ ವಿಚಾರಿಸಿದಾಗ ಇಟಲಿಯಲ್ಲಿರುವ ತಮ್ಮ ಅಮನ್‌ಪ್ರೀತ್ ಸಿಂಗ್ ಹಾಗೂ ಅಮೆರಿಕ ಮೂಲದ ಸೋದರ ಸಂಬಂಧಿ ದಿಲ್‌ಶೆರ್ ಸಿಂಗ್ ಧಾಲಿವಾಲ್ ಅವರಿಂದ ಫ್ಯಾನ್ಸಿ ನಂಬರ್ ಖರೀದಿಗಾಗಿ ಸ್ಪಷ್ಟ ಸಂದೇಶ ಬಂದಿರುವುದಾಗಿ ತಿಳಿಸುತ್ತಾರೆ.

ಇವರಲ್ಲಿ ದಿಲ್‌ಶೆರ್ ಸಿಂಗ್, ಬಿಡ್ 12ರಿಂದ 13 ಲಕ್ಷ ರು.ಗಳ ವರೆಗೆ ಹೋದರೂ ಫ್ಯಾನ್ಸಿ ನಂಬರ್ ಖರೀದಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಇದರ ಫಲವಾಗಿ 53000 ರು. ಮೊತ್ತದ ಸ್ಕೂಟರ್‌ಗಾಗಿ 7 ಲಕ್ಷ ರು.ಗಳ ನಂಬರ್ ಪ್ಲೇಟ್ ಖರೀದಿಸಿದ್ದಾರೆ.

ಅಂದ ಹಾಗೆ ಬಿಡ್ ವೇಳೆ ನಿಕಟ ಪೈಪೋಟಿ ಕಂಡುಬಂದಿತ್ತು. ಒಟ್ಟು 16 ಬಿಡ್ಡರುಗಳು ಕಣಕ್ಕಿಳಿದಿದ್ದರೂ ಈ ಪೈಕಿ ಐದು ಮಂದಿ 5 ಲಕ್ಷ ವರೆಗೂ ಪಾವತಿಸಲು ಮುಂದಾಗಿದ್ದರು. ಒಟ್ಟಿನಲ್ಲಿ ಇದು ಎಕೆ 47 ಜನಪ್ರಿಯತೆಗೆ ಸಾಕ್ಷಿಯಾಗಿದೆ.

Most Read Articles

Kannada
English summary
A farmer hailing from Katowal village paid Rs 7 lakh to grab the number PB-07 AK-47 for his Honda Activa scooter during an auction for auction for vehicle registration numbers at Hoshiarpur in Punjab.
Story first published: Thursday, March 21, 2013, 14:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X