ಇನ್ನು ಮುಂದೆ ಕಾಫಿ ಬಲದಿಂದ ಓಡಲಿದೆ ಕಾರು?

By Nagaraja

ನೀವು ಕಾಫಿ ವ್ಯಸನಿಯೇ? ಹಾಗಿದ್ದರೆ ನಿಮಗಿದೋ ಖುಷಿ ಸುದ್ದಿ. ನೀವಿನ್ನು ಕಾಫಿ ಚಟವನ್ನು ಇನ್ನಷ್ಟು ಕೂಲಾಗಿ ಮುಂದುವರಿಸಬಹುದು. ಯಾಕೆಂದರೆ ಬಾತ್ (Bath) ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಲ್ಲಿ ಕಾಫಿ ತ್ಯಾಜಗಳಿಂದ ವಾಹನಗಳಿಗೆ ಚೈತನ್ಯ ತುಂಬಬಲ್ಲ ಜೈವಿಕ ಇಂಧನವನ್ನು ಉತ್ಪಾದಿಸಬಹುದಾಗಿದೆ ಎಂಬ ಆಶ್ಚರ್ಯಕರ ಸಂಗತಿಯನ್ನು ಬಹಿರಂಗಪಡಿಸಿದೆ.

ಇದಕ್ಕೆ ನೈಜ ಕಾಫಿ ಬೀಜಗಳೇ ಬೇಕೆಂದಿಲ್ಲ. ಬದಲಾಗಿ ನೀವು ಕುಡಿದು ಬೀಸಾಗಿದ ಕಾಫಿ ಪುಡಿಯ ತ್ಯಾಜದಿಂದ ಹೀರಿ ತೆಗೆದ ಎಣ್ಣೆಯನ್ನು ಕಾಫಿ ಇಂಧನವಾಗಿ ಪರಿವರ್ತಿಸಲಾಗುತ್ತದೆ. ಈ ವಿಶೇಷ ರಾಸಾಯನಿಕ ಪ್ರಕ್ರಿಯೆಯು 'ಟ್ರಾನ್ಸ್ಈಸ್ಟರಿಫಿಕೇಷನ್' (transesterification) ಎಂದರಿಯಲ್ಪಡಲಿದ್ದು, ಜೈವಿಕ ದ್ರಾವಕವಾಗಿ ಪರಿವರ್ತಿಸಲಿದೆ.

coffee

ಇನ್ನು ವಿಶೇಷವೆಂದರೆ ಜಗತ್ತಿನ 20 ವಿವಿಧ ಭಾಗಗಳಲ್ಲಿ ನಡೆಸಿರುವ ಇಂತಹ ಪ್ರಯೋಗದಲ್ಲಿ ಜೈವಿಕ ಇಂಧನ ತಯಾರಿಸುವಲ್ಲಿ ಸಂಶೋಧನಾ ತಂಡ ಯಶಸ್ವಿಯಾಗಿದೆ. ಇದು ಇನ್ನಷ್ಟು ನಿರೀಕ್ಷೆ ಹುಟ್ಟು ಹಾಕಲು ಕಾರಣವಾಗಿದೆ.

ರಾಸಾಯನಿಕ ಎಂಜಿನಿಯರ್ ವಿಭಾಗದ ಸಂಶೋಧಕ ಡಾ. ಕ್ರಿಸ್ ಚಕ್, ಪ್ರಕಾರ ಜಾಗತಿಕವಾಗಿ ಎಂಟು ದಶಲಕ್ಷ ಟನ್ ಕಾಫಿ ಬೀಜ ಉತ್ಪಾದನೆಯಾಗುತ್ತಿದ್ದು, ಈ ಪೈಕಿ ಕಾಫಿ ಬೀಜ ತ್ಯಾಜದಿಂದ ಪ್ರತಿ ಯುನಿಟ್ ತೂಕಕ್ಕೆ ಶೇಕಡಾ 20ರಷ್ಟು ಎಣ್ಣೆ ಉತ್ಪಾದನೆಯಾಗುತ್ತಿದೆ ಎಂದಿದ್ದಾರೆ.

Most Read Articles

Kannada
English summary
A group of scientists have found an ingenious way to use coffee to produce biofuel. You don't have to worry there will be no shortage of drinking coffee as the scientists will use waste and not the bean before being grounded. The waste from coffee beans will be used to power vehicles.
Story first published: Thursday, July 10, 2014, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X