ರೆನೊ ಇಂಡಿಯಾ ಕಾರುಗಳಿಗೆ ಬೆಲೆ ಏರಿಕೆ

By Nagaraja

ಫ್ರಾನ್ಸ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಇಂಡಿಯಾ, ತನ್ನೆಲ್ಲ ಮಾದರಿಗಳ ಕಾರುಗಳಿಗೆ ಶೇಕಡಾ 2.5ರಷ್ಟು ಬೆಲೆ ಏರಿಕೆ ಘೋಷಿಸಿದೆ.

ಹೊಸ ದರ ನೀತಿಯು ಮುಂದಿನ ವರ್ಷಾರಂಭದಲ್ಲಿ ಜಾರಿಗೆ ಬರಲಿದ್ದು, ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಬೆಲೆ ಏರಿಕೆ ಹಿಂದಿರುವ ಪ್ರಮುಖ ಕಾರಣವಾಗಿದೆ ಎಂಬುದನ್ನು ಸಂಸ್ಥೆ ಬಹಿರಂಗಪಡಿಸಿದೆ.

"ಈಗಿನ ಪರಿಸ್ಥಿತಿಯಲ್ಲಿ ನಿರ್ಮಾಣ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ" ಎಂದು ರೆನೊ ಇಂಡಿಯಾ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿರುವ ರಾಫೆಲ್ ಟ್ರೆಗ್ಯುಯರ್ ವಿವರಿಸಿದ್ದಾರೆ.

renault duster

ರೆನೊದಿಂದ ಭಾರತದಲ್ಲಿ ಮಾರಾಟವಾಗುತ್ತಿರುವ ಮಾದರಿಗಳು

ಪಲ್ಸ್, ಸ್ಕಾಲಾ, ಡಸ್ಟರ್, ಫ್ಲೂಯೆನ್ಸ್ ಮತ್ತು ಕೊಲಿಯೊಸ್.

ಇವೆಲ್ಲದರ ಬೆಲೆಗಳು 4.46 ಲಕ್ಷ ರು.ಗಳಿಂದ ಆರಂಭವಾಗಿ 25.99 ಲಕ್ಷ ರು.ಗಳ ವರೆಗಿದೆ. ಅಲ್ಲದೆ ಮುಂದಿನ ವರ್ಷದಲ್ಲಿ ಎರಡು ಹೊಸ ಮಾದರಿಗಳನ್ನು ಪರಿಚಯಿಸುವ ಇರಾದೆಯನ್ನು ಹೊಂದಿದೆ.

ಕಳೆದ ವಾರವಷ್ಟೇ ತನ್ನೆಲ್ಲ ಹಾಗೂ ದಟ್ಸನ್ ಮಾದರಿಗಳಿಗೆ ಬೆಲೆ ಏರಿಕೆಗೊಳಿಸುವುದಾಗಿ ನಿಸ್ಸಾನ್ ಘೋಷಿಸಿತ್ತು. ಹೊಸ ವರ್ಷದಲ್ಲೇ ಅನ್ವಯವಾಗಲಿರುವ ನಿಸ್ಸಾನ್ ಬೆಲೆ ಏರಿಕೆ ನೀತಿಯಂತೆ ರು.18000 ವರೆಗೆ ಹಚ್ಚಳವಾಗಲಿದೆ.

ಇದಕ್ಕೂ ಮೊದಲು ಮಾರುತಿ ಸುಜುಕಿ, ಹ್ಯುಂಡೈ ಮೋಟಾರು ಇಂಡಿಯಾ, ಬಿಎಂಡಬ್ಲ್ಯು, ಜನರಲ್ ಮೋಟಾರ್ಸ್ ಹಾಗೂ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಗಳು ಸಹ ಬೆಲೆ ಏರಿಕೆ ನೀತಿ ಪ್ರಕಟಿಸಿತ್ತು.

Most Read Articles

Kannada
English summary
Renault to hike prices by up to 2.5% will be effective from January 1, 2015.
Story first published: Monday, December 22, 2014, 11:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X