ಹ್ಯುಂಡೈ ಐ20 ರೇಸ್ ಕಾರು ರಿ ಎಂಟ್ರಿ

By Nagaraja

ಸ್ವಿಜರ್ಲೆಂಡ್‌ನ ಜಿನೆವಾದಲ್ಲಿ ಸಾಗುತ್ತಿರುವ 2013 ಮೋಟಾರ್ ಶೋದಲ್ಲಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಕಂಪನಿಯಾದ ಹ್ಯುಂಡೈನಿಂದ ಪರಿಷ್ಕೃತ ಐ20 ವಲ್ಡ್ ರ‌್ಯಾಲಿ ಚಾಂಪಿಯನ್‌ಶಿಪ್ (ಡಬ್ಲ್ಯುಆರ್‌ಸಿ) ರೇಸ್ ಕಾರು ಅನಾವರಣಗೊಂಡಿದೆ.

ಈ ಮೂಲಕ ಮುಂದಿನ ವರ್ಷ ಸಾಗಲಿರುವ ವಿಶ್ವ Rally ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಹ್ಯುಂಡೈ ಮತ್ತಷ್ಟು ಸನ್ನದ್ಧಗೊಂಡಿದೆ. ಪ್ರಸ್ತುತ ಕಾರು ಖಾಸಗಿ ಟೆಸ್ಟಿಂಗ್ ಹಾಗೂ ಅಭಿವೃದ್ಧಿ ಹಂತದಲ್ಲಿದ್ದರೂ ಜಿನೆವಾ ಆಟೋ ಶೋದಲ್ಲಿ ತನ್ನ ನೈಜ ರೂಪ ತಾಳಿದೆ.

ಅಂದ ಹಾಗೆ ವರ್ಲ್ಡ್ rally ಚಾಂಪಿಯನ್‌ಶಿಪ್‌ನಲ್ಲಿ ಹ್ಯುಂಡೈ ಐ20 ರೇಸ್ ಕಾರು ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿದುಕೊಳ್ಳೋಣ...

ಹ್ಯುಂಡೈ ಐ20 ಪರಿಷ್ಕತ ಹಾಗೂ ಮರು ವಿನ್ಯಾಸಗೊಳಿಸಲಾಗಿರುವ ರೇಸ್ ಕಾರಾಗಿದ್ದು, ವಿಶ್ವ rally ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧೆಗಿಳಿಯಲಿದೆ.

Hyundai i20 WRC Race Car At Geneva

ಏರೋಡೈನಾಮಿಕ್ಸ್, ಚಾಸೀಸ್, ಸಸ್ಷೆಷನ್ ಹಾಗೂ ಕೂಲಿಂಗ್ ಸಿಸ್ಟಂಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ. ಈ ಹಿಂದೆ 2012 ಪ್ಯಾರಿಸ್ ಮೋಟಾರ್ ಶೋದಲ್ಲಿ ಪ್ರಸ್ತುತ ಕಾರು ಡೆಬ್ಯುಟ್ ಮಾಡಿಕೊಂಡಿತ್ತು.

Hyundai i20 WRC Race Car At Geneva

ಮುಂದಿನ ದಿನಗಳಲ್ಲಿ ಯುರೋಪ್‌ನಲ್ಲಿ ಇತರ ರೇಸಿಂಗ್ ಟ್ರಾಕ್‌ನಲ್ಲಿ ಹ್ಯುಂಡೈ ಐ20 ಖಾಸಗಿ ಟೆಸ್ಟಿಂಗ್ ನಡೆಸಲಿದೆ. ಈ ಮುಖಾಂತರ 2014 ವಿಶ್ವ rally ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ರಿ ಎಂಟ್ರಿ ಕೊಡಲಿದೆ.

Hyundai i20 WRC Race Car At Geneva

ಮರು ವಿನ್ಯಾಸಗೊಳಿಸಲಾದ ಬಾಡಿ, ನ್ಯೂ ರಿಯರ್ ವಿಂಗ್ ಹಾಗೂ ಫ್ರಂಟ್ ಸ್ಪಾಯ್ಲರ್ ಹೊಸ ರೂಪಕ್ಕೆ ಕಾರಣವಾಗಿದೆ.

Hyundai i20 WRC Race Car At Geneva

ಒಟ್ಟಿನಲ್ಲಿ ಪರಿಷ್ಕೃತ ರೇಸ್ ಕಾರು ಹ್ಯುಂಡೈ ಮೋಟಾರ್‌ಸ್ಪೋರ್ಟ್ ತಂಡಕ್ಕೆ ಉತ್ತೇಜನ ನೀಡುವ ಸಾಧ್ಯತೆಯಿದೆ.

Most Read Articles

Kannada
English summary
Hyundai is getting closer to being ready for the World Rally Championship, which will take place next year, of which the South Korean automaker will be part of. The vehicle of choice is the Hyundai i20 hatchback, which the automaker first showcased at last year's Paris Auto Show.
Story first published: Wednesday, March 13, 2013, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X