ಬೆಲೆ ಕಡಿತ; ಹ್ಯುಂಡೈ ಮಾರಾಟ ವೃದ್ಧಿ

By Nagaraja

ಕೇಂದ್ರ ಸರಕಾರದ 2013-14 ಮಧ್ಯಂತರ ಬಜೆಟ್‌ನ ಸಣ್ಣ ಕಾರಿನ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಬೆನ್ನಲ್ಲೇ ದರ ಕಡಿತದ ನೀತಿಯನ್ನು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ ಇಂಡಿಯಾ ಅನುಸರಿಸಿತ್ತು.

ಇದರ ಪರಿಣಾಮವೆಂಬಂತೆ ಮಾರ್ಚ್ ತಿಂಗಳ ಪ್ರಯಾಣಿಕ ಕಾರು ಮಾರಾಟದಲ್ಲೂ ಏರಿಕೆ ದಾಖಲಿಸುವಲ್ಲಿ ಹ್ಯುಂಡೈ ಯಶ ಕಂಡಿದೆ. 2014 ಮಾರ್ಚ್ ತಿಂಗಳಲ್ಲಿ ಹ್ಯುಂಡೈ 35,003 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, 16,705 ಯುನಿಟ್‌ಗಳನ್ನು ರಫ್ತು ಮಾಡಿವೆ. ಈ ಮೂಲಕ ಒಟ್ಟು ಮಾರಾಟವನ್ನು 51,708 ಯುನಿಟ್‌ಗಳಿಗೆ ಏರಿಸುವಲ್ಲಿ ಯಶಸ್ವಿಯಾಗಿದೆ.

Hyundai

ಇದು 2014 ಫೆಬ್ರವರಿ ತಿಂಗಳಲ್ಲಿ 34,005 ಯುನಿಟ್ ದೇಶಿಯ ಮಾರಾಟ, 12,500 ರಫ್ತು ಸೇರಿ ಒಟ್ಟು 46,505 ಯುನಿಟ್ ಮಾರಾಟ ದಾಖಲಿಸಿತ್ತು.

ಈ ಮೂಲಕ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಾಗ ಹ್ಯುಂಡೈ ಶೇಕಡಾ 3.4ರಷ್ಟು ಏರಿಕೆ ದಾಖಲಿಸಿದೆ. ಒಟ್ಟಾರೆ ವಾಹನ ಜಗತ್ತು ಕುಸಿತದಲ್ಲಿರುವಾಗ ಹ್ಯುಂಡೈನಿಂದ ಉತ್ತಮ ಬೆಳವಣಿಗೆ ಕಂಡುಬಂದಿದೆ.

ಅಷ್ಟೇ ಅಲ್ಲದೆ ಇದೀಗಷ್ಟೇ ಲಾಂಚ್ ಆಗಿರುವ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Most Read Articles

Kannada
English summary
Hyundai Motor India, the country's second largest car manufacturer and the largest passenger car exporter has steadied its ship as it is sailing through rough weather. Following the price drop post excise cut Hyundai sales has recovered slightly from the previous month.
Story first published: Wednesday, April 2, 2014, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X