ಬೆಸ್ಟ್ ಸೆಡಾನ್: ಟಾಟಾ ಇಂಡಿಗೊ ಎಕ್ಸ್ಎಲ್

Posted By:
ಟಾಟಾ ಇಂಡಿಗೊ ಎಕ್ಸ್ಎಲ್ ಆವೃತ್ತಿಯು ಇಂಡಿಗೊ ಕಾರಿನ ಪರಿಷ್ಕೃತ ಆವೃತ್ತಿ. ಟಾಟಾ ಮಾಂಝಾವನ್ನು ಮಾರುಕಟ್ಟೆಯಿಂದ ಹಿಂಪಡೆದ ಸಮಯದಲ್ಲಿ ಹೆಚ್ಚು ಫೀಚರುಗಳಿರುವ ಇಂಡಿಗೊ ಎಕ್ಸ್ಎಲ್ ಆವೃತ್ತಿಯನ್ನು ಕಂಪನಿ ಪರಿಚಯಿಸಿತ್ತು. ಇದರ ಬೆಂಗಳೂರು ಎಕ್ಸ್ ಶೋರೂಂ ದರ 5.40 ಲಕ್ಷ ರು.ನಿಂದ 6.77 ಲಕ್ಷ ರು.ವರೆಗಿದೆ.

ಟಾಟಾ ಇಂಡಿಗೊ ಎಕ್ಸ್ಎಲ್ ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಇದರಲ್ಲಿ ಕ್ಲಾಸಿಕ್ ಪೆಟ್ರೋಲ್ ಆವೃತ್ತಿ 1,396ಸಿಸಿ ಎಂಜಿನ್, ಮ್ಯಾನುಯಲ್ ಗೇರ್ ಹೊಂದಿದ್ದು, 8-13 ಕಿ.ಮೀ. ಮೈಲೇಜ್ ನೀಡುತ್ತದೆ. ಎಕ್ಸ್ಎಲ್ ಕ್ಲಾಸಿಕ್ ಡಿಕೊರ್ ಆವೃತ್ತಿ 1,396 ಸಿಸಿಯ ಡೀಸೆಲ್ ಎಂಜಿನ್ ಹೊಂದಿದೆ. ಇದರ ಮೈಲೇಜ್ 8.8 ಕಿ.ಮೀ.ಯಿಂದ 13.6 ಕಿ.ಮೀ. ವರೆಗಿದೆ.

ಟಾಟಾ ಇಂಡಿಗೊ ಎಕ್ಸ್ಎಲ್ ಗ್ರಾಂಡ್ ಡಿಕೊರ್ ಆವೃತ್ತಿಯು ಡೀಸೆಲ್ ಎಂಜಿನ್ ಹೊಂದಿದ್ದು, 13.6 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಎಕ್ಸೆಲ್ ಸಿಎನ್ ಜಿ ಆವೃತ್ತಿಯು 12.85 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಎಕ್ಸೆಲ್ ಗ್ರಾಂಡ್ ಡಿಕೊರ್ ಪೆಟ್ರೋಲ್ ಆವೃತ್ತಿ 8.8-12.85 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಇವೆಲ್ಲ 1,396ಸಿಸಿ ಎಂಜಿನ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿವೆ. ಇಲ್ಲಿ ತಿಳಿಸಿರುವುದು ಸರಾಸರಿ ಮೈಲೇಜ್ ಆಗಿದೆ.

ಎಂಜಿನ್: ಪೆಟ್ರೋಲ್ ಆವೃತ್ತಿಯು ಶಕ್ತಿಶಾಲಿ 1,396ಸಿಸಿಯ ಎಂಪಿಎಫ್ಐ 16 ಕವಾಟದ ಟ್ವಿನ್ ಕ್ಯಾಮ್ ಎಂಜಿನ್ ಹೊಂದಿದೆ. ಇದು 6,100 ಆವರ್ತನಕ್ಕೆ 101 ಪಿಎಸ್ ಪವರ್ ಮತ್ತು 3,500 ಆವರ್ತನಕ್ಕೆ 124 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಟಾಟಾ ಇಂಡಿಗೊ ಎಕ್ಸ್ ಎಲ್ ಡೀಸೆಲ್ ಆವೃತ್ತಿಯು 1,396 ಸಿಸಿಯ ಡಿ ಕೊರ್(ಡೈರೆಕ್ಟ್ ಇಂಜೆಕ್ಷನ್ ಕಾಮನ್ ರೇಲ್) ಎಂಜಿನ್ ಹೊಂದಿದೆ. ಇದು 4 ಸಾವಿರ ಆವರ್ತನಕ್ಕೆ 70 ಪಿಎಸ್ ಪವರ್ ಮತ್ತು 1,800 ಆವರ್ತನಕ್ಕೆ 140ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ನೂತನ ಟಾಟಾ ಇಂಡಿಗೊ ಎಕ್ಸ್ ಎಲ್ ಕಾರಿನಲ್ಲಿ ಕೇವಲ 15.5 ಸೆಕೆಂಡಿನಲ್ಲಿ 0-100 ಕಿ.ಮೀ. ಪಿಕಪ್ ಪಡೆಯಬಹುದಾಗಿದೆ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 156 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ.

English summary
Best Sedan Car India. Tata Indigo XL Sedan car review, Indigo XL Bangalore Price. Indigo XL Mileage, Interior, Exterior, Models, Specifications, Features.
Please Wait while comments are loading...

Latest Photos