YouTube

ಪುರುಷರ ನೆಚ್ಚಿನ ಟಾಪ್ 10 ಕಾರು ಬ್ರಾಂಡ್

By Nagaraja

ಸಮಾಜದಲ್ಲಿ ಮಹಿಳೆಯರನ್ನು ಹೋಲಿಸಿದಾಗ ಪುರುಷ ವಿಭಾಗವು ಅತಿ ಹೆಚ್ಚು ಕಾರು ಮಾಲಿಕತ್ವವನ್ನು ಹೊಂದಿರುತ್ತಾರೆ. ಇದಕ್ಕಾಗಿಯೇ ಸ್ವಲ್ಪ ವರ್ಷದ ಹಿಂದಿನ ವರೆಗೂ ಕಾರನ್ನು ಪುರುಷರ ಆಟಿಕೆ ವಸ್ತು ಎಂದೇ ಕರೆಯಲಾಗುತ್ತಿತ್ತು. ಆದರೆ ಪರಿಸ್ಥಿತಿ ಬದಲಾಗುತ್ತಿದ್ದು, ಕಾರು ಹೊಂದಿರುವ ಮಹಿಳೆಯರ ಸಂಖ್ಯೆಯಲ್ಲೂ ಗಣನೀಯ ವರ್ಧನೆ ಕಂಡುಬರುತ್ತಿದೆ.

ಅಷ್ಟಕ್ಕೂ ಪುರುಷರ ನೆಚ್ಚಿನ ಕಾರು ಬ್ರಾಂಡ್ ಗಳು ಯಾವುವು? ಮಾರ್ಕೆಟ್ ವಾಚ್ ಹಮ್ಮಿಕೊಂಡಿರುವ ಅಧ್ಯಯನ ವರದಿ ಪ್ರಕಾರ ಮಹಿಳಾ ಮಾಲಿಕತ್ವ ಹೊಂದಿರುವ ಕಾರುಗಳ ಸಂಖ್ಯೆಯಲ್ಲಿ ವರ್ಧನೆ ಕಂಡುಬಂದಿದೆ. ಆದರೂ ನಿರ್ವಹಣಾ ಕಾರುಗಳನ್ನು ಪುರುಷರು ಹೆಚ್ಚಾಗಿ ಇಷ್ಟಪಡುತ್ತಾರೆ. ಅಷ್ಟಕ್ಕೂ 10 ಲಕ್ಷ ಕಾರುಗಳ ಮಾಲಿಕತ್ವ ದಾಖಲಾತಿ ಆಧಾರದಲ್ಲಿ ತಯಾರಿಸಲಾಗದ ಪಟ್ಟಿಯ ಪ್ರಕಾರ ಪುರುಷರ ನೆಚ್ಚಿನ ಕಾರು ಬ್ರಾಂಡ್ ಗಳು ಯಾವುವು? ಇವುಗಳಲ್ಲಿ ಪುರುಷ-ಮಹಿಳಾ ಅನುಪಾತವೆಷ್ಟು ಎಂಬುದನ್ನು ತಿಳಿದುಕೊಳ್ಳಲು ಮುಂದುವರಿಯಿರಿ...

10. ಟೆಸ್ಲಾ

10. ಟೆಸ್ಲಾ

ನಿಮಗಿದು ಗೊತ್ತೇ? ಟೆಸ್ಲಾದಿಂದ ಮಾರಾಟವಾಗುವ ಕಾರುಗಳ ಪೈಕಿ ಶೇಕಡಾ 83ರಷ್ಟು ಮಾಲಿಕತ್ವವನ್ನು ಪುರುಷ ವಿಭಾಗ ಹೊಂದಿದೆ. ಅಂದರೆ ಟೆಸ್ಲಾ ವಿದ್ಯುತ್ ಚಾಲಿತ ಕಾರುಗಳ ಮೇಲೆ ಮಹಿಳೆಯರಿಗಿಂತ ಪುರುಷರು ಹೆಚ್ಚು ಆಸಕ್ತಿ ತೋರಿದ್ದಾರೆ.

09. ರೋಲ್ಸ್ ರಾಯ್ಸ್

09. ರೋಲ್ಸ್ ರಾಯ್ಸ್

ಅತಿ ಪುರಾತನ ಕಾರು ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್ ಈ ಸಾಲಿನಲ್ಲಿ ಒಂಬತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ರೋಲ್ಸ್ ರಾಯ್ಸ್ ಒಟ್ಟು ಮಾಲಿಕತ್ವದ ಶೇ. 84ರಷ್ಟನ್ನು ಪುರುಷ ವಿಭಾಗವು ಹೊಂದಿದೆ.

08. ಮಸೆರಟಿ

08. ಮಸೆರಟಿ

ಅದೇ ರೀತಿ ಶೇಕಡಾ 84ರಷ್ಟು ಮಸೆರಟಿ ಕಾರುಗಳ ಮಾಲಿಕತ್ವವನ್ನು ಪುರುಷ ವಿಭಾಗ ಹೊಂದಿದ್ದಾರೆ.

 07. ರಾಮ್

07. ರಾಮ್

ವಿದೇಶಗಳಲ್ಲಿ ಮಸಲರ್ ಪಿಕಪ್ ಟ್ರಕ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇದೇ ಕಾರಣಕ್ಕಾಗಿ ಇಂತಹ ಶಕ್ತಿಶಾಲಿ ವಾಹನಗಳನ್ನು ಪುರುಷರು ಹೆಚ್ಚಾಗಿ ಇಷ್ಟಪಡುತ್ತಿದ್ದು, ಶೇ.84ರಷ್ಟು ರಾಮ್ ಪಿಕಪ್ ಟ್ರಕ್ ಗಳನ್ನು ಪುರುಷರು ಹೊಂದಿದ್ದಾರೆ.

06. ಲೋಟಸ್

06. ಲೋಟಸ್

ಜನಪ್ರಿಯ ಕಾರು ಬ್ರಾಂಡ್ ಲೋಟಸ್ ನಲ್ಲೂ ಪುರುಷ ಅಧಿಪತ್ಯ ಕಾಣಬಹುದಾಗಿದ್ದು, ಶೇಕಡಾ 86ರಷ್ಟು ಮಂದಿ ಲೋಟಸ್ ಕಾರುಗಳನ್ನು ಹೊಂದಿದ್ದಾರೆ.

05. ಫಿಸ್ಕರ್

05. ಫಿಸ್ಕರ್

ಕ್ಯಾಲಿಫೋರ್ನಿಯಾ ತಳಹದಿಯ ಫಿಸ್ಕರ್ ಕಾರುಗಳ ಶೇಕಡಾ 87ರಷ್ಟು ಮಾಲಿಕತ್ವವನ್ನು ಪುರುಷರು ಹೊಂದಿದ್ದಾರೆ.

04. ಆಸ್ಟನ್ ಮಾರ್ಟಿನ್

04. ಆಸ್ಟನ್ ಮಾರ್ಟಿನ್

ವಿಶ್ವ ಪ್ರಸಿದ್ಧ ಆಸ್ಟನ್ ಮಾರ್ಟಿನ್ ತನ್ನದೇ ಆದ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡಿದ್ದಾರೆ. ಅಷ್ಟಕ್ಕೂ ಶೇ. 88ರಷ್ಟು ಪುರುಷ ವಿಭಾಗವು ಆಸ್ಟನ್ ಕಾರುಗಳ ಮಾಲಿಕತ್ವ ಹೊಂದಿದ್ದಾರೆ ಅಂದರೆ ನಂಬಲಾರ್ಹವೇ?

03. ಫೆರಾರಿ

03. ಫೆರಾರಿ

ಇಟಲಿಯ ಫೆರಾರಿ ಸೂಪರ್ ಕಾರುಗಳು ಇದರಿಂದ ಹೊರತಲ್ಲ. ಅಂಕಿಅಂಶಗಳ ಪ್ರಕಾರ ಫೆರಾರಿ ಕಾರುಗಳ ಪೈಕಿ ಶೇಕಡಾ 92ರಷ್ಟನ್ನು ಪುರುಷ ಮಾಲಿಕತ್ವವನ್ನು ಪಡೆದುಕೊಂಡಿದೆ.

02. ಮೆಕ್ ಲ್ಯಾರೆನ್

02. ಮೆಕ್ ಲ್ಯಾರೆನ್

ಫೆರಾರಿ ತರಹನೇ ಎರಡನೇ ಸ್ಥಾನದಲ್ಲಿರುವ ಮೆಕ್ ಲ್ಯಾರೆನ್ ಕಾರುಗಳ ಶೇಕಡಾ 93ರಷ್ಟು ಮಾಲಿಕತ್ವವನ್ನು ಪುರುಷ ವಿಭಾಗ ಹೊಂದಿದೆ.

01. ಲಂಬೋರ್ಗಿನಿ

01. ಲಂಬೋರ್ಗಿನಿ

ಲಂಬೋರ್ಗಿನಿ ಕಾರುಗಳು ಪುರುಷ ಹಾಗೂ ಮಹಿಳಾ ಭೇದಭಾವವಿಲ್ಲದೆ ಎಲ್ಲ ವಿಭಾಗವವನ್ನು ಒಂದೇ ರೀತಿಯಲ್ಲಿ ಆಕರ್ಷಿಸಿದೆ. ಆದರೆ ಮಾಲಿಕತ್ವದ ವಿಚಾರಕ್ಕೆ ಬಂದಾಗ ಲಂಬೋರ್ಗಿನಿ ಕಾರುಗಳ ಪೈಕಿ ಶೇಕಡಾ 93ರಷ್ಟು ಮಾಲಿಕತ್ವವನ್ನು ಪುರುಷ ವಿಭಾಗ ಹೊಂದಿದೆ.

ಪುರುಷರ ನೆಚ್ಚಿನ ಟಾಪ್ 10 ಕಾರು ಬ್ರಾಂಡ್

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ

Most Read Articles

Kannada
English summary
Here are the ten most male dominated brands as per the information released by Marketwatch. 
Story first published: Tuesday, March 31, 2015, 14:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X