ಮೈಲೇಜ್ ಸೆಡಾನ್: ಫೋರ್ಡ್ ಫಿಯೆಸ್ಟಾ ಬೆಸ್ಟ್
ನೂತನ ಫೋರ್ಡ್ ಫಿಯೆಸ್ಟಾ ಪವರ್ ಶಿಫ್ಟ್ ಕಾರು ಎರಡು ಆವೃತ್ತಿಗಳಲ್ಲಿ ದೊರಕಲಿದೆ. ಇದರ ಆರಂಭಿಕ ದರ 8.99 ಲಕ್ಷ ರುಪಾಯಿ. ಟೈಟಾನಿಯಂ ಫಿಯೆಸ್ಟಾ ಆವೃತ್ತಿ ದರ ಸುಮಾರು 9.7 ಲಕ್ಷ ರುಪಾಯಿ ಇದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರ. ಹೊಸ ಫಿಯೆಸ್ಟಾ ಮಾತ್ರವಲ್ಲದೇ ಹಳೆಯ ಫಿಯೆಸ್ಟಾ ಕಾರು ಕೂಡ ಖರೀದಿಗೆ ಅತ್ಯುತ್ತಮ. ಇವೆಲ್ಲ ಬೆಸ್ಟ್ ಮೈಲೇಜ್ ಆವೃತ್ತಿಗಳಾಗಿವೆ.
ಫಿಯೆಸ್ಟಾ ಬೆಸ್ಟ್ ಮೈಲೇಜ್: ಸೆಡಾನ್ ಕಾರುಗಳಲ್ಲಿ ಫಿಯೆಸ್ಟಾ ಕಾರು ಅತ್ಯುತ್ತಮ ಮೈಲೇಜ್ ನೀಡುವ ಕಾರಾಗಿದೆ. ಇದರ ಮೈಲೇಜ್ ಪ್ರತಿಲೀಟರಿಗೆ 16.97 ಕಿ.ಮೀ.ಯಿಂದ 23.5 ಕಿ.ಮೀ.ವರೆಗಿದೆ. ಈ ಕಾರಿನ ಲುಕ್ಸ್, ಡ್ರೈವಿಂಗ್ ಗುಣಮಟ್ಟ, ಫೀಚರುಗಳೆಲ್ಲವೂ ಅತ್ಯುತ್ತಮ ಮತ್ತು ಅನನ್ಯ.
ಆವೃತ್ತಿಗಳು ಮತ್ತು ಮೈಲೇಜ್
* ಫೋರ್ಡ್ ಫಿಯೆಸ್ಟಾ 1.5 ಆಂಬಿಯನ್ಸ್
ಪೆಟ್ರೋಲ್ ಎಂಜಿನ್, ದರ: 7,34,900 ರು. ಮೈಲೇಜ್: 17 ಕಿ.ಮೀ.
* ಫೋರ್ಡ್ ಫಿಯೆಸ್ಟಾ 1.5 ಟೈಟಾನಿಯಂ
ಪೆಟ್ರೋಲ್ ಎಂಜಿನ್, ದರ: 8,99,900 ರು., ಮೈಲೇಜ್: 17 ಕಿ.ಮೀ.
* ಫೋರ್ಡ್ ಫಿಯೆಸ್ಟಾ 1.5 ಟೈಟಾನಿಯಂ ಪ್ಲಸ್
ಪೆಟ್ರೋಲ್ ಎಂಜಿನ್, ದರ: 8,99,900, ಮೈಲೇಜ್: 17 ಕಿ.ಮೀ.
* ಫೋರ್ಡ್ ಫಿಯೆಸ್ಟಾ ಸ್ಟೈಲ್ ಆಟೋಮ್ಯಾಟಿಕ್
ಪೆಟ್ರೋಲ್ ಎಂಜಿನ್, ದರ: 9,13,900 ರು., ಮೈಲೇಜ್: 16.97 ಕಿ.ಮಿ.
* ಫೋರ್ಡ್ ಫಿಯೆಸ್ಟಾ 1.56 ಸ್ಟೈಲ್
ಡೀಸೆಲ್ ಎಂಜಿನ್, ದರ: 9,13,901 ರು., ಮೈಲೇಜ್: 23.5 ಕಿ.ಮೀ.
* ಫೋರ್ಡ್ ಫಿಯೆಸ್ಟಾ ಟೈಟಾನಿಯಂ ಪ್ಲಸ್ ಆಟೋಮ್ಯಾಟಿಕ್
ಪೆಟ್ರೋಲ್ ಎಂಜಿನ್, ದರ: 9,86,300 ರು., ಮೈಲೇಜ್: 16.97 ಕಿ.ಮೀ.
* ಫೋರ್ಡ್ ಫಿಯೆಸ್ಟಾ 1.5 (ಡೀ)ಟೈಟಾನಿಯಂ ಪ್ಲಸ್
ಡೀಸೆಲ್ ಎಂಜಿನ್, ದರ: 10,15,500 ರು., ಮೈಲೇಜ್: 23.5 ಕಿ.ಮೀ.


Click it and Unblock the Notifications









