ವಾಹನ ಪ್ರೇಮಿಗಳಲ್ಲಿ ಕಿಚ್ಚು ಹಚ್ಚಿದ ಮಾರುತಿ ಇಗ್ನಿಸ್

By Nagaraja

2016 ಆಟೋ ಎಕ್ಸ್ ಪೋದಲ್ಲಿ ಬಹುನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಕ್ರಾಸೋವರ್ ಕಾನ್ಸೆಪ್ಟ್ ಕಾರು ಭರ್ಜರಿ ಎಂಟ್ರಿ ಕೊಟ್ಟಿದೆ. ಇದಕ್ಕೂ ಮೊದಲು ಕಳೆದ ವರ್ಷ ನಡೆದ ಟೊಯೊಟಾ ಆಟೋ ಶೋದಲ್ಲೂ ಪ್ರದರ್ಶನ ಕಂಡಿರುವ ಮಾರುತಿ ಇಗ್ನಿಸ್ ಇದೀಗ ದೆಹಲಿ ವಾಹನ ಪ್ರೇಮಿಗಳಲ್ಲಿ ಕಿಚ್ಚು ಹಚ್ಚಿದೆ.

ಎಂಜಿನ್ ತಾಂತ್ರಿಕತೆ
ಪ್ರಸಕ್ತ ಸಾಲಿನಲ್ಲೇ ಬಿಡುಗಡೆ ಭಾಗ್ಯ ಕಾಣಲಿರುವ ಅತಿ ನೂತನ ಮಾರುತಿ ಸುಜುಕಿ ಇಗ್ನಿಸ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ ಮಾರುತಿಯ ಜನಪ್ರಿಯ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲಿರುವದಕ್ಕೆ ಸಮಾನವಾದ ಎಂಜಿನ್ ತಾಂತ್ರಿಕೆಯು ಕಂಡುಬರಲಿದೆ.

ಮಾರುತಿ ಸುಜುಕಿ ಇಗ್ನಿಸ್


ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 115 ಎನ್‌ಎಂ ತಿರುಗುಬಲದಲ್ಲಿ (4,000 ಆರ್‌ಪಿಎಂ) 83 ಅಶ್ವಶಕ್ತಿಯನ್ನೂ (6,000 ಆರ್‌ಪಿಎಂ) ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ 190 ಎನ್‌ಎಂ ತಿರುಗುಬಲದಲ್ಲಿ (2,000 ಆರ್‌ಪಿಎಂ) 74 ಅಶ್ವಶಕ್ತಿಯನ್ನು (4,000 ಆರ್‌ಪಿಎಂ) ಉತ್ಪಾದಿಸಲಿದೆ.

ಮೈಲೇಜ್

  • ಪೆಟ್ರೋಲ್: 20.4 ಕೀ.ಮೀ.
  • ಡೀಸೆಲ್: 25.2 ಕೀ.ಮೀ.

ವಿನ್ಯಾಸ
ಜಪಾನ್ ಮೂಲದ ಅಂಗಸಂಸ್ಥೆ ಸುಜುಕಿಯ ಐಎಂ-4 ಕಾನ್ಸೆಪ್ಟ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿರುವ ಮಾರುತಿ ಸುಜುಕಿ ಇಗ್ನಿಸ್ ಒಂದು ಕ್ರಾಸೋವರ್ ಕಾರಾಗಿದೆ. ಹಾಗಿದ್ದರೂ ಮುಂಭಾಗದಲ್ಲಿ ದೃಢಕಾಯದ ಎಸ್‌ಯುವಿ ತರಹನೇ ಭಾಸವಾಗುತ್ತಿದ್ದು, ಹಿಂಭಾಗದಲ್ಲೂ ವಿಶಿಷ್ಟತೆ ಕಾಪಾಡಿಕೊಂಡಿದೆ.

ಬಿಡುಗಡೆ, ವಿತರಣೆ ಮತ್ತು ಪ್ರತಿಸ್ಪರ್ಧಿಗಳು
ಭಾರತೀಯ ಮಾರುಕಟ್ಟೆಯಲ್ಲಿ ಈಗಷ್ಟೇ ಬಿಡುಗಡೆಯಾಗಿರುವ ಮಹೀಂದ್ರ ಕೆಯುವಿ100 ಹಾಗೂ ಹ್ಯುಂಡೈ ಗ್ರಾಂಡ್ ಐ10 ಗಳಂತಹ ಮಾದರಿಗಳಿಗೆ ನಿಕಟ ಪೈಪೋಟಿಯನ್ನು ಒಡ್ಡಲಿರುವ ಮಾರುತಿ ಸುಜುಕಿ ಇಗ್ನಿಸ್, ಸಂಸ್ಥೆಯ ಪ್ರೀಮಿಯಂ ನೆಕ್ಸಾ ಶೋ ರೂಂ ಮೂಲಕ ವಿತರಣೆಯಾಗುವ ಸಂಭವವಿದೆ. ಇದು ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಬೆಲೆ
ಅಂತಿಮವಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಮಾರುತಿ ಸುಜುಕಿ ಇಗ್ನಿಸ್ ಅಂದಾಜು ನಾಲ್ಕರಿಂದ ಆರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Most Read Articles

Kannada
English summary
Maruti Looks To Ignite Compact Crossover Segment With Ignis Concept
Story first published: Saturday, February 6, 2016, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X