ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

By Nagaraja

ಆಕಸ್ಮಿಕವಾಗಿ ಕಾರಿನೊಳಗೆ ಸಿಕ್ಕಿಹಾಕಿಕೊಂಡ ರಾಣಿ ಜೇನಿನ ಅರಿವಿಲ್ಲದೆ ಕಾರು ಚಾಲನೆ ಮಾಡುತ್ತಿದ್ದ 65ರ ಹರೆಯ ವಯೋವೃದ್ಧೆಗೆ ಜೇನ್ನೊಣಗಳ ಹಿಂಡೊಂದು ದಿನವಿಡೀ ಅಟ್ಟಾಡಿಸಿರುವ ಘಟನೆ ಬ್ರಿಟನ್‌ನಿಂದ ವರದಿಯಾಗಿದೆ.

ಬ್ರಿಟನ್‌ನ ವೆಸ್ಟ್ ವೇಲ್ಸ್‌ನ ಹವರ್ ಫೋರ್ಡ್ ವೆಸ್ಟ್ ನಲ್ಲಿರುವ ಪ್ರಕೃತಿ ಧಾಮದಿಂದ ಘಟನೆ ವರದಿಯಾಗಿದ್ದು, ಬರೋಬ್ಬರಿ 20,000ದಷ್ಟು ಜೇನು ಹುಳಗಳು ರಾಣಿಯ ರಕ್ಷಣೆಗಾಗಿ ಸಿನೆಮೇಯಾ ಶೈಲಿಯಲ್ಲಿ ಧಾವಿಸಿತ್ತಲ್ಲದೆ 24 ತಾಸು ಕಾರನ್ನು ಬೆಂಬಿಡದೆ ಹಿಂಬಾಲಿಸಿತ್ತು.

ಏನಿದು ಘಟನೆ?

ಏನಿದು ಘಟನೆ?

ಪ್ರಕೃತಿ ಧಾಮದಲ್ಲಿ ಕಾರು ನಿಲ್ಲಿಸಿದ್ದ 65ರ ಹರೆಯದ ಕ್ಯಾರಲ್ ಹೊವಾರ್ತ್ ಕಾರಿನೊಳಗೆ ರಾಣಿ ಜೇನು ಸಿಕ್ಕಿ ಹಾಕಿಕೊಂಡಿತ್ತು. ಬಳಿಕ ಕಾರಿನಲ್ಲಿ ಮನೆಗೆ ಹಿಂತಿರುವ ಪ್ರಯತ್ನದಲ್ಲಿರುವ ಮಹಿಳೆಗೆ ಜೇನ್ನೊಣಗಳು ಮುತ್ತಿಕ್ಕಿಕೊಂಡಿತ್ತು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಕಾರಿನ ಹಿಂಬದಿಯಲ್ಲಿ ಜೇನ್ನೊಣಗಳ ಅರಿವಿಲ್ಲದ ಅಜ್ಜಿ ಕಾರನ್ನು ವೇಗವಾಗಿ ಚಾಲನೆ ಮಾಡುತ್ತಾ ಬಂದಿದ್ದರು. ಆದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರಿರುವ ಜೇನ್ನೊಣಗಳು ಕಾರನ್ನು ಹಿಂಬಾಲಿಸಿತ್ತು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಬಳಿಕ ಈ ಘಟನೆಯಿಂದ ಬೆಚ್ಚಿ ಬಿದ್ದಿರುವ ವೃದ್ಧೆ, ತಾನೆಂದು ಜೀವನದಲ್ಲಿ ಇಂತಹ ಅನುಭವವನ್ನು ಎದುರಿಸಿಯೇ ಇಲ್ಲ ಎಂದು ಭಯಭೀತರಾಗಿ ನುಡಿದಿದ್ದಾರೆ.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಕಳೆದ ಭಾನುವಾರ ಊಟದ ವೇಳೆಯಲ್ಲಿ ಹವರ್ ಫೋರ್ಡ್ ವೆಸ್ಟ್ ನಲ್ಲಿ ಕಾರು ನಿಲ್ಲಿಸಿ ಶಾಂಪಿಂಗ್ ಗೆ ತೆರಳಿದ್ದರು. ಇದನ್ನು ಗಮನಿಸಿದ ನ್ಯಾಷನಲ್ ಪಾರ್ಕ್ ರೇಂಜರ್ ನ ಮೂವರು ಜೇನ್ನೊಣ ಹಿಡಿಯುವ ತಂಡ ಸಾರ್ವಜನಿಕರ ಸಹಾಯದಿಂದ ಕಾರ್ಡ್ ಬಾಕ್ಸ್ ನೊಳಗೆ ಉಪಾಯದಿಂದ ಸೇರಿಸಿದ್ದರು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಈ ಭಯಾನಕ ದೃಶ್ಯವನ್ನು ನೋಡಿದ ಪೆಂಬ್ರೋಕ್‌ಶಯರ್‌ ಕೋಸ್ಟ್‌ ನ್ಯಾಶನಲ್‌ ಪಾರ್ಕ್‌ ರೇಂಜರ್‌ ಆಗಿರುವ ಟಾಮ್ ಮೋಸೆಸ್ ತಕ್ಷಣವೇ ಜಾಗೃತಗೊಳಿಸಿದರು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಅಪಾಯವನ್ನು ಅರಿತ ಅವರು ಪೆಂಬ್ರೋಕ್‌ಶಯರ್‌ ಜೇನು ಸಂಗ್ರಹಾಲಯ ಸಂಸ್ಥೆಯ ಇಬ್ಬರನ್ನು ಸಂಪರ್ಕಿಸಿದರು. ಬಳಿಕ ಜೇನ್ನೊಣಗಳನ್ನು ಸೆರೆ ಹಿಡಿಯಲಾಯಿತು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಆದರೆ ಇಲ್ಲಿಗೆ ಸಮಸ್ಯೆ ಕೊನೆಗೊಂಡಿರಲಿಲ್ಲ. ಸಮಸ್ಯೆ ಬಗೆಹರಿತ್ತೆಂದು ಮನೆಗೆ ಹಿಂತಿರುಗಿದ್ದ ಅಜ್ಜಿಗೆ ಸೋಮವಾರ ಬೆಳಗ್ಗೆ ಕಾರನ್ನು ನೋಡಿದಾಗ ಮಗದೊಮ್ಮೆ ಅಚ್ಚರಿ ಕಾದಿತ್ತು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಆರಂಭದಲ್ಲಿ ಕೀಟನಾಶಕ ಸಿಂಪಡಿಸಿ ಜೇನ್ನೊಣಗಳನ್ನು ನಾಶಪಡಿಸುವ ಇರಾದೆ ಹೊಂದಿತ್ತಾದರೂ ಬಳಿಕ ಜೇನು ನೋಣ ಸಂರಕ್ಷಕರಿಗೆ ಕರೆ ಮಾಡಲಾಗಿತ್ತು.

ರಾಣಿಯ ರಕ್ಷಣೆಗಾಗಿ ಸಿನೆಮಾ ಶೈಲಿಯಲ್ಲಿ ದಿನವಿಡೀ ಕಾರನ್ನು ಅಟ್ಟಾಡಿಸಿದ ಜೇನ್ನೊಣಗಳು!

ಮೊದಲ ಬಾರಿಗೆ ಸೆರೆ ಹಿಡಿದಾಗ ರಾಣಿ ಜೇನ್ನೊಣ ಸಿಕ್ಕಿಯೇ ಇರಲಿಲ್ಲವಂತೆ. ಆದರೆ ಎರಡನೇ ಬಾರಿಯ ಪ್ರಯತ್ನದಲ್ಲಿ ಎಲ್ಲ ಜೇನು ಹುಳಗಳನ್ನು ಸೆರೆ ಹಿಡಿಯುವಲ್ಲಿ ಸಂರಕ್ಷಕರು ಯಶಸ್ವಿಯಾದರು.

Most Read Articles

Kannada
Read more on ಕಾರು car
English summary
Swarm Of 20,000 Bees Chased A Car For 24 Hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X