ಬಸ್ ನಿಲ್ದಾಣಕ್ಕೂ ಎ.ಸಿ ಅಳವಡಿಕೆ... ದೆಹಲಿಯ ಪರಿಸ್ಥಿತಿ ಬೆಂಗಳೂರಿಗೆ ಬರುತ್ತೆ ಹುಷಾರ್ !!

Written By:

ಉತ್ತರ ಭಾರತವು ಪ್ರಸ್ತುತ ಅತಿಯಾದ ಶಾಖದಿಂದ ಬಳಲುತ್ತಿದ್ದು, ಗರಿಷ್ಠ ತಾಪಮಾನವು 47 ಡಿಗ್ರಿ ತಲುಪಿದೆ ಎನ್ನುವುದು ಆತಂಕದ ಸಂಗತಿಯಾಗಿದ್ದು, ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರತಿಯೊಬ್ಬರೂ ಹವಾನಿಯಂತ್ರಿತ ವ್ಯವಸ್ಥೆಗೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಅದರಲ್ಲಿಯೂ ಬಸ್ ಪ್ರಯಾಣಿಕರ ಗೋಳು ಏಳತೀರದು, ಬೆವರು, ದುರ್ವಾಸನೆಯ ಮಧ್ಯೆ ಪ್ರಯಾಣ ಹೆಚ್ಚು ಕಷ್ಟಕರವಾದರೆ, ಮತ್ತೊಂದು ಕಡೆ ಗಂಟೆಗಟ್ಟಲೆ ಬಸ್ ಬರುವಿಕೆಗಾಗಿ ಕಾಯುವ ಜನರನ್ನು ದೇವರೇ ಕಾಪಾಡಬೇಕು.

ಈ ಎಲ್ಲಾ ಕಷ್ಟಗಳನ್ನು ಸರಿಪಡಿಸುವ ಕಾರ್ಯಕ್ಕೆ ದೆಹಲಿ ಸರ್ಕಾರ ಮುಂದಾಗಿದ್ದು, ಬಸ್ ನಿಲ್ದಾಣವನ್ನು ಹವಾನಿಯಂತ್ರಣಗೊಳಿಸುವ ಕೆಲಸಕ್ಕೆ ಕೈಹಾಕಿದೆ.

ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ಬಿಸಿಲಿನ ಶಾಖ ಕಡಿಮೆಗೊಳಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಸರ್ಕಾರ ಬಂದಿದ್ದು, ದಕ್ಷಿಣ ದೆಹಲಿಯ ಬಸ್ ನಿಲ್ದಾಣಗಳನ್ನು ಏರ್ ಕಂಡೀಷನಿಂಗ್ ವ್ಯಾಪ್ತಿಗೆ ಒಳಪಡಿಸಿದೆ.

ಸಧ್ಯ ಲಜಪುತ್ ನಗರದಲ್ಲಿರುವ ರಿಂಗ್ ರಸ್ತೆಯ ದೆಹಲಿ ಸಾರಿಗೆ ನಿಗಮ (ಡಿ.ಟಿ.ಸಿ) ಬಸ್ ನಿಲ್ದಾಣವು ಮೊಟ್ಟ ಮೊದಲ ಬಾರಿಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಪಡೆದುಕೊಂಡ ಬಸ್ ನಿಲ್ದಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ದೇಶದ ರಾಜಧಾನಿ ದೆಹಲಿಯು ಹೆಚ್ಚು ಶಾಖ ತರಂಗದಿಂದ ಬಳಲುತ್ತಿದ್ದು, ನಗರದ ಕೆಲವು ಭಾಗಗಳಲ್ಲಿ ತಾಪಮಾನವು 43 ಡಿಗ್ರಿ ತಲುಪಿದೆ.

ಸದ್ಯ ಎಲ್ಲಾ ತಂಗುನಿಲ್ದಾಣಗಳಲ್ಲಿ ಅಳವಡಿಸಲುದ್ದೇಶಿಸಿರುವ ಈ ವ್ಯವಸ್ಥೆಯ ಜವಾಬ್ದಾರಿಯ ಹೊಣೆಯನ್ನು ಜಪಾನ್ ಮೂಲದ ಹವಾನಿಯಂತ್ರಣ ತಯಾರಿಕಾ ಕಂಪೆನಿ ವಹಿಸಿಕೊಂಡಿದೆ.

ಈ ವಿಚಾರವನ್ನು ಸರ್ಕಾರಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದು, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಎಸಿಯ ಅಳವಡಿಕೆಗೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಖಾಸಗಿ ಏಜೆನ್ಸಿ ದೆಹಲಿ ಸಾರಿಗೆ ನಿಗಮದ ಬಸ್ ನಿಲ್ದಾಣಗಳ ಜಾಹೀರಾತು ಹಕ್ಕುಗಳನ್ನು ಸಹ ಹೊಂದಿದೆ. ಉಷ್ಣಾಂಶವು ಮುಂಬರುವ ದಿನಗಳಲ್ಲಿ 40 ಡಿಗ್ರಿಗಳಷ್ಟು ಸುಳಿದಾಡುತ್ತದೆ.

ಬಸ್ ನಿಲ್ದಾಣದ ಮೇಲೆ ಜಾಹಿರಾತು ಪ್ರಸಾರಣೆಯ ಹಕ್ಕನ್ನು ಕೂಡ ಖಾಸಗಿ ಸಂಸ್ಥೆ ಪಡೆದುಕೊಂಡಿದ್ದು, ಈ ಮೂಲಕ ಹೆಚ್ಚು ಹಣ ಪಡೆಯಲಿದೆ.

ಈಗಾಗಲೇ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಮರಗಳನ್ನು ಹೆಚ್ಚು ಹೆಚ್ಚು ಕಡಿಯುತ್ತಿರುವುದೇ ಈ ಎಲ್ಲಾ ತೊಂದರೆಗಳಿಗೆ ಕಾರಣ ಎನ್ನಬಹುದು. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದೊಂದಿನ ಬೆಂಗಳೂರಿನಲ್ಲೂ ಇದನ್ನು ಅಳವಡಿಸಬೇಕಾದ ದಿನಗಳು ದೂರವಿಲ್ಲ ಎನ್ನಬಹುದು.

Click to compare, buy, and renew Car Insurance online

Buy InsuranceBuy Now

Read more on ದೆಹಲಿ delhi
English summary
Read in Kannada about A bus stand in South Delhi equipped with air conditioning system. Know more about this A.C concept, project details and more
Please Wait while comments are loading...

Latest Photos