ಫೋಕ್ಸ್‌ವ್ಯಾಗನ್‌ಗೂ ಮೂರರ ಅಂಕಿಗೂ ಏನು ಸಂಬಂಧ?

ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳನ್ನು ಉತ್ತೇಜಿಸುವ ಹಾಗೂ ತನ್ನ ವ್ಯಾಪಾರವನ್ನು ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಜರ್ಮನಿಯ ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ದೇಶದಲ್ಲಿ ಶಕ್ತಿಶಾಲಿ ಜಿಟಿ ಟಿಎಸ್‌ಐ, ಜಿಟಿ ಟಿಡಿಐ ಮತ್ತು ಕ್ರಾಸ್ ಪೊಲೊಗಳಂತಹ ವೆರಿಯಂಟ್‌ಗಳನ್ನು ಲಾಂಚ್ ಮಾಡಿತ್ತು.

ಹಾಗಿದ್ದರೂ ಇದನ್ನು ಉತ್ತಮ ಮಾರಾಟವನ್ನಾಗಿ ಪರಿವರ್ತಿಸುವುದರಲ್ಲಿ ವೋಲ್ವೋ ಎಡವಿತ್ತು. ಇದರಿಂದಾಗಿ ಪೊಲೊ ಜಿಟಿ ಟಿಡಿಐ ಕಾರಿಗೆ ರಿಯಾಯಿತಿ ದರ ಘೋಷಿಸುವಲ್ಲಿ ಕಂಪನಿ ಪ್ರೇರಿತವಾಗಿದೆ.

Volkswagen Polo

ನೂತನ ಪೊಲೊ 1.6 ಲೀಟರ್ ಜಿಟಿ ಟಿಡಿಐ ಕಾರಿನದ ದೆಹಲಿ ಎಕ್ಸ್ ಶೋ ರೂಂ ದರ 8.08 ಲಕ್ಷ ರು.ಗಳಾಗಿದೆ. ಪ್ರಸ್ತುತ ಕಾರಿಗೆ 25,000 ರು.ಗಳಷ್ಟು ರಿಯಾಯಿತಿ ದರ ನೀಡಲಾಗುತ್ತಿದೆ. ಇನ್ನು ಹಳೆಯ ಕಾರು ವಾರೀಸುದಾರರು 10,000 ರು. ಎಕ್ಸ್‌ಚೇಂಜ್ ಆಫರ್ ಕೂಡಾ ಗಿಟ್ಟಿಸಿಕೊಳ್ಳಬಹುದಾಗಿದೆ.

ಮೂರರ ವಿಶೇಷ...
ಇವೆಲ್ಲದರ ಮಿಗಿಲಾಗಿ ಮೂರು ವರ್ಷಗಳ ಉಚಿತ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಇದರ ಜತೆ ಮೂರು ವರ್ಷಗಳ ಮುಂದುವರಿದ ವಾರಂಟಿ, ಮೂರು ವರ್ಷಗಳ ಉಚಿತ ನಿರ್ವಹಣೆ ಹಾಗೂ ಮೂರು ವರ್ಷಗಳ ವರೆಗೆ 24x7 ರೋಡ್ ಅಸಿಸ್ಟಂಟ್ ಸೇವೆ ಕೂಡಾ ಲಭ್ಯವಾಗಿದೆ.

ಹೀಗೆ ಎಲ್ಲವೂ ಮೂರರ ಅಂಕಿಯಿಂದ ಕೂಡಿರಲಿದೆ. ಇನ್ನು ಕೆಲವು ನಿರ್ದಿಷ್ಟ ಡೀಲರುಗಳಲ್ಲಿ ರು. 15,000 ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆಯೆಂಬ ವಾರ್ತೆಯೂ ಇದೆ.

Most Read Articles

Kannada
English summary
The Polo 1.6 GT TDI, launched at INR 8.08 lakhs (Ex-showroom, Delhi) in September, is now being offered with a flat cash discount of Rs 25,000. There's a further Rs 10,000 discount as exchange offer.
Story first published: Saturday, November 16, 2013, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X