ಅಂಬರೀಷ್ ಕಾರು: ಟೊಯೊಟಾ ಫಾರ್ಚ್ಯುನರ್ ವಿಮರ್ಶೆ
ಕನ್ನಡ ಚಿತ್ರನಟ ದರ್ಶನ್ ತೂಗುದೀಪ ಬಳಿಯಲ್ಲೂ ಟೊಯೊಟಾ ಫಾರ್ಚ್ಯುನರ್ ಕಾರಿದೆ. ಇತ್ತೀಚೆಗೆ ಜಯನಗರ ಮೂರನೇ ಬ್ಲಾಕಿನ ನಮ್ಮ ಕಚೇರಿಯ ಕಟ್ಟಡದಲ್ಲಿರುವ ಆರ್ ಆರ್ ಗೋಲ್ಡ್ ಪ್ಯಾಲೇಸ್ ಉದ್ಘಾಟನೆಗೂ ಈ ಕಾರಲ್ಲಿ ಬಂದಿದ್ದರು. ಆದರೆ ಅವರ ನಂಬರ್ ಪ್ಲೇಟಿನಲ್ಲಿ ಒಂದು ಯಡವಟ್ಟು ಇತ್ತು.
ಟೊಯೊಟಾ ಫಾರ್ಚ್ಯುನರ್: ಇತ್ತೀಚೆಗೆ ಟೊಯೊಟಾ ಕಂಪನಿಯು ನೂತನ ಫಾರ್ಚ್ಯುನರ್ ಆವೃತ್ತಿಯನ್ನು ಹೊರತಂದಿತ್ತು. ಇದು 3.0 ಲೀಟರ್ ಡಿ-4ಡಿ ಡೀಸೆಲ್ ಎಂಜಿನ್ ಹೊಂದಿದೆ. ಇದು 4 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಗೇರ್ ಆಯ್ಕೆಯಲ್ಲೂ ದೊರಕುತ್ತದೆ.
ಈ ಕಾರಿನಲ್ಲಿ ಆರಾಮದಾಯಕ ಸವಾರಿಗೆ ಬೇಕಾದಷ್ಟು ಫೀಚರುಗಳಿವೆ. ಅಂದರೆ ಐಷಾರಾಮಿ ಸವಾರಿ ಅನುಭವಕ್ಕೆ ಬೇಕಾಗಿರುವ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟಚ್ ಸ್ಕ್ರೀನ್ ಪರದೆ, ಐಪ್ಯಾಡ್, ಯುಎಸ್ ಬಿ ಆಕ್ಸ್ ಮತ್ತು ಬ್ಲೂಟೂಥ್ ಸಾಧನಗಳಿಗೆ ಕನೆಕ್ಟ್ ಮಾಡಲು ಸಾಧ್ಯವಿರುವ ಆಡಿಯೋ ಡಿವಿಡಿ ಡಿಸ್ ಪ್ಲೇ ಇದರಲ್ಲಿದೆ.
ಸ್ಟಿಯರಿಂಗ್ ವೀಲ್ ನಲ್ಲಿ ಇರುವ ಕಂಟ್ರೋಲ್ ಮೂಲಕ ಆಡಿಯೋ, ಬ್ಲೂಟೂಥ್, ಮಲ್ಟಿ ಇನ್ಫಾರ್ಮೆಷನ್ ಸಾಧನಗಳನ್ನು ಅಪರೇಟ್ ಮಾಡಬಹುದಾಗಿದೆ. ಸಿಟಿ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಟೊಯೊಟಾ ಫಾರ್ಚ್ಯುನರ್ ಕಾರಿನ ಹಿಂಭಾಗದಲ್ಲಿ ಕ್ಯಾಮರಾವಿದೆ.
ಸುರಕ್ಷತೆಯ ಸವಾರಿಗೂ ಪೂರಕವಾಗಿ ಸಾಕಷ್ಟು ಫೀಚರುಗಳನ್ನು ಟೊಯೊಟಾ ಫಾರ್ಚ್ಯುನರ್ ಹೊಂದಿದೆ. ಡ್ರೈವರ್ ಮತ್ತು ಮುಂಭಾಗದ ಪ್ರಯಾಣಿಕರ ಸುರಕ್ಷತೆಗೆ ನೆರವಾಗುವ ಮುಂಭಾಗದಲ್ಲಿ ಎಸ್ಆರ್‌ಎಸ್ ಏರ್ ಬ್ಯಾಗ್ ಇದೆ. ವಾಹನದ ಸ್ಥಿರತೆ ನಿಯಂತ್ರಣಕ್ಕಾಗಿ ಸ್ಟೆಬಿಲಿಟಿ ಕಂಟ್ರೋಲ್ ಇದೆ. ಜೊತೆಗೆ ಹಿಂಭಾಗದ ಚಕ್ರ ಮತ್ತು ಮುಂಭಾಗದ ಚಕ್ರಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸ್ಕಿಡ್ ಕಂಟ್ರೋಲ್ ಫೀಚರ್ ಇದೆ.
ಟೊಯೊಟಾ ಫಾರ್ಚ್ಯುನರ್ ಬೆಂಗಳೂರು ಎಕ್ಸ್ ಶೋರೂಂ ದರ ಸುಮಾರು 20.16 ಲಕ್ಷ ರು.ನಿಂದ ಆರಂಭವಾಗುತ್ತದೆ. 4 ವೀಲ್ ಡ್ರೈವ್ ಸಾಮರ್ಥ್ಯದ ಟೊಯೊಟಾ ಫಾರ್ಚ್ಯುನರ್ ಎಕ್ಸ್ ಶೋರೂಂ ದರ ಸುಮಾರು 21.16 ಲಕ್ಷ ರುಪಾಯಿ ಇದೆ.
ಕರ್ಣ ಬಳಿಯಿರುವ ಇನ್ನೋವಾ ಕಾರಿನ ವಿಶೇಷ ವಿಮರ್ಶೆ ಮುಂದಿನ ಪುಟದಲ್ಲಿದೆ ಓದಿ>>


Click it and Unblock the Notifications









