ಅರೆ ಬುಲ್ ಬುಲ್ ಮಾತಾಡಾಕಿಲ್ವ..?
ಬಹುಶ: ಕನ್ನಡದ ಕಣ್ಮಣಿ ರೆಬಲ್ ಸ್ಟಾರ್ ಅಂಬರೀಷ್ ಸಿನೆಮಾ ಜೀವನ ಆರಂಭವಾಗುವುದೇ ಇಲ್ಲಿಂದ. ಮೂರ್ನಾಲ್ಕು ದಶಕಗಳ ಹಿಂದೆ 'ನಾಗರಹಾವು' ಚಿತ್ರದಲ್ಲಿ ನಟಿಸಿದ್ದ ನಟ ಅಂಬರೀಷ್ ಡೈಲಾಗ್ ಸಖತ್ ಫೇಮಸ್.
ಈ ಚಿತ್ರದಲ್ಲಿ ಜಲೀಲ್ ಎಂಬ ಖಳನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅಂಬರೀಷ್, ಆರತಿಯನ್ನು ಕಿಚಾಯಿಸುತ್ತಿದ್ದಿದ್ದು ಹೀಗೆ- 'ಅರೆ ಬುಲ್ ಬುಲ್ ಮಾತಾಡಾಕಿಲ್ವ'. ಪ್ರಸ್ತುತ ಡೈಲಾಗ್ ಕನ್ನಡ ಚಿತ್ರರಂಗದಲ್ಲಿ ಹೊಸ ಸ್ಟಾರ್ ಉದಯಕ್ಕೆ ಕಾರಣವಾಗಿತ್ತು.
ಇದೀಗ ಇದೇ ಡೈಲಾಗ್ ಆಧಾರವಾಗಿಸಿಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬುಲ್ ಬುಲ್; ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಅಂಬರೀಷ್ ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ. ಆದರೆ ಪ್ರಸ್ತುತ ಸಿನೆಮಾ ತೆಲುಗಿನ 'ಡಾರ್ಲಿಂಗ್' ಚಿತ್ರದ ರಿಮೇಕ್ ಆಗಿದೆ.
ಎಂ. ಡಿ. ಶ್ರೀಧರ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಕಥಕ್ ಡ್ಯಾನ್ಸರ್ ರಚಿತ ರಾಮ್ ಆರು ಅಡಿ ಎತ್ತರದ ದರ್ಶನ್‌ಗೆ ಸಾಥ್ ನೀಡಲಿದ್ದಾರೆ. ಒಟ್ಟಾರೆ ದರ್ಶನ್ ಯಾವ ರೀತಿ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಹಾಗೂ ಅಂಬರೀಷ್ 80ರ ದಶಕದ ವೇಶಭೂಷಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಅಂದ ಹಾಗೆ ಚಿತ್ರದಲ್ಲಿ ಕೆಟಿಎಂ ಡ್ಯೂಕ್ ಹಾಗೂ ವಿಂಟೇಜ್ ಸ್ಪೋರ್ಟ್ಸ್ ಕಾರುಗಳ ಬಳಕೆ ಮಾಡಲಾಗಿದೆ. ಕೆಟಿಎಂ ಬೈಕ್‌ನಲ್ಲಿ ದರ್ಶನ್ ಸಕತ್ ಫೇಮಸ್ ಎನಿಸಿದ್ದು, ಫೇಸ್‌ಬುಕ್‌ನಲ್ಲಿ ಸ್ಟಿಲ್ಸ್ ಜಾಲಾಡುತ್ತಿದೆ.

ಬುಲ್ ಬುಲ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ. ಇನ್ನು ಆಕರ್ಷಕ ಫೋಟೊಗಳಿಗಾಗಿ ಮುಂದಕ್ಕೆ ಕ್ಲಿಕ್ಕಿಸಿರಿ...

ಕೆಟಿಎಂ ಬೈಕ್‌ನಲ್ಲಿ ದರ್ಶನ್ ಸ್ಟಂಟ್

ವಿಂಟೇಜ್ ಸ್ಪೋರ್ಟ್ಸ್ ಕಾರಿನ ಜತೆ ಬುಲ್ ಬುಲ್ ಚಿತ್ರ ಮುಹೂರ್ತದಲ್ಲಿ ಕಾಣಿಸಿಕೊಂಡಿರುವ ದರ್ಶನ್ ಹಾಗೂ ಮೇರು ನಟ ಅಂಬರೀಷ್

ಕನ್ನಡದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಬಳಸಿರುವ ಕೆಟಿಎಂ ಡ್ಯೂಕ್ ಬೈಕ್‌ನ ವಿವಿಧ ಭಂಗಿ

ಕೆಟಿಎಂ ಡ್ಯೂಕ್

ಕೆಟಿಎಂ ಡ್ಯೂಕ್


Click it and Unblock the Notifications








