ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

By Nagaraja

ಯುದ್ಧ ವಿಮಾನ ವಾಹಕಗಳಾದ ಕದನ ನೌಕೆಗಳನ್ನು ಸಮುದ್ರದಲ್ಲಿ ತೇಲುವ ವಾಯುನೆಲೆಯೆಂದೇ ಬಿಂಬಿಸಲಾಗುತ್ತದೆ. ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ಲ್ಯಾಂಡ್ ಮತ್ತು ಟೇಕ್ ಆಫ್ ಮಾಡುವುದರೊಂದಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಾಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ.

ಯುದ್ಧ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುವುದು ದುಬಾರಿಯೆನಿಸುತ್ತದೆ. ಹಾಗಾಗಿ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ವಿಮಾನ ವಾಹಕ ಯುದ್ಧ ನೌಕೆಗಳನ್ನು ಹೊಂದಿದೆ. ವಿವಿಧ ಶ್ರೇಣಿಯ ಫೈಟರ್ ವಿಮಾನ, ಹೆಲಿಕಾಪ್ಟರ್ ಜೊತೆಗೆ ಅಣ್ವಸ್ತ್ರಗಳನ್ನು ಹೊತ್ಯೊಯ್ಯುವ ಸಾಮರ್ಥ್ಯವನ್ನು ಇದು ಪಡೆದಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಎರಡನೇ ಮಹಾಯುದ್ಧ ಕಾಲಘಟ್ಟದಲ್ಲಿ ಜಪಾನ್ ಜಲಾಂತರ್ಗಾಮಿ ವಿಮಾನ ವಾಹಕಗಳನ್ನು ಹೊಂದಿದ್ದವು. ಇವುಗಳು ಶತ್ರು ರಾಷ್ಟ್ರಗಳಿಗೆ ಅರಿಯದೇ ಮೂರು ವಿಮಾನಗಳನ್ನು ನೀರಿನಡಿಯಲ್ಲಿ ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಅಮೆರಿಕದ ವಿಮಾನ ವಾಹಕ ನೌಕೆಯು ಎಷ್ಟು ಬಲಶಾಲಿಯೆಂದರೆ ಇತರೆಲ್ಲ ದೇಶದ ವಿಮಾನ ವಾಹಕ ನೌಕೆಗಳನ್ನು ಒಟ್ಟುಗೂಡಿಸಿದರೆ ಶೇಕಡಾ 70ರಷ್ಟಕ್ಕೆ ಸಮವಾಗಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಫ್ರಾನ್ಸ್‌ನ ವಿಮಾನ ವಾಹಕ ಹಡಗಿಗೆ ಒಂದನೇ ಮಹಾಯುದ್ಧ ಕಾಲಘಟ್ಟದಲ್ಲಿದ್ದ ಮಾಜಿ ಜನರಲ್ ಮತ್ತು ಮಾರ್ಷಲ್ ಫೆರ್ಡಿನಾಂಡ್ ಫೋಚ್ ಎಂಬವರ ಹೆಸರನ್ನಿಡಲಾಗಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಮಗದೊಂದು ಕುತೂಹಲದಾಯಕ ಸಂಗತಿಯೆಂದರೆ ಹಿಂದೊಮ್ಮೆ ಇಬೇ ವೆಬ್ ಸೈಟ್ ಮೂಲಕ ತನ್ನ ವಿಮಾನ ವಾಹಕ ನೌಕೆಯನ್ನು ಮಾರಾಟ ಮಾಡಲು ಬ್ರೆಜಿಲ್ ಶ್ರಮಿಸಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಅಮೆರಿಕದ ಗೇರಾಲ್ಡ್ ಆರ್.ಫೋಲ್ಡ್ ಕ್ಲಾಸ್ ವಿಮಾನ ವಾಹಕ ನೌಕೆಯನ್ನು ನಿರ್ವಹಿಸಲು ಒಂದು ದಿನದಲ್ಲಿ 7 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚಾಗುತ್ತಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಇಂಧನ ಮರು ತುಂಬದೆಯೇ ನಿಮಿಟ್ಜ್ ಕ್ಲಾಸ್ ಯುದ್ಧ ವಿಮಾನ ವಾಹಕಗಳನ್ನು 20 ವರ್ಷಗಳ ವರೆಗೆ ಬಳಕೆ ಮಾಡಬಹುದಾಗಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಎರಡನೇ ಮಹಾಯುದ್ಧ ಕಾಲಘಟ್ಟದಲ್ಲಿ ತನ್ನ ಪೈಲಟ್ ಗಳಿಗೆ ತರಬೇತಿ ನೀಡಲು ಎರಡು ಯುದ್ಧ ವಿಮಾನ ವಾಹಕ ನೌಕೆಗಳನ್ನು ಅಮೆರಿಕ ಬಳಕೆ ಮಾಡಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಅಮೆರಿಕ ಹೊರತಾಗಿ ಅಣ್ವಸ್ತ್ರ ಚಾಲಿತ ವಿಮಾನ ವಾಹಕ ನೌಕೆ ಹೊಂದಿರುವ ಏಕೈಕ ರಾಷ್ಟ್ರ ಫ್ರಾನ್ಸ್ ಆಗಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಅತ್ಯಂತ ಶಕ್ತಿಶಾಲಿ ಸಿ-130 ಹೆರ್ಕ್ಯೂಲಿಸ್ ಯುದ್ಧ ವಿಮಾನ ಲ್ಯಾಂಡ್ ಮತ್ತು ಟೇಕ್ ಆಫ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಜರ್ಮನಿಯ ವಿರುದ್ಧವಾಗಿ ಮರದ ತಿರುಳು ಮತ್ತು ಮಂಜುಗಡ್ಡೆಯಿಂದ ವಿಮಾನ ವಾಹಕ ಯುದ್ಧ ನೌಕೆ ನಿರ್ಮಿಸಲು ಬ್ರಿಟನ್ ಯೋಚನೆ ನಡೆಸಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

1970ರಲ್ಲಿ ಬೋಯಿಂಗ್ 747 ವಿಮಾನದಿಂದ ವಿಮಾನ ವಾಹಕ ಯುದ್ಧ ಹಡಗು ನಿರ್ಮಿಸಲು ಅಮೆರಿಕ ಯೋಜನೆ ಹಾಕಿಕೊಂಡಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

1929ರಲ್ಲಿ ಟಕೊಮಾ ನಗರಕ್ಕೆ ಒಂದು ತಿಂಗಳಷ್ಟು ಕಾಲ ವಿದ್ಯುತ್ ರವಾನಿಸಲು ಅಮೆರಿಕದ ಯುಎಸ್‌ಎಸ್ ಲೆಕ್ಸಿಂಗ್ಟನ್ ಸಿವಿ-2 ಯುದ್ಧ ವಾಹಕ ನೌಕೆ ನೆರವಾಗಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

1957ರಲ್ಲಿ ಕಡಲ್ಗಳ್ಳರಂತೆ ಬಟ್ಟೆಗಳನ್ನು ಧರಿಸಿದ ಸಿಡ್ನಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಡಗು ವಾಹಕ ನೌಕೆಗೆ ತಲುಪಿ ತಾವು ನೌಕೆಯನ್ನು ವಶಪಡಿಸಿಕೊಂಡಿದ್ದೆವು ಎನ್ನುವ ಮೂಲಕ ರೋಚಕ ಕ್ಷಣಗಳನ್ನು ಸೃಷ್ಟಿ ಮಾಡಿದ್ದರು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ವಿಮಾನ ವಾಹಕ ನೌಕೆ ನಿರ್ಮಿಸಿದ ಜಪಾನ್ ತನ್ನ ಮೊದಲ ಪಯಣದಲ್ಲೇ ನೀರಿನೊಳಗೆ ಮುಳುಗಡೆಗೊಂಡಿತ್ತು.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ವಿಮಾನದಲ್ಲಿ ವಾಹಕ ಯುದ್ಧ ನೌಕೆಯಲ್ಲಿ ಫ್ಲೈಟ್ ಡೆಕ್ ಕಾರ್ಯಾಚರಣೆ ನಿರ್ವಹಿಸುವ ಕಮಾಂಡ್ ಸೆಂಟರ್ ಭಾಗವನ್ನು 'ದ್ವೀಪ' ಎಂದು ಕರೆಯಲಾಗುತ್ತದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

2016 ಮೇ 25ರಂದು ಬಿಡುಗಡೆಯಾಗಿರುವ ಲೆಕ್ಕಾಚಾರ ಪ್ರಕಾರ ಜಗತ್ತಿನೆಲ್ಲೆಡೆಯ 12 ನಾವಿಕ ಸೇನೆಯಲ್ಲಾಗಿ ಒಟ್ಟು 37 ಯುದ್ದ ವಿಮಾನ ವಾಹಕ ಹಡಗುಗಳು ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಅಮೆರಿಕದ ಬಳಿ 10 ನ್ಯೂಕ್ಲಿಯರ್ ಚಾಲಿತ ಯುದ್ದ ವಾಹಕ ಯುದ್ಧ ನೌಕೆಗಳಿವೆ. ಸೂಪರ್ ಕೇರಿಯರ್ ಎನಿಸಿಕೊಳ್ಳುವ ಇವುಗಳು 90 ಯುದ್ಧ ವಿಮಾನಗಳನ್ನು ಸಾಗಿಸಬಲ್ಲಬಹುದಾಗಿದೆ.

ಯುದ್ಧ ವಿಮಾನ ವಾಹಕ ನೌಕೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಭಾರತ ಸಹ ಐಎನ್‌‍ಎಸ್ ವಿಕ್ರಮಾದಿತ್ಯ ಮತ್ತು ಐಎನ್‌ಎಸ್ ವಿರಾಟ್ ಗಳಂತಹ ಶಕ್ತಿಶಾಲಿ ಯುದ್ಧ ವಿಮಾನ ವಾಹಕ ನೌಕೆಗಳನ್ನು ಹೊಂದಿದೆ. ಇವೆರಡು ಅನುಕ್ರಮವಾಗಿ 45,400 ಮತ್ತು 28,700 ಟನ್ ಗಳಷ್ಟು ಭಾರವನ್ನು ಪಡೆದಿದೆ.

ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಶಾಲ್ ಭವಿಷ್ಯ ಭಾರತದ ಯುದ್ಧ ವಿಮಾನ ವಾಹಕ ನೌಕೆಗಳಾಗಿದೆ.

Most Read Articles

Kannada
English summary
Interesting Facts About Aircraft Carriers
Story first published: Thursday, May 26, 2016, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X