ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

By Nagaraja

ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ಬೇರು ಬಿಟ್ಟಿರುವುದು ಜಗಜ್ಜಾಹೀರಾಗಿದೆ. ತನ್ನ ನಾಶದ ಹೊಂಡವನ್ನು ತಾನೇ ತೋಡಿಕೊಂಡಿರುವ ಪಾಕ್ ವಿನಾಶದ ಅಂಚಿನಲ್ಲಿದೆ. ಸಮಕಾಲಿನ ವಸ್ತುಸ್ಥಿತಿಯ ಮೇಲೆ ಮಿಲಿಟರಿಯಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಪಾಕಿಸ್ತಾನ ಜೊತೆಗೆ ಭಾರತವನ್ನು ಹೋಲಿಸುವ ಪ್ರಯತ್ನ ಮಾಡಲಾಗುತ್ತದೆ.

ಭಯೋತ್ಪಾದನೆಯಲ್ಲಿ ಮಾತ್ರ ಭಾರತ ಪಾಕಿಸ್ತಾನಕ್ಕೆ ಹಿಂದೆ ಬಿದ್ದಿರಬಹುದು. ಆದರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಭಾರತ ಪ್ರಗತಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಆಟೋಮೊಬೈಲ್ ಕ್ಷೇತ್ರ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಜಗತ್ತಿನಲ್ಲೇ ಅತಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತದತ್ತ ವಿಶ್ವ ವಿಖ್ಯಾತ ವಾಹನ ಸಂಸ್ಥೆಗಳು ತಮ್ಮ ಘಟಕವನ್ನು ತೆರೆಯುವ ಮೂಲಕ ಮಾರಾಟ ವಲಯವನ್ನು ವಿಸ್ತರಿಸಿಕೊಂಡಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ದಾಖಲೆಯಗಳ ಅಂಕಿಅಂಶಗಳ ಪ್ರಕಾರ ಭಾರತದ ಕಾರು ರಫ್ತು ಪ್ರಮಾಣವು ಪಾಕಿಸ್ತಾನದ ಒಟ್ಟು ಕಾರುಗಳ ಉತ್ಪಾದನೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

2014-15ರ ಸಾಲಿನಲ್ಲಿ ಭಾರತವು ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 23.56 ಲಕ್ಷ ಪ್ರಯಾಣಿಕ ಕಾರುಗಳನ್ನು ಮಾರಾಟ ಮಾಡಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನ ಬರಿ 1.52 ಲಕ್ಷ ಯುನಿಟ್ ಗಳ ಮಾರಾಟವನ್ನು ಮಾತ್ರ ಸಾಧಿಸಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ರಫ್ತು ಪ್ರಮಾಣವು ಇದಕ್ಕಿಂತಲೂ ಆಸಕ್ತಿದಾಯಕ ಮಾಹಿತಿಯನ್ನು ನೀಡುತ್ತದೆ. 2014-15ರಲ್ಲಿ ಭಾರತವು 5.74 ಲಕ್ಷ ಪ್ರಯಾಣಿಕ ಕಾರುಗಳನ್ನು ರಫ್ತು ಮಾಡಲಾಗಿದೆ. ಇದು ಪಾಕಿಸ್ತಾನದಲ್ಲಿ ಮಾರಾಟ ಹಾಗೂ ನಿರ್ಮಾಣಗೊಂಡಿರುವ ಒಟ್ಟು ಕಾರುಗಳ ನಾಲ್ಕು ಪಟ್ಟು ಹೆಚ್ಚಾಗಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ಭಯೋತ್ಪಾದನೆ ಬೀಡು ಬಿಟ್ಟಿರುವ ಪಾಕಿಸ್ತಾನಕ್ಕೆ ಕಾಲಿಡುವುದೇ ಆಗಲಿ ಅಥವಾ ಘಟಕ ತರೆಯುವ ಗೋಜಿಗೆ ಜಾಗತಿಕ ವಾಹನ ಸಂಸ್ಥೆಗಳು ಹೋಗುತ್ತಿಲ್ಲ. ಇನ್ನೊಂದೆಡೆ ಭಾರತದಲ್ಲಿ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು, ಆಡಿ, ಟೊಯೊಟಾ, ಜನರಲ್ ಮೋಟಾರ್ಸ್, ಹೋಂಡಾ, ಹ್ಯುಂಡೈ, ಸುಜುಕಿ ಸೇರಿದಂತೆ ಲಂಬೋರ್ಗಿನಿಗಳಂತಹ ಸೂಪರ್ ಕಾರು ಸಂಸ್ಥೆಗಳೇ ಒಲವು ತೋರಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ಅತ್ತ ಪಾಕಿಸ್ತಾನದಲ್ಲಿ ಹೇಳುವಂತಹ ಸ್ವದೇಶಿ ಸಂಸ್ಥೆಗಳು ಇಲ್ಲ. ಭಾರತವಾಗಲಿ ಟಾಟಾ, ಮಹೀಂದ್ರ, ಅಶೋಕ್ ಲೇಲ್ಯಾಂಡ್ ದೇಶದಲ್ಲಿ ಮಾತ್ರವಲ್ಲದೆ ತನ್ನ ಮಾರಾಟ ಹವಾವನ್ನು ವಿಶ್ವದ್ಯಾಂತ ವ್ಯಾಪಿಸಿದೆ. ಮಹೀಂದ್ರ ಸಂಸ್ಧೆಯು ಸ್ಯಾಂಗ್ಯೊಂಗ್ ಮೋಟಾರ್ಸ್ ವಶಪಡಿಸಿಕೊಂಡಿದ್ದರೆ ಟಾಟಾ ಸಂಸ್ಥೆಯು ಬ್ರಿಟನ್ ನ ಐಕಾನಿಕ್ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯನ್ನೇ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ಗುಣಮಟ್ಟ, ವೈಶಿಷ್ಟ್ಯ ಹಾಗೂ ಸೌಲಭ್ಯಗಳ ವಿಚಾರದಲ್ಲೂ ಪಾಕಿಸ್ತಾನ ಇಂದಿಗೂ ಹಿಂದಿನ ಜಮಾನದಲ್ಲಿದೆ ಎಂಬುದು ವರದಿಗಳಿಂದಲೇ ವ್ಯಕ್ತವಾಗುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಮಾರುತಿ 800 ಸಮಾನವಾಗಿ ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಸುಜುಕಿ ಮೆಹ್ರನ್. ಭಾರತದಲ್ಲಿ 800 ಮಾರಾಟ ಆಗಲೇ ಸ್ಥಗಿತಗೊಂಡರೂ ಪಾಕಿಸ್ತಾನದಲ್ಲಿ ಮಾತ್ರ ಇಂದಿಗೂ ಅಭಿವೃದ್ಧಿ ಕಾಣದೇ ಅದೇ ಹಳೆಯ ಸೌಲಭ್ಯಗಳೊಂದಿಗೆ ಒಡಾಡುವಂತಹ ದಯನೀಯ ಸ್ಥಿತಿಗೆ ತಲುಪಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ಇಸ್ಲಾಮಾಬಾದ್ ಡೀಲರ್ ಶಿಪ್ ಪ್ರತಿನಿಧಿ ಹೇಳುವ ಪ್ರಕಾರ, ಮೆಹ್ರನ್ ಕಾರು ಖರೀದಿಸುವ ಅನೇಕ ಗ್ರಾಹಕರು ಗೋಳಿಡುತ್ತಾರೆ. ತಮ್ಮ ಸಂಪೂರ್ಣ ಜೀವನವನ್ನೇ ಮೆಹ್ರನ್ ಕಾರು ಖರೀದಿಗಾಗಿ ಮೀಸಲಿಡುತ್ತಾರೆ. ಇನ್ನು ಆಮದು ಮಾಡಿದ ಕಾರುಗಳ ಖರೀದಿಗೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದ್ದು ಖರೀದಿ ಕಷ್ಟಸಾಧ್ಯವಾಗಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ದ್ವಿಚಕ್ರ ವಾಹನ ಮಾರುಕಟ್ಟೆಯು ವಿಭಿನ್ನವಾಗಿಲ್ಲ. ಹೀರೊ, ಹೋಂಡಾ, ಬಜಾಜ್, ಟಿವಿಎಸ್, ಮಹೀಂದ್ರ ಸೇರಿದಂತೆ ವಿಶ್ವ ವಿಖ್ಯಾತ ಸೂಪರ್ ಬೈಕ್ ತಯಾರಕರುಗಳಿಂದ ತುಂಬಿ ತುಳುಕುತ್ತಿರುವ ಭಾರತ ಅಜ-ಗಜಾಂತರ ವ್ಯತ್ಯಾಸದಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ. 2015ನೇ ಸಾಲಿನಲ್ಲಿ ಭಾರತ 1.61 ಕೋಟಿ ಯುನಿಟ್ ಗಳ ಮಾರಾಟವನ್ನು ಸಾಧಿಸಿದ್ದರೆ ಪಾಕಿಸ್ತಾನ 19.12 ಲಕ್ಷ ಯುನಿಟ್ ಗಳ ಮಾರಾಟವನ್ನಷ್ಟೇ ಗಿಟ್ಟಿಸಿಕೊಂಡಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ಭಾರತದಲ್ಲಿ ಸ್ಕೂಟರ್ ಮಹಿಳಾ ಸಬಲೀಕರಣದ ಸಂಕೇತವಾಗಿದೆ. ಪುರುಷ ಮತ್ತು ಮಹಿಳೆಯರು ಸಮಾನರು ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಭಾರತದ ಮಹಿಳೆಯರಲ್ಲಿ ಕಂಡುಬಂದಿರುವ ಈ ಬದಲಾವಣೆಯು ಪಾಕಿಸ್ತಾನದಲ್ಲಿ ಇನ್ನು ಕನಸು ಮಾತ್ರವಾಗಿದೆ.

ಭಾರತ vs ಪಾಕ್; ಉಗ್ರವಾದದಿಂದ ವಾಹನಗಳ ಯುದ್ಧದ ವರೆಗೆ!

ಒಟ್ಟನಲ್ಲಿ ಭಯೋತ್ಪಾದನೆಯನ್ನು ತೊರೆದು ಮೂಲ ಸೌಕರ್ಯ, ವಿದ್ಯಾಭ್ಯಾಸ ಸೇರಿದಂತೆ ಅಭಿವೃದ್ಧಿ ಮಂತ್ರವನ್ನು ಪಠಿಸಿದ್ದಲ್ಲಿ ಮಾತ್ರ ಪಾಕಿಸ್ತಾನಕ್ಕೆ ಬಚಾವಾಗಲು ಸಾಧ್ಯ. ಇಲ್ಲವಾದ್ದಲ್ಲಿ ಇಡೀ ಭೂಪಟದಿಂದಲೇ ಮಾಯವಾಗುವ ಕಾಲ ಮಿಂಚಿಲ್ಲ.

Most Read Articles

Kannada
Read more on ಭಾರತ india
English summary
India Auto Industry VS Pakistan Auto Industry Comparison
Story first published: Tuesday, September 27, 2016, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X