ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

By Nagaraja

ಭಾರತೀಯ ನೌಕಾದಳವು ಮಗದೊಂದು ಮೈಲುಗಲ್ಲನ್ನು ತಲುಪಿದ್ದು, ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಿಸಲ್ಪಟ್ಟ ವಿಮಾನ ವಾಹಕ ಐಎನ್‌ಎಸ್ ವಿಕ್ರಾಂತ್ ಹಡಗು ಕೊಚ್ಚಿಯ ಬಂದರಿನಲ್ಲಿ ತನ್ನ ಮೊದಲ ದರ್ಶನ ನೀಡಿದೆ.

ಪ್ರಸ್ತುತ ಪ್ರಾಥಮಿಕ ಹಂತದಲ್ಲಿರುವ ಐಎನ್ಎಸ್ ವಿಕ್ರಾಂತ್ ಅತಿ ಶೀಘ್ರದಲ್ಲೇ ನೌಕಾದಳವನ್ನು ಸೇರಿಕೊಳ್ಳಲಿದೆ. ಇದರೊಂದಿಗೆ ಭಾರತವು ಅಮೆರಿಕ, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್‌ಗಳಂತಹ ಎಲೈಟ್ ರಾಷ್ಟ್ರಗಳ ಸಾಲಿಗೆ ಸೇರಲಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್‌ನಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ವಾಹನ ಐಎನ್ಎಸ್ ವಿಕ್ರಾಂತ್, 40,000 ಟನ್ ಗಳಷ್ಟು ಭಾರವಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಪ್ರಸ್ತುತ ಹಡಗು ಮೂಲ ಪರೀಕ್ಷೆಯ ಬಳಿಕ ಸಾಗರದಲ್ಲಿ ಪ್ರಾಯೋಗಿಕ ಸಂಚಾರ ಪರೀಕ್ಷೆಗೆ ಒಳಪಡಲಿದೆ. ತದಾ ಬಳಿಕ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಲಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಭಾರತದ ಅತಿ ದೊಡ್ಡ ವಿಮಾನ ಹೊತ್ತೊಯ್ಯುವ ಹಡಗಾಗಿರುವ ಐಎನ್ ಎಸ್ ವಿಕ್ರಾಂತ್ ಮೂಲ ವಿನ್ಯಾಸವನ್ನು ಭಾರತೀಯ ನೌಕಾಸೇನೆಯ ನೌಕಾ ವಿನ್ಯಾಸದ ನಿರ್ದೇಶನಾಲಯವು ರಚಿಸಿದೆ. ಬಳಿಕ ಇದನ್ನು ಸಿಎಸ್ ಎಲ್ ತಂಡವು ಅಭಿವೃದ್ಧಿಪಡಿಸಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

260 ಮೀಟರುಗಳಷ್ಟು ಉದ್ದವನ್ನು ಹೊಂದಿರುವ ಪ್ರಸ್ತುತ ಹಡಗು 60 ಮೀಟರ್ ಗಳಷ್ಟು ಅಗಲವಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಐಎನ್ಎಸ್ ವಿಕ್ರಾಂತ್ ಹಡಗಿನಲ್ಲಿ ಎರಡು ಟೇಕ್ ಆಫ್ ಹಾಗೂ ಒಂದು ಲ್ಯಾಂಡಿಂಗ್ ಸ್ಟ್ರಿಪ್ ಇರಲಿದೆ. ಇದು ಹಗುರ ವಾಣಿಜ್ಯ ವಿಮಾನ ಸೇರಿದಂತೆ ಹೆಲಿಕಾಪ್ಟರ್ ಹಾಗೂ ಸ್ಟೊಬಾರ್ (STOBAR) ವಿಮಾನಗಳ ಕಾರ್ಯ ನಿರ್ವಹಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಶಸ್ತ್ರಾಸ್ತ್ರಗಳ ಜೊತೆಗೆ ಮಿಗ್ 29ಕೆ, ಹಗುರ ಯುದ್ಧ ವಿಮಾನ, ಕೆಮೋವ್-31 ಹೆಲಿಕಾಪ್ಟರ್ ಸೇರಿದಂತೆ 36 ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

1,600 ಸಿಬ್ಬಂದಿಗಳಿಗೂ ಸಂಚರಿಸುವ ಅವಕಾಶವಿರಲಿದೆ. ಹಾಗೆಯೇ 2,700 ಕೀ.ಮೀ. ವ್ಯಾಪ್ತಿಯ ವರೆಗೆ ಆಕ್ರಮಣ ಮಾಡುವ ಸಾಮರ್ಥ್ಯ ಹೊಂದಿರಲಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಅತಿ ಕಡಿಮೆ ಸ್ಥಳದಲ್ಲಿ ಟೆಕ್ ಆಫ್ ಮಾಡುವ ಸಾಮರ್ಥ್ಯ ಇದಕ್ಕಿರಲಿದೆ. ಒಟ್ಟಿನಲ್ಲಿ ಭಾರತೀಯ ರಕ್ಷಣಾ ಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಅಂತಿಮವಾಗಿ 2018ರ ವರ್ಷಾಂತ್ಯದಲ್ಲಿ ಐಎನ್ಎಸ್ ವಿಕ್ರಾಂತ್, ಭಾರತೀಯ ನೌಕಾದಳವನ್ನು ಸೇರ್ಪಡೆಯಾಗಲಿದೆ.

ದೇಶದ ಮೊದಲ ದೇಶೀಯ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್

ಈಗ ಐಎನ್ಎಸ್ ವಿಕ್ರಾಂತ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
Read more on ಭಾರತ
English summary
India crossed a major milestone in defence shipbuilding on Wednesday when the maiden indigenous aircraft carrier INS Vikrant was undocked on completion of structural work at the State-owned Cochin Shipyard.
Story first published: Monday, June 15, 2015, 9:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X