ಐದು ವರ್ಷಕ್ಕೊಮ್ಮೆ ವಿಮಾ ಕಂತು ಕಟ್ಟಿ ನೆಮ್ಮದಿಯಾಗಿರಿ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾರುಗಳಿಗೆ ಸಂಬಂಧಪಟ್ಟಂತೆ ಹೊಸ ವಿಮಾ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ತಿಳಿದುಬಂದಿದೆ. ನೂತನವಾಗಿ ಜಾರಿಗೆ ಬರುವ ವಿಮಾ ಯೋಜನೆ 5 ವರ್ಷಗಳಿಗೆ ಅನ್ವಯವಾಗುತ್ತದೆ.

ಸದ್ಯ ಇರುವ ವಾಹನಗಳ ವಿಮಾ ಯೋಜನೆ ಪ್ರಕಾರ ಪ್ರತಿ ವರ್ಷ ಗ್ರಾಹಕರು ವಿಮಾ ಕಂತಿನ ಮೊತ್ತ ಪಾವತಿ ಮಾಡಬೇಕಾಗಿದೆ. ಕೆಲವು ವಿಮಾ ಕಂಪನಿಗಳಲ್ಲಿ ಇದು ದುಬಾರಿಯಾದರೆ, ಕೆಲವರು, ವಾರ್ಷಿಕವಾಗಿ ಕಂತನ್ನು ಕಟ್ಟವುದನ್ನು ಮರೆಯುವುದರಿಂದ ಹಲವಾರು ತೊಂದರೆಗಳು ಉಂಟಾಗುತ್ತಿವೆ.

IRDA Proposing Five-Year Car Insurance Policies

5 ವರ್ಷಕ್ಕೊಮ್ಮೆ ಪಾಲಿಸಿ ತುಂಬಿ : ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ತರಲು ಚಿಂತನೆ ನಡೆಸುತ್ತಿರುವ ಹೊಸ ನಿಯಮದಿಂದಾಗಿ ಗ್ರಾಹಕರು ಐದು ವರ್ಷಗಳಿಗೊಮ್ಮೆ ವಿಮಾ ಕಂತನ್ನು ಪಾವತಿ ಮಾಡಬಹುದಾಗಿದೆ. ವಾರ್ಷಿಕವಾಗಿ ಕಂತು ಪಾವತಿ ಮಾಡುವುದಕ್ಕಿಂತ ಇದು ಸುಲಭ ಮತ್ತು ಸರಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಗ್ರಾಮೀಣ ಭಾಗದ ಜನರಿಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇಂತಹ ಆಲೋಚನೆ ನಡೆಸಿದ್ದು, ಈ ಕುರಿತು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕಾಗಿ ಹೊಸ ನಿಯಮ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಐಆರ್ ಡಿಎ ಸಿದ್ಧತೆ ನಡೆಸುತ್ತಿದೆ.

ಅಂಕಿ ಸಂಖ್ಯೆಗಳ ಪ್ರಕಾರ ಜೂನ್ ತಿಂಗಳಿನಲ್ಲಿ ಕಾರುಗಳ ಮಾರಾಟದಲ್ಲಿ ಶೇ 14.76 ಮತ್ತು ಬೈಕ್ ಗಳ ಮಾರಾಟದಲ್ಲಿ ಶೇ 9.63 ಹೆಚ್ಚಳವಾಗಿದೆ. ಈ ಅಂಕಿ-ಸಂಖ್ಯೆಗಳನ್ನು ಪರಿಗಣಿಸಿ ಹೊಸ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಹೊಸ ನೀತಿ ಜಾರಿಗೆ ಬಂದರೆ, ಒಮ್ಮೆ ವಿಮಾ ಕಂತು ಕಟ್ಟಿ ಐದು ವರ್ಷ ನೆಮ್ಮದಿಯಿಂದ ಇರಿ.

Most Read Articles

Kannada
English summary
According to an industry source, the IRDA or Insurance Regulatory and Development Authority, is planning to propose insurance policies for cars that would cover 5 years.
Story first published: Thursday, July 24, 2014, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X