ಟಿವಿಎಸ್ ಅಪಾಚೆಗೆ ಬಿಎಂಡಬ್ಲ್ಯು ಮೊಟೊರಾಡ್ ತಾಂತ್ರಿಕ ನೆರವು

By Nagaraja

ಈಗಷ್ಟೇ ಬಿಎಂಡಬ್ಲ್ಯು ಮೊಟೊರಾಡ್ ಅತಿ ನೂತನ ಜಿ 310 ಆರ್ ಬೈಕ್ ಅನಾವರಣಗೊಳಿಸಿತ್ತು. ಇದರೊಂದಿಗೆ ಭಾರತದ ಮುಂಚೂಣಿಯ ಸಂಸ್ಥೆ ಟಿವಿಎಸ್ ಜೊತೆಗೆ ಜೊತೆಗಾರಿಕೆಯಲ್ಲಿ ಈ ಹೊಚ್ಚ ಹೊಸ ಬೈಕ್ ದೇಶಕ್ಕೂ ಪ್ರವೇಶವಾಗಲಿದೆ.

ಈ ನಡುವೆ ಟಿವಿಎಸ್ ತಂಡದಿಂದ ಮಗದೊಂದು ಬೈಕ್ ಸಿದ್ಧಗೊಳ್ಳುತ್ತಿದೆ. ಅದುವೇ 200 ಸಿಸಿ ಅಪಾಚೆ ಬೈಕ್. ಈ ಹಿಂದಿನ ಯಶಸ್ಸಿನಿಂದ ಪುಳಕಿತಗೊಂಡಿರುವ ಸಂಸ್ಥೆಯು ಬಿಎಂಡಬ್ಲ್ಯು ಮೊಟೊರಾಡ್ ತಾಂತ್ರಿಕ ನೆರವಿನಿಂದ ಅಪಾಚೆ 200 ಸಿಸಿ ನಿಕಟ ಭವಿಷ್ಯದಲ್ಲೇ ರಸ್ತೆಗಿಳಿಸಲಿದೆ.

ಟಿವಿಎಸ್ ಅಪಾಚೆ

ಈ ಹಿಂದೆ ಪ್ರದರ್ಶಿಸಲಾಗಿರುವ ಡ್ರೇಕನ್ ಕಾನ್ಸೆಪ್ಟ್ ಬೈಕ್ ನಲ್ಲಿರುವುದಕ್ಕೆ ಸಮಾನವಾದ ವೈಶಿಷ್ಟ್ಗಳು ಇಲ್ಲೂ ಕಂಡುಬರುವ ಸಾಧ್ಯತೆಯಿದೆ. ಇನ್ನು ಜಿ 310 ಆರ್ ಬೈಕ್ ನಲ್ಲಿರುವ ಸಿಂಗಲ್ ಸಿಲಿಂಡರ್ 200 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಬಳಕೆಯಾಗಲಿದೆ.

ಒಂದು ಪರಿಪೂರ್ಣ ಸ್ಟ್ರೀಟ್ ಫೈಟರ್ ಎನಿಸಿಕೊಳ್ಳಲಿರುವ ಅಪಾಚೆ ಆರಂಭಧಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆ ಪಡೆದುಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಆದರೆ ಆನಂತರದ ದಿನಗಳಲ್ಲಿ ಎಬಿಎಸ್ ಸೌಲಭ್ಯವೂ ದೊರಕಲಿದೆ. ಇನ್ನು ಪೈರಲ್ಲಿ ಡೆಮೊನ್ ಟ್ಯೂಬ್ ಲೆಸ್ ಚಕ್ರದ ಕೊರತೆಯೂ ಕಾಡಲಿದೆ.

ಅಂತೆಯೇ ಮೊನೊಶಾಕ್ ರಿಯರ್ ಸಸ್ಪೆನ್ಷನ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಟೈಲ್ ಲೈಟ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್, ವಿಭಜಿತ ಮುಂತಾದ ವೈಶಿಷ್ಟ್ಯಗಳು ಕಾಣಸಿಗಲಿದೆ.

ಟಿವಿಎಸ್ ಅಪಾಚೆ ಹಾಗೂ ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಗಳು ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ. ತದಾ ಬಳಿಕ ಈ ಬಹುನಿರೀಕ್ಷಿತ ಉತ್ಪನ್ನಗಳು ವಾಹನ ಪ್ರೇಮಿಗಳನ್ನು ತಲುಪಲಿದೆ.

Most Read Articles

Kannada
English summary
Upcoming TVS Apache 200 To Feature BMW Motorrad's Liquid-Cooling System
Story first published: Saturday, November 14, 2015, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X