30 ಲಕ್ಷಕ್ಕೊಂದು ಶಕ್ತಿಶಾಲಿ ಲಗ್ಷುರಿ ಸೆಡಾನ್ ಕಾರು - ಆಡಿ ಎ3 ಎಸ್ ಲೈನ್ ವಿಮರ್ಶೆ

By Nagaraja

ನೀವು ಎಂಟ್ರಿ ಲೆವೆಲ್ ಐಷಾರಾಮಿ ವಿಭಾಗದಲ್ಲಿ ಶಕ್ತಿಶಾಲಿ ಸೆಡಾನ್ ಕಾರಿನ ಹುಡುಕಾಟದಲ್ಲಿದ್ದೀರಾ? ನಿಮ್ಮ ಬಜೆಟ್ 30ರಿಂದ 35 ಲಕ್ಷ ರು.ಗಳ ಅಸುಪಾಸಿನಲ್ಲಿದ್ದೆಯೇ? ಇನ್ಯಾಕೆ ಚಿಂತೆ ನಾವಿಂದು ಹೇಳಿಕೊಡಲಿರುವ ಕಾರು ನಿಮಗೆ ಯೋಗ್ಯವೆನಿಸಲಿದೆ.

ಆಡಿ ಎ3 ಎಸ್ ಲೈನ್ ಐಷಾರಾಮಿ ಸೆಡಾನ್ ಕಾರಿನ ಚಾಲನಾ ವಿಮರ್ಶೆಯನ್ನು ಡ್ರೈವ್ ಸ್ಪಾರ್ಕ್ ತಂಡವು ನಡೆಸಿದ್ದು, ಈ ಎಕ್ಸ್ ಕ್ಲೂಸಿವ್ ರಿವ್ಯೂವನ್ನು ಓದುಗರ ಮುಂದಿಡಲಿದ್ದೇವೆ. ಇದು ಮಾರುಕಟ್ಟೆಯಲ್ಲಿರುವ ಎ3 ಸೆಡಾನ್ ಕಾರಿನ ಶಕ್ತಿಶಾಲಿ ಆವೃತ್ತಿಯಾಗಿದೆ.

ಆಡಿ ಎ3 ಎಸ್ ಲೈನ್


ಮೊದಲ ಬಾರಿಗೆ 1996ನೇ ಇಸವಿಯಲ್ಲಿ ಪರಿಚಯವಾಗಿರುವ ಆಡಿ ಎ3 ಈಗ ಮೂರು ತಲೆಮಾರನ್ನು ದಾಟಿ ಬಂದಿದ್ದು, ಕಾಲ ಕ್ರಮೇಣ ಹೊಸ ಸ್ವರೂಪವನ್ನು ಪಡೆದಿದೆ. ಇದನ್ನು ಫೋಕ್ಸ್ ವ್ಯಾಗನ್ ಎಂಕ್ಯೂಬಿ ತಳಹದಿಯಲ್ಲಿ ನಿರ್ಮಿಸಲಾಗಿದೆ.

ಶೈಲಿ
ಮುಂಭಾಗದಲ್ಲಿ ಸಾಂಪ್ರದಾಯಿಕ ಆಡಿ ಸಿಗ್ನೇಚರ್ ಗ್ರಿಲ್ ಹೆಚ್ಚು ಆಕರ್ಷಕವೆನಿಸುತ್ತಿದೆ. ಇದರೊಂದಿಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪರಿಣಾಮಕಾರಿಯೆನಿಸಿದ್ದು, ಒಟ್ಟಾರೆ ಶಕ್ತಿಯುತ ವಿನ್ಯಾಸ ಮಗೂಡಿಸಿ ಬಂದಿದೆ.

ಮುಂಭಾಗದಲ್ಲಿ ಕ್ರೀಡಾತ್ಮಕ ಹಾಗೂ ಆಕ್ರಮಣಕಾರಿ ನೋಟವನ್ನು ಒದಗಿಸಿದೆ. ಆದರೂ ಆಡಿ ಎ3 ಮಾದರಿಗೆ ಹೋಲಿಸಿದಾಗ ಬದಿಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಇನ್ನು 17 ಇಂಚುಗಳ ಅಲಾಯ್ ಚಕ್ರಗಳು ಅತ್ಯುತ್ತಮ ರಸ್ತೆ ಸಾನಿಧ್ಯವನ್ನು ನೀಡುತ್ತಿದೆ.

ಎಲ್ಲ ಆಡಿ ಕಾರುಗಳಂತೆಯೂ ಎ3 ಎಸ್ ಲೈನ್ ಸಹ ಹಿಂಭಾಗದಲ್ಲಿ ಸರಳ ಹಾಗೂ ಸೊಗಸಾದ ವಿನ್ಯಾಸ ಕಾಪಾಡಿಕೊಂಡಿದೆ. ಅಂತೆಯೇ ಕ್ರೀಡಾತ್ಮಕ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಕೊಡಲಾಗಿದೆ.

ಆಡಿ ಎ3 ಎಸ್ ಲೈನ್

ಎಂಜಿನ್ ತಾಂತ್ರಿಕತೆ
ನೂತನ ಆಡಿ ಎ3 ಎಸ್ ಲೈನ್, 1.8 ಲೀಟರ್ ಟಿಎಫ್ ಎಸ್ ಐ ಡೈರಕ್ಟ್ ಟರ್ಬೊ ಚಾರ್ಜರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 250 ಎನ್ ಎಂ ತಿರುಗುಬಲದಲ್ಲ 178 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

ಮೈಲೇಜ್
ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ನೂತನ ಆಡಿ ಎ3 ಎಸ್ ಲೈನ್ ಪ್ರತಿ ಲೀಟರ್ ಗೆ 16.6 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳಲಿದೆ. ನಮ್ಮ ತಂಡ ನಡೆಸಿರುವ ನೈಜ ರಸ್ತೆ ಪರಿಸ್ಥಿತಿಯಲ್ಲಿ (ಹೈವೇ/ಸಿಟಿ) ಪ್ರತಿ ಲೀಟರ್ ಗೆ 14ರಷ್ಟು ಇಂಧನ ಕ್ಷಮತೆ ಕಾಪಾಡಿಕೊಂಡಿರುವುದು ಹೆಚ್ಚು ಪರಿಣಾಮಕಾರಿಯೆನಿಸಿದೆ.

ಆಡಿ ಎ3 ಎಸ್ ಲೈನ್

ಒಳಮೈ
ಒಳಗಡೆ ಎಲ್ಲ ಕಪ್ಪು ವರ್ಣದ ಸಂಯೋಜನೆಯನ್ನು ನೂತನ ಆಡಿ ಎ3 ಎಸ್ ಲೈನ್ ಪಡೆದಿದೆ. ಇದರ ಎಂಎಂಐ ಸ್ಕ್ರೀನ್ ಗ್ರಾಹಕರಿಗೆ ಪ್ರಮುಖ ಆಕರ್ಷಣೆಯಾಗಿ ಗೋಚರಿಸಲಿದೆ. ಜೆಟ್ ಫೈಟರ್ ಟರ್ಬೈನ್ ಗಳನ್ನು ಸೂಚಿಸುವ ಎಸಿ ವೆಂಟ್ಸ್ ಗಳು ಪ್ರಭಾವಶಾಲಿ ಎನಿಸಿಕೊಂಡಿದೆ.

ಗ್ಲೋವ್ ಬಾಕ್ಸ್ ನಲ್ಲಿ ಸಿಡಿ ಪ್ಲೇಯರ್ ಮತ್ತು ಮೆಮರಿ ಕಾರ್ಡ್ ರೀಡರ್ ವ್ಯವಸ್ಥೆಯನ್ನು ಕೊಡಲಾಗಿದೆ. ಇನ್ನು ಮನರಂಜನೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, 20 ಜಿಬಿ ಹಾರ್ಡ್ ಡ್ರೈವ್ ವ್ಯವಸ್ಥೆಯೂ ಇರುತ್ತದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕಪ್ಪು ಮತ್ತು ಕೆಂಪು ವರ್ಣದ ಮಿಶ್ರಣವನ್ನು ಪಡೆದಿದ್ದು, ಅಕ್ಷರಗಳು ಬಿಳಿ ಬಣ್ಣದಲ್ಲಿ ದಾಖಲಾಗಿದೆ. ಬಹು ಕ್ರಿಯಾತ್ಮಕ ಮಾಹಿತಿ ಮನರಂಜನಾ ವ್ಯವಸ್ಥೆಯೂ ಇರುತ್ತದೆ. ಅಂತೆಯೇ ಸ್ಟೀರಿಂಗ್ ವೀಲ್ ನಲ್ಲೇ ಅನೇಕ ಕ್ರಿಯೆಗಳನ್ನು ನಿಯಂತ್ರಿಸುವ ಹಾಗೂ ಫೋನ್ ಸಂಭಾಷಣೆ ಮಾಡುವ ಹಾಗೂ ಕಡಿಯುವ ವ್ಯವಸ್ಥೆಯಿದೆ.

ಹಿಂಬದಿಯ ಸೀಟು ಇಬ್ಬರಿಗೆ ಕುಳಿತುಕೊಳ್ಳುವಷ್ಟು ಸ್ಥಳಾವಕಾಶವನ್ನು ಕೊಡಲಾಗಿದೆ. ಅಲ್ಲದೆ ಹೆಡ್ ರೂಂ ಸ್ವಲ್ಪ ಕಡಿಮೆಯಾಗಿರುವುದರಿಂದ ಉದ್ದನೆಯ ದೇಹಕಾಯದ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟಕರವಾಗಲಿದೆ. ಇನ್ನು ಪ್ರೀಮಿಯಂ ಲೆಥರ್ ಹೋದಿಕೆಯ ಸೀಟುಗಳನ್ನು ಕಾಣಬಹುದಾಗಿದೆ.

ಆಡಿ ಎ3 ಎಸ್ ಲೈನ್


ಚಾಲನಾ ಅನುಭವ
ಸೆವೆನ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಬಲದೊಂದಿಗೆ ಹೊರ ಬಂದಿರುವ ಆಡಿ ಎ3 ಎಸ್ ಲೈನ್ ಕಾರನ್ನು ಓಡಿಸುವುದು ತುಂಬಾನೇ ಸುಲಭವಾಗಿದೆ. ವಿಶೇಷವಾಗಿಯೂ ಎಸ್ ಮೋಡ್ ನಲ್ಲಿ ಮೋಜಿನ ಪಯಣದ ಅನುಭವ ನಿಮ್ಮದಾಗಲಿದೆ. ಈ ನಿಟ್ಟಿನಲ್ಲಿ ಆಡಿ ಎಂಜಿನಿಯರ್ ಗಳ ಪ್ರಯತ್ನವನ್ನು ಮೆಚ್ಚಲೇಬೇಕು.

ದೇಶದ ಯಾವುದೇ ರಸ್ತೆ ಪರಿಸ್ಥಿತಿಗೂ ಹೊಂದಿಕೆಯಾಗುವ ರೀತಿಯಲ್ಲಿ ಇದನ್ನು ಆಡಿ ವಿನ್ಯಾಸಗೊಳಿಸಿದೆ. ಹಾಗಿದ್ದರೂ ಸ್ಟೀರಿಂಗ್ ವೀಲ್ ಬೇಗನೇ ಶಿಪ್ರಗತಿಯ ಪ್ರತಿಕ್ರಿಯೆ ನೀಡುವುದು ನಿಮಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತಗುಲಲಿದೆ.

ಆಡಿ ಎ3 ಎಸ್ ಲೈನ್

ಸುರಕ್ಷತೆ
ಆರು ಏರ್ ಬ್ಯಾಗ್ ಗಳು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಬ್ರೇಕ್ ಅಸಿಸ್ಟಂ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಗಳಂತಹ ಗರಿಷ್ಠ ಭದ್ರತೆಯನ್ನು ನೂತನ ಆಡಿ ಎ ಎಸ್ ಲೈನ್ ಕಾರಿನಲ್ಲಿ ಒದಗಿಸಲಾಗಿದೆ.

ಮುನ್ನಡೆ

  • ಪ್ರೀಮಿಯಂ ಮತ್ತು ಕ್ರೀಡಾತ್ಮಕ ಡಿಸೈನ್,
  • ಚಾಲನೆ ಮತ್ತು ಹ್ಯಾಂಡ್ಲಿಂಗ್,
  • ಗರಿಷ್ಠ ಭದ್ರತೆ

ಹಿನ್ನಡೆ

  • ಆಡಿಯ ಸಂಪ್ರದಾಯಿಕ ವಿನ್ಯಾಸ,
  • ಬಳುಕದ ಸಸ್ಪೆನ್ಷನ್,
  • ಸ್ವಲ್ಪ ದುಬಾರಿ

ಬೆಲೆ
ಅಂದ ಹಾಗೆ ಭಾರತೀಯ ಮಾರುಕಟ್ಟೆಯಲ್ಲಿ ನೂತನ ಆಡಿ ಎ3 ಎಸ್ ಲೈನ್ ಕಾರು 31.40 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸುತ್ತದೆ.

ಆಡಿ ಎ3 ಎಸ್ ಲೈನ್

ಅಂತಿಮ ತೀರ್ಪು
ಮ್ಯಾನುವಲ್ ಆಗಿ ಕಾರು ಓಡಿಸಲು ಬಯಸುವವರಿಗೆ ಪೆಡಲ್ ಶಿಫ್ಟರ್ ಕೊರತೆ ಕಂಡುಬಂದರೂ ಸಹ ಆಡಿ ಎ3 ಎಸ್ ಲೈನ್ ಕ್ರೀಡಾತ್ಮಕ ಅವತಾರವು ಐಷಾರಾಮಿ ಗ್ರಾಹಕರನ್ನು ಆಕರ್ಷಿಸಲಿದೆ ಎಂಬುದರಲ್ಲಿ ಸಂಶಯವಿಲ್ಲ. ಇದರ ಎಂಜಿನ್ ನಯವಾಗಿದ್ದು, ಪ್ರತಿಯೊಂದು ಹಂತದ ಚಾಲನೆಯನ್ನು ಉಲ್ಲಾಸದಾಯಕವಾಗಿಸಲಿದೆ. ಇನ್ನು ಇಂಧನ ಕ್ಷಮತೆಯ ವಿಚಾರದಲ್ಲೂ ಪರಿಣಾಮಕಾರಿಯೆನಿಸಿದೆ.

ದೈನಂದಿನ ಅಥವಾ ವಾರಂತ್ಯದ ಚಾಲನೆ ಇಷ್ಟಪಡುವ ನಾಲ್ಕು ಮಂದಿಯಷ್ಟು ಸಣ್ಣ ಕುಟುಂಬದವರಿಗೆ ಆಡಿ ಎ3 ಎಸ್ ಲೈನ್ ಅತ್ಯುತ್ತಮ ಆಯ್ಕೆಯಾಗಿರಲಿದೆ. ಆಡಿ ಗ್ರಾಹಕರು ಸಾಮಾನ್ಯ ಮಾದರಿಗಿಂತಲೂ ಎಸ್ ಲೈನ್ ಲಾಂಛನ ಹೊಂದಿರುವ ಕಾರನ್ನೇ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗರಿಷ್ಠ ಸುರಕ್ಷತೆಯನ್ನು ಒದಗಿಸುತ್ತಿರುವ ಆಡಿಗೆ ಭಲೇ ಭೇಷ್ ಎನ್ನಲೇ ಬೇಕು.

Most Read Articles

Kannada
English summary
Audi A3 S-Line Review: Normal Yet Sporty Sedan
Story first published: Monday, March 14, 2016, 15:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X