'2014 ವಿಶ್ವ ವರ್ಷದ ಕಾರು' ಪಟ್ಟ ಆಲಂಕರಿಸಿದ ಆಡಿ ಎ3

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಜನಪ್ರಿಯ ಎ3 ಆವೃತ್ತಿಯು '2014 ವಿಶ್ವ ವರ್ಷದ ಕಾರು ಪ್ರಶಸ್ತಿ'ಗೆ ಭಾಜನವಾಗಿದೆ. ಜಗತ್ತಿನಾದ್ಯಂತ ಪ್ರಖ್ಯಾತ ತೀರ್ಪುಗಾರರ ಸಮಿತಿ ಇದನ್ನು ಪ್ರಕಟಿಸಿದೆ. ಸಲೂನ್, ಸ್ಪೋರ್ಟ್‌ಬ್ಯಾಕ್, ಕ್ಯಾಬ್ರಿಲೆಟ್‌ಗಳಂತಹ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಆಡಿ ಎ3, ಮೂರು ಬಾಗಿಲುಗಳ ಆಯ್ಕೆಯನ್ನು ಹೊಂದಿದೆ. ಇದಲ್ಲಿ ಸ್ಪೋರ್ಟಿ ಎಸ್ ಆಯ್ಕೆಯನ್ನು ಸಂಸ್ಥೆಯು ಪ್ರದಾನ ಮಾಡುತ್ತಿದೆ.

2014 ವಿಶ್ವದ ವರ್ಷದ ಕಾರು ಪ್ರಶಸ್ತಿ ರೇಸ್‌ಗೆ 23 ಕಾರುಗಳು ಆಯ್ಕೆಯಾಗಿದ್ದವು. ಅಂತಿಮವಾಗಿ ವಿಶ್ವದ್ಯಾಂತದ 22 ದೇಶಗಳ 69 ಆಟೋಮೋಟಿವ್ ಪತ್ರಕರ್ತರು ವಿಜೇತ ಕಾರನ್ನು ಆರಿಸಿದ್ದಾರೆ.


ಇದು ಎರಡನೇ ಬಾರಿಗೆ ಆಡಿ ಇಂತಹದೊಂದು ಪ್ರಶಸ್ತಿಗೆ ಪಾತ್ರವಾಗುತ್ತಿದೆ. ಈ ಹಿಂದೆ ಭರ್ತಿ ಒಂಬತ್ತು ವರ್ಷಗಳ ಹಿಂದೆ ಅಂದರೆ 2005ರಲ್ಲಿ ಚೊಚ್ಚಲವಾಗಿ ಆಳವಡಿಸಲಾಗಿದ್ದ ವರ್ಷದ ಕಾರು ಪ್ರಶಸ್ತಿಗೆ ಆಡಿ ಎ6 ಭಾಜನವಾಗಿತ್ತು.

ಆಡಿ ಎ3 ನಿರ್ಮಾಣದಲ್ಲಿ ಗರಿಷ್ಠ ತಂತ್ರಗಾರಿಕೆಗಳನ್ನು ಬಳಕೆ ಮಾಡಲಾಗಿದೆ. ಇದು ಹಗುರ ಭಾರದ ತಂತ್ರಾಂಶದ ಜತೆಗೆ, ಚಾಲನೆ, ಮೊಬೈಲ್ ಮಾಹಿತಿ ವ್ಯವಸ್ಥೆ, ಚಾಲಕ ಮಾರ್ಗದರ್ಶನ ವ್ಯವಸ್ಥೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

Audi A3

ಇದರೊಂದಿಗೆ ಒಂದಕ್ಕಿಂತ ಹೆಚ್ಚು ಬಾರಿ ವಿಶ್ವದ ವರ್ಷದ ಕಾರು ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಗೌರವಕ್ಕೂ ಆಡಿ ಪಾತ್ರವಾಗಿದೆ. ಇದಕ್ಕೂ ಮೊದಲು ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು, ಮೂರು ಬಾರಿ ವಿಶ್ವ ವರ್ಷದ ನಿರ್ವಹಣಾ ಕಾರು, ಎರಡು ಬಾರಿ ವಿಶ್ವ ವರ್ಷದ ಡಿಸೈನ್ ಕಾರು ಪ್ರಶಸ್ತಿಗೂ ಭಾಜನವಾಗಿತ್ತು.
Most Read Articles

Kannada
English summary
Audi is known for building luxurious vehicles and the A3 does not fall short at any front. The German manufacturer's A3 has been declared 2014 World Car Of The Year.
Story first published: Friday, April 18, 2014, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X