ಬೆಸ್ಟ್ ಸೆಡಾನ್: ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಬೆಸ್ಟ್ ಸೆಡಾನ್ ಮಾಲಿಕೆಯಲ್ಲಿ ಇವತ್ತು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಬಗ್ಗೆ ತಿಳಿದುಕೊಳ್ಳೋಣ. ಇತ್ತೀಚೆಗೆ ಕಂಪನಿಯು ಹೊಸ ಡಿಜೈರ್ ಸೆಡಾನ್ ಆವೃತ್ತಿಯೊಂದನ್ನು ಪರಿಚಯಿಸಿತ್ತು. ಇದರ ಪೆಟ್ರೋಲ್ ಆವೃತ್ತಿ ದರ ಸುಮಾರು 4.79 ಲಕ್ಷ ರು. ಮತ್ತು ಡೀಸೆಲ್ ಆವೃತ್ತಿ ದರ ಸುಮಾರು 5.80 ಲಕ್ಷ ರು. ಇದೆ.

ಡಿಜೈರ್ ಒಟ್ಟು ಏಳು ಆವೃತ್ತಿಗಳಲ್ಲಿ ದೊರಕುತ್ತವೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ, ವಿಎಕ್ಸ್ಐ ಆಟೋಮ್ಯಾಟಿಕ್ ಪೆಟ್ರೋಲ್ ಆವೃತ್ತಿಗಳಾಗಿವೆ. ಡಿಜೈರ್ ಎಲ್ ಡಿಐ, ವಿಡಿಐ, ಝಡ್ ಡಿಐ ಡೀಸೆಲ್ ಆವೃತ್ತಿಗಳಾಗಿವೆ.

1.2 ಲೀಟರಿನ ಪೆಟ್ರೋಲ್ ಎಂಜಿನ್ ಕೆ ಸರಣಿಯಿಂದ ಆಗಮಿಸಿದ್ದು ಸುಮಾರು 19 ಕಿ.ಮೀ. ಮೈಲೇಜ್ ನೀಡುತ್ತದೆ. ಆದರೆ ಆಟೋಮ್ಯಾಟಿಕ್ ವಿಎಕ್ಸ್ಐ ಆವೃತ್ತಿ ಮೈಲೇಜ್ ಪ್ರತಿಲೀಟರಿಗೆ ಸುಮಾರು 17 ಕಿ.ಮೀ. ಆಗಿದೆ. 1.3 ಲೀಟರಿನ ಡೀಸೆಲ್ ಎಂಜಿನ್ ಸುಮಾರು 24 ಕಿ.ಮೀ. ಮೈಲೇಜ್ ನೀಡುತ್ತದೆ.

ಕೆ12 ಪೆಟ್ರೋಲ್ ಎಂಜಿನ್ ಆರು ಸಾವಿರ ಆವರ್ತನಕ್ಕೆ 86 ಅಶ್ವಶಕ್ತಿ ಮತ್ತು 4 ಸಾವಿರ ಆವರ್ತನಕ್ಕೆ 114 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಡೀಸೆಲ್ ಎಂಜಿನ್ 4 ಸಾವಿರ ಆವರ್ತನಕ್ಕೆ 74 ಅಶ್ವಶಕ್ತಿ ಮತ್ತು 190 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಕೆ ಸರಣಿಯ ಪೆಟ್ರೋಲ್ ಎಂಜಿನ್ ನಲ್ಲಿ ಕೇವಲ 12.60 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಇದರಲ್ಲಿ ಗಂಟೆಗೆ ಗರಿಷ್ಠ 169 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಇದು 5 ಸ್ಪೀಡ್ ಮ್ಯಾನುಯಲ್ ಗೇರ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಆಯ್ಕೆಗಳಲ್ಲಿ ದೊರಕುತ್ತದೆ.

1.3 ಲೀಟರಿನ ಡೀಸೆಲ್ ಎಂಜಿನ್ ಕಾರಲ್ಲಿ ಕೇವಲ 14.3 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಇದರ ಗರಿಷ್ಠ ವೇಗ ಗಂಟೆಗೆ 162 ಕಿ.ಮೀ. ಆಗಿದೆ. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ.

More from DriveSpark

Article Published On: Tuesday, July 24, 2012, 11:50 [IST]
English summary
Best Sedan: Maruti Suzuki Swift Dzire Review. Dzire Variants, Price, Mileage, specification, pickup, interior, exterior, Engine. Read Swift Dzire Sedan review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+