ಬೆಸ್ಟ್ ಸೆಡಾನ್: ಆಸ್ಟನ್ ಮಾರ್ಟಿನ್ ರಾಪಿಡ್ ವಿ12

Posted By:
<ul id="pagination-digg"><li class="next"><a href="/four-wheelers/2012/maybach-57-s-review-best-sedan-in-india-002580.html">Next »</a></li></ul>

ದುಬಾರಿ, ಅದ್ದೂರಿ ಸೆಡಾನ್ ಕಾರೊಂದು ಖರೀದಿಸಲು ಬಯಸುವರು ಆಸ್ಟನ್ ಮಾರ್ಟಿನ್ ಕಂಪನಿಯ ರಾಪಿಡ್ ವಿ12 ನೋಡಬಹುದು. ದೇಶದ ತೆರಿಗೆ, ರಿಜಿಸ್ಟ್ರೇಷನ್, ವಿಮೆ, ಆಕ್ಸೆಸರಿ ವೆಚ್ಚವೆಲ್ಲ ಸೇರಿದಾಗ ಇದು ಮತ್ತಷ್ಟೂ ದುಬಾರಿ ಕಾರಾಗಬಹುದು. ಈ ಕಾರಿನ ಅಂದಾಜು ದರ ಸುಮಾರು 2.15 ಕೋಟಿ ರುಪಾಯಿ. ಇದು ಕೋಟ್ಯಧಿಪತಿಗಳಿಗೆ ಇಷ್ಟವಾಗಬಹುದಾದ ಬೆಸ್ಟ್ ಸೆಡಾನ್.

ಆಸ್ಟನ್ ಮಾರ್ಟಿನ್ ರಾಪಿಡ್ ವಿ12 ಸೆಡಾನ್ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಇದರ ಸ್ಟೈಲಿಶ್ ಲುಕ್, ಇಂಟಿರಿಯರ್ ಮತ್ತು ಎಕ್ಸ್ ಟೀರಿಯರಿನಲ್ಲಿ ಕಣ್ಮನ ಸೆಳೆಯುವ ಫೀಚರುಗಳು ಇಷ್ಟವಾಗುತ್ತವೆ.

ಆಸ್ಟನ್ ಮಾರ್ಟಿನ್ ರಾಪಿಡ್ ಪೆಟ್ರೋಲ್ ವರ್ಷನ್ ಕಾರಿನ ಎಲ್ಲಾ ಚಕ್ರಗಳು ಅಲಾಯ್ ವೀಲ್ ಹೊಂದಿದೆ. ಇದು 48 ಕವಾಟದ 5,935ಸಿಸಿ ವಿ12 ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಗರಿಷ್ಠ 6 ಸಾವಿರ ಆವರ್ತನಕ್ಕೆ 470 ಅಶ್ವಶಕ್ತಿ ಮತ್ತು 5 ಸಾವಿರ ಆವರ್ತನಕ್ಕೆ 600ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಆಸ್ಟನ್ ಮಾರ್ಟಿನ್ ರಾಪಿಡ್ ಕಾರಿನಲ್ಲಿ ಹತ್ತು ಹಲವು ಸುರಕ್ಷತೆಯ ಫೀಚರುಗಳಿವೆ. ಮುಂಭಾಗದಲ್ಲಿ ಒಂದು ಜೊತೆ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಪೋರ್ಷ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್(ಇಬಿಡಿ) ಸೇರಿದಂತೆ ಹಲವು ಫೀಚರುಗಳು ವಿ12 ರಾಪಿಡ್ ಸೆಡಾನ್ ಕಾರಿನಲ್ಲಿದೆ.

ಈ ಅದ್ದೂರಿ ಸೆಡಾನ್ ಕಾರು ಸಿಟಿ ರಸ್ತೆಯಲ್ಲಿ ಸುಮಾರು 4 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಸುಮಾರು 7 ಕಿ.ಮೀ. ಮೈಲೇಜ್ ನೀಡುತ್ತದೆ. ಆಸ್ಟನ್ ಮಾರ್ಟಿನ್ ರಾಪಿಡ್ ವಿ12 ಸೆಡಾನ್ ಕಾರಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಭೇಟಿ ನೀಡಿ.

ಮತ್ತೊಂದು ಅತ್ಯುತ್ತಮ ಅದ್ದೂರಿ ಸೆಡಾನ್ ಮಾಹಿತಿ ಪಡೆಯಲು ಮುಂದಿನ ಪುಟ ಪ್ರವೇಶಿಸಿರಿ

<ul id="pagination-digg"><li class="next"><a href="/four-wheelers/2012/maybach-57-s-review-best-sedan-in-india-002580.html">Next »</a></li></ul>
English summary
Best Sedan India. Aston Martin Rapide V12 Review. Rapide V12 owned 48 valve 5935cc V12 petrol engine. Aston Martin Rapide V12 Price, Interior, Exterior, Mileage, Specifications.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark