ತಿರುವುಗಳಲ್ಲಿ ಅಪಘಾತ ತಡೆಯಲು ಹೊಸ ಪ್ಲ್ಯಾನ್- ಏನಿದು ರೋಲಿಂಗ್ ಗಾರ್ಡ್ರೈಲ್?

Written By:

ರೋಲಿಂಗ್ ಗಾರ್ಡ್ರೈಲ್ ತಂತ್ರಜ್ಞಾನದ ಮೂಲಕ ಹೆದ್ದಾರಿ ತಿರುವುಗಳಲ್ಲಿ ಆಗಬಹುದಾದ ಭಾರೀ ಅನಾಹುತಗಳನ್ನು ತಪ್ಪಿಸಬಹುದಾಗಿದ್ದು, ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ಇದು ಜನಪ್ರಿಯತೆ ಹೊಂದುತ್ತಿದೆ.

ಏನಿದು ರೋಲಿಂಗ್ ಗಾರ್ಡ್ರೈಲ್?
ರೋಲಿಂಗ್ ಗಾರ್ಡ್ರೈಲ್ ಎನ್ನುವುದು ಒಂದು ವಿಶೇಷ ತಂತ್ರಜ್ಞಾನವಾಗಿದ್ದು, ಕಡಿದಾದ ರಸ್ತೆ ತಿರುವುಗಳಲ್ಲಿ ಇವುಗಳನ್ನು ತಡೆಗೊಡೆಯಾಗಿ ಬಳಕೆ ಮಾಡಬಹುದಾಗಿದೆ.

ಸಾಮಾನ್ಯ ನಾವು ನೀವೆಲ್ಲಾ ನೋಡಿರುವ ಹಾಗೆ ರಸ್ತೆ ತಿರುವುಗಳಲ್ಲಿ ಹಾಕಲಾಗುವ ಕಬ್ಬಿಣದ ತಡೆಗೊಡೆ ರೀತಿಯಲ್ಲೇ ಇವುಗಳು ಕೂಡಾ ಇದ್ದು, ಕಬ್ಬಿಣದ ಸರಳುಗಳ ಮಧ್ಯೆ ತಿರುಗಬಲ್ಲ ಬ್ಯಾರಲ್‌ಗಳನ್ನು ಹಾಕಲಾಗಿರುತ್ತದೆ.

ರೋಲಿಂಗ್ ಗಾರ್ಡ್ರೈಲ್‌ನಿಂದ ಏನು ಪ್ರಯೋಜನ?
ಕಡಿದಾದ ರಸ್ತೆ ತಿರುವುಗಳಲ್ಲಿ ವಾಹನಗಳು ಡಿಕ್ಕಿಯಾದಲ್ಲಿ ಯಾವುದೇ ಹಾನಿಯಾಗದಂತೆ ತಡೆಯುತ್ತದೆ. ರೋಲಿಂಗ್ ಗಾರ್ಡ್ರೈಲ್ ಇದ್ದಲ್ಲಿ ವಾಹನಗಳು ಮುಂದುಕ್ಕೆ ಚಲಿಸುವ ಮೂಲಕ ಅಪಘಾತದ ತೀವ್ರತೆಯನ್ನು ತಡೆಯುತ್ತವೆ.

ರೋಲಿಂಗ್ ಗಾರ್ಡ್ರೈಲ್‌ಗಳು ಉಕ್ಕಿನ ಪ್ಲೇಟ್‌ಗಳಿಂದ ಸಂಯೋಜಿಸಲ್ಪಟ್ಟಿದ್ದು, ಅಪಘಾತದ ಸಂದರ್ಭದಲ್ಲಿ ವಿಶಿಷ್ಟವಾದ ರಕ್ಷಾಕವಚಗಳು ಸಂಪೂರ್ಣ ಸುರಕ್ಷತೆಯನ್ನು ಖಾತರಿಪಡಿಸುವುದಿಲ್ಲವಾದ್ರು ಅಪಘಾತಗಳ ಭೀಕರತೆಯನ್ನು ತಡೆಯುತ್ತವೆ.

ದಕ್ಷಿಣ ಕೊರಿಯಾದ ಮೂಲದ ಕಂಪನಿಯೊಂದು ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿದ್ದು, ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ಗಾರ್ಡ್ರೈಲ್ ತಂತ್ರಜ್ಞಾನ ಹಂತ ಹಂತವಾಗಿ ಜಾರಿಯಾಗುತ್ತಿದೆ.

ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು, "ರೋಲಿಂಗ್ ಬ್ಯಾರಿಯರ್ ಸಿಸ್ಟಮ್" ಅನ್ನು ವಿನ್ಯಾಸಗೊಳಿಸಿರುವ ಇಟಿಐ ಸಂಸ್ಥೆಯು, ಸದ್ಯ ವಿಶ್ವದ ಮಟ್ಟದಲ್ಲಿ ಜನಪ್ರಿಯತೆಗೆ ಕಾರಣವಾಗಿದೆ.

ಭಾರತದಲ್ಲಿ ರೋಲಿಂಗ್ ಗಾರ್ಡ್ರೈಲ್‌ ತಂತ್ರಜ್ಞಾನ ಇನ್ನು ಬಂದಿಲ್ಲವಾದರೂ, ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆದಿವೆ.

ಫೆಡರಲ್ ಹೈವೇ ಅಡ್ಮಿನಿಸ್ಟ್ರೇಷನ್ ಪ್ರಕಾರ, ಇದೊಂದು ಅತ್ಯುತ್ತಮ ತಂತ್ರಜ್ಞಾನವಾಗಿದ್ದು, ಸಂಪೂರ್ಣ ಸುರಕ್ಷತೆ ಸಿಗುವುದಿಲ್ಲವಾದರೂ ಅಪಘಾತಗಳ ಭೀಕರತೆಯನ್ನು ತಗ್ಗಿಸಬಹುದಾಗಿದೆ ಎನ್ನಲಾಗಿದೆ.

ರಾತ್ರಿ ಅವಧಿಯಲ್ಲೂ ಕಾರ್ಯನಿರ್ವಹಣೆ
ರಾತ್ರಿ ಅವಧಿಯಲ್ಲೂ ರೋಲಿಂಗ್ ಗಾರ್ಡ್ರೈಲ್‌ ತಡೆಗೊಡೆಯು ವಾಹನ ಸವಾರಿಗೆ ನಿಚ್ಚಳವಾಗಿ ಕಾಣಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಬ್ಯಾರೆಲ್‌ಗಳ ಮೇಲೆ ರೇಡಿಮ್ ತಂತ್ರಜ್ಞಾನ ಬಳಸಾಗಿದ್ದು, ರಸ್ತೆ ತಿರುವುಗಳು ಸ್ಪಷ್ಟವಾಗಿ ಗೋಚರವಾಗುತ್ತವೆ.

ಒಟ್ಟು ಮೂರು ಆಯಾಮದಲ್ಲಿ ತಿರುಗುವ ಬ್ಯಾರೆಲ್‌ಗಳನ್ನು ಅಳವಡಿಸಲಾಗಿದ್ದು, ವಾಹನಗಳು ಎಷ್ಟೇ ರಭಸದಿಂದ ಡಿಕ್ಕಿ ಹೊಡೆದರೂ ತಡೆದುಕೊಳ್ಳಬಲ್ಲ ಶಕ್ತಿ ಹೊಂದಿದೆ.

ಭಾರತದಲ್ಲೂ ರೋಲಿಂಗ್ ಗಾರ್ಡ್ರೈಲ್ ತಂತ್ರಜ್ಞಾನ ಜಾರಿ ಅವಶ್ಯಕತೆ ಇದ್ದು, ಕೂಡಲೇ ಈ ಯೋಜನೆ ಕಾರ್ಯರೂಪಕ್ಕೆ ತರಬೇಕಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭೀಕರ ಅಪಘಾತಗಳನ್ನು ತಗ್ಗಿಸಬಹುದಾಗಿದೆ.

Click to compare, buy, and renew Car Insurance online

Buy InsuranceBuy Now

Story first published: Friday, April 28, 2017, 17:12 [IST]
English summary
This New Korean Rolling Barrier System Could Save Millions of Lives.
Please Wait while comments are loading...

Latest Photos