ಟಾಟಾ ಟಿಯಾಗೊ; ಗುಣ-ದೋಷ ವಿಮರ್ಶೆ

By Nagaraja

ಭಾರತದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಲಿರುವ ಅತಿ ದೊಡ್ಡ ಬಿಡುಗಡೆಗಳಲ್ಲಿ 'ಟಾಟಾ ಟಿಯಾಗೊ' ಒಂದಾಗಿದೆ. ಟಾಟಾದ ನೂತನ ವಿನ್ಯಾಸ ತಂತ್ರಜ್ಞಾನದಲ್ಲಿ ನಿರ್ಮಾಣವಾಗುತ್ತಿರುವ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಮೇಲೆ ಟಾಟಾ ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

Also Read: ಟಾಟಾ ಝಿಕಾ ಸಂಪೂರ್ಣ ಚಾಲನಾ ವಿಮರ್ಶೆ

ಪ್ರಯಾಣಿಕ ಮಾರುಕಟ್ಟೆಯಲ್ಲಿ ಭರ್ಜರಿ ಪುನರಾಗಮನ ಎದುರು ನೋಡುತ್ತಿರುವ ಟಾಟಾ ಸಂಸ್ಥೆಗೆ ನೂತನ ಟಿಯಾಗೊ ವರದಾನವಾಗಲಿದೆಯೇ ಎಂಬುದನ್ನು ಈ ಹ್ಯಾಚ್ ಬ್ಯಾಕ್ ಕಾರಿನ ಗುಣ-ದೋಷಗಳ ಬಗ್ಗೆ ಚರ್ಚಿಸುವ ಮೂಲಕ ವಿವರಣೆಯನ್ನು ಕೊಡಲಿದ್ದೇವೆ. ಮಾರುಕಟ್ಟೆಯಲ್ಲಿ ಇಂಡಿಕಾ ಸ್ಥಾನವನ್ನು ತುಂಬಲಿರುವ ನೂತನ ಟಾಟಾ ಝಿಕಾ ಕಾರಿನಲ್ಲಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.

 ದೋಷಗಳು - ವಿನ್ಯಾಸ

ದೋಷಗಳು - ವಿನ್ಯಾಸ

ಬಹಳ ಹಿಂದಿನಿಂದಲೇ ನಿರ್ಮಾಣ ಗುಣಮಟ್ಟದ ಬಗ್ಗೆ ಟಾಟಾ ಸಂಸ್ಥೆಯ ವಿರುದ್ಧ ಟೀಕೆಗಳು ಎದ್ದೇಳುತ್ತಲೇ ಇದೆ. ಈ ನಿಟ್ಟಿನಲ್ಲಿ ನೂತನ ಟಿಯಾಗೊದಲ್ಲಿ ಸರಿದೂಗಿಸುವ ಪ್ರಯತ್ನ ಮಾಡಿದರೂ ಹಿಂದಿನ ಇಂಡಿಕಾಗೆ ಹೋಲುವ ವಿನ್ಯಾಸವನ್ನು ಪಡೆದಿರುವುದು ಸ್ವಲ್ಪ ಹಿನ್ನಡೆಗೆ ಕಾರಣವಾಗಲಿದೆ. ಇದರತ್ತ ಟಾಟಾ ಎಂಜಿನಿಯರಿಂಗ್ ಹೆಚ್ಚಿನ ಗಮನ ಹರಿಸಬೇಕಾಗಿತ್ತು.

ದೋಷಗಳು - ಎನ್‌ವಿಎಚ್ ಮಟ್ಟ

ದೋಷಗಳು - ಎನ್‌ವಿಎಚ್ ಮಟ್ಟ

ಡೀಸೆಲ್ ಕಾರುಗಳಲ್ಲಿ ಎನ್‌ವಿಎಚ್ (ನಾಯ್ಸ್, ವೈಬ್ರೇಷನ್, ಹಾರ್ಶ್) ಮಟ್ಟ ಜಾಸ್ತಿಯಾಗಿರುವುದರ ಹಿಂದಿನ ಕಾರಣ ನಮಗೆ ಅರ್ಥವಾಗಬಹುದು. ಆದರೆ ಟಾಟಾ ಟಿಯಾಗೊ ಪೆಟ್ರೋಲ್ ವೆರಿಯಂಟ್ ಸ್ಟ್ಯಾರ್ಟ್ ಮಾಡುವಾಗಲೇ ಹೆಚ್ಚಿನ ಶಬ್ದ ಹೊರ ಬೀರುವುದು ಅಷ್ಟು ಹಿತಕರವಾಗಿ ಅನಿಸುತ್ತಿಲ್ಲ. ಆದರೂ ಡೀಸೆಲ್ ಕಾರಿನಲ್ಲಿ ಅತ್ಯುತ್ತಮ ಎನ್‌ವಿಎಚ್ ಮಟ್ಟ ಕಾಪಾಡಿಕೊಳ್ಳಲಾಗಿದೆ.

ದೋಷಗಳು

ದೋಷಗಳು

ಎಸಿ ವೆಂಟ್ಸ್ ಸಂಪೂರ್ಣ ಮುಚ್ಚುಗಡೆಯಾಗುವುದಿಲ್ಲ. ಡೀಸೆಲ್ ಎಂಜಿನ್ ಪವರ್ ಬ್ಯಾಂಡ್ ಕಡಿಮೆ (ಗರಿಷ್ಠ ಅಶ್ವಶಕ್ತಿ ಹಾಗೂ ಗರಿಷ್ಠ ಟಾರ್ಕ್ ನಡುವಣ ವ್ಯಾಪ್ತಿ) 1,800rpm ನಿಂದ 3,000rpm ವರೆಗೆ

ಗುಣಗಳು

ಗುಣಗಳು

ದೋಷಗಳನ್ನು ವಿಮರ್ಶೆ ಮಾಡಿದಾಗ ಟಾಟಾ ನೂತನ ಟಿಯಾಗೊ ಕಾರಿನಲ್ಲಿ ಹೆಚ್ಚು ಗುಣಗಳು ಕಂಡುಬರುತ್ತದೆ. ಈ ಪೈಕಿ ಭದ್ರತೆಗೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗಿದೆ.

ಗುಣಗಳು

ಗುಣಗಳು

ಸುರಕ್ಷತೆಯನ್ನು ಗಮನಕ್ಕೆ ತೆಗೆದುಕೊಂಡಾಗ ನೂತನ ಟಿಯಾಗೊ ಕಾರಿನಲ್ಲಿ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯಿರಲಿದೆ.

ಗುಣಗಳು

ಗುಣಗಳು

ಆಕರ್ಷಕ ಹೆಡ್ ಲೈಟ್ ವಿನ್ಯಾಸ, ಬದಿಯಲ್ಲಿ ಸ್ವಭಾವ ರೇಖೆ, ಕಪ್ಪುವ ವರ್ಣದ ಬಿ ಪಿಲ್ಲರ್ ಯುವ ಗ್ರಾಹಕರಿಗೆ ಹೆಚ್ಚು ಪ್ರಿಯವೆನಿಸಲಿದೆ.

ಗುಣಗಳು - ಡ್ಯುಯಲ್ ಟೋನ್

ಗುಣಗಳು - ಡ್ಯುಯಲ್ ಟೋನ್

ಕಾರಿನೊಳಗೆ ಹೆಚ್ಚಿನ ಪ್ರೀಮಿಯಂ ಚಾಲನಾ ಅನುಭವಕ್ಕಾಗಿ ಡ್ಯುಯಲ್ ಟೋನ್ (ಜೋಡಿ ಬಣ್ಣ) ಒಳನೋಟವನ್ನು ನೀಡಲಾಗಿದೆ.

ಗುಣಗಳು

ಗುಣಗಳು

ಒಳಮೈ ಸುಲಭ ನಿರ್ವಹಣೆಗಾಗಿ ಕಾರಿನೊಳಗೆ 21ರಷ್ಟು ಸ್ಟೋರೆಜ್ ಜಾಗಗಳನ್ನು ಕೊಡಲಾಗಿದೆ. ಇಲ್ಲಿ ದೈನಂದಿನ ಸಂಚಾರದ ವೇಳೆ ಮೊಬೈಲ್, ವಾರ್ತಾ ಪತ್ರಿಕೆ ಅಥವಾ ನೀರಿನ ಬಾಟಲಿಗಳನ್ನಡಲು ಹೆಚ್ಚು ಸೂಕ್ತವೆನಿಸಲಿದೆ.

ಗುಣಗಳು

ಗುಣಗಳು

ಟರ್ನ್-ಬೈ-ಟರ್ನ್ ನೇವಿಗೇಷನ್ ಗೈಡನ್ಸ್ ಇದೇ ಮೊದಲ ಬಾರಿಗೆ ಆಂಡ್ರಾಯ್ಡ್ ಫೋನ್ ಸಂಪರ್ಕಿತ ಟರ್ನ್-ಬೈ-ಟರ್ನ್ ನೇವಿಗೇಷನ್ ಗೈಡನ್ಸ್ ಅಥವಾ ಮಾರ್ಗದರ್ಶಿ ಸೇವೆಯು ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಮ್ಯಾಪ್ ಮೈ ಇಂಡಿಯಾದ ನೇವಿಮ್ಯಾಪ್ ಆಪ್ ಅನ್ನು ಇನ್ ಸ್ಟಾಲ್ ಮಾಡಬೇಕಾಗುತ್ತದೆ.

ಗುಣಗಳು

ಗುಣಗಳು

ಒಟ್ಟಾರೆಯಾಗಿ ಕಾರಿನ ಒಳಮೈ ವಿನ್ಯಾಸ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ ಯುವ ಗ್ರಾಹಕರನ್ನು ಅತಿ ಹೆಚ್ಚು ಆಕರ್ಷಿಸಲಿದೆ.

ಗುಣಗಳು

ಗುಣಗಳು

ಕಾರಿನೊಳಗೆ ಸ್ಥಳಾವಕಾಶದ ವಿಚಾರಕ್ಕೂ ಬಂದಾಗಲೂ ಅತ್ಯುತ್ತಮ ಲೆಗ್ ಮತ್ತು ಹೆಡ್ ರೂಂ ಗಳನ್ನು ನೂತನ ಟಿಯಾಗೊ ಕಾಪಾಡಿಕೊಂಡಿದೆ.

ಗುಣಗಳು

ಗುಣಗಳು

ಹರ್ಮಾನ್ ಆಡಿಯೋ ಸಿಸ್ಟಂ, ಜ್ಯೂಕ್ ಕಾರ್ ಆಪ್, ಸ್ಮಾರ್ಟ್ ಫೋನ್ ಸಂಪರ್ಕಿತ ನೇವಿಗೇಷನ್ ಮುಂತಾದ ವೈಶಿಷ್ಟ್ಯಗಳು ಸ್ವಾಗತಾರ್ಹವೆನಿಸಿದೆ.

ಗುಣಗಳು

ಗುಣಗಳು

ಸೆನ್ಸಾರ್ ಆಳವಡಿಸಲಾದ ರಿವರ್ಸ್ ಪಾರ್ಕಿಂಗ್ ಪರದೆಯು ನಿಮ್ಮ ಇನ್ಪೋಟೈನ್ಮೆಂಟ್ ಸಿಸ್ಟಂನಲ್ಲೇ ದೊರಕಲಿದ್ದು, ಹೆಚ್ಚು ಅನುಕೂಲಕರವಾಗಲಿದೆ. ಇದು ಕಾರಿಗೆ ಪ್ರೀಮಿಯಂ ಸ್ಪರ್ಶವನ್ನು ತುಂಬಲಿದೆ.

ಗುಣಗಳು

ಗುಣಗಳು

ಮಗದೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ಕ್ಲಚ್ ಲಾಕ್ ಸಹ ಪರಿಣಾಮಕಾರಿ ಎನಿಸಿಕೊಂಡಿದೆ.

ಗುಣಗಳು

ಗುಣಗಳು

ಆರು ಆಕರ್ಷಕ ಬಣ್ಣಗಳಲ್ಲಿ ಟಾಟಾ ಟಿಯಾಗೊ ಲಭ್ಯವಿರುತ್ತದೆ. ಅವುಗಳೆಂದರೆ ವೈಟ್, ಸಿಲ್ವರ್, ಬ್ರೌನ್, ರೆಡ್, ಆರೆಂಜ್ ಮತ್ತು ಬ್ಲೂ

ಎಂಜಿನ್ ಆಯ್ಕೆಗಳು

ಎಂಜಿನ್ ಆಯ್ಕೆಗಳು

1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್: 85 ಅಶ್ವಶಕ್ತಿ, 114 ಎನ್‌ಎಂ ತಿರುಗುಬಲ ಬಹು ಚಾಲನಾ ವಿಧ (ಇಕೊ ಮತ್ತು ಸಿಟಿ)

1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್: 70 ಅಶ್ವಶಕ್ತಿ, 140 ಎನ್‌ಎಂ ತಿರುಗುಬಲ ಬಹು ಚಾಲನಾ ವಿಧ (ಇಕೊ ಮತ್ತು ಸಿಟಿ)

ಅಂತಿಮ ತೀರ್ಪು

ಅಂತಿಮ ತೀರ್ಪು

ಕೆಲವೊಂದು ಸಣ್ಣ ಪುಟ್ಟ ದೋಷಗಳನ್ನು ನಿವಾರಿಸಿದ್ದಲ್ಲಿ ಟಾಟಾ ಟಿಯಾಗೊ ಅತ್ಯುತ್ತಮ ಕಾರು ಎಂಬುದರಲ್ಲಿ ಸಂಶಯವೇ ಇಲ್ಲ. ಇದು ಎಲ್ಲ ಅರ್ಥದಲ್ಲೂ ಮೇಡ್ ಇನ್ ಇಂಡಿಯಾ ಉತ್ಪನ್ನಕ್ಕೆ ಹೊಸ ಆಯಾಮವನ್ನು ತುಂಬಿದೆ.

Most Read Articles

Kannada
English summary
Looking To Buy The Tata Tiago: Let's Look At Some Of The Pros & Cons
Story first published: Tuesday, March 22, 2016, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X