ಅತ್ಯುತ್ತಮ ಅದ್ದೂರಿ ಸೆಡಾನ್: ಮೆಬಾಕ್ 57ಎಸ್ ವಿಮರ್ಶೆ
ದೇಶದಲ್ಲಿ ಅದ್ದೂರಿ, ಲಗ್ಷೂರಿ, ದುಬಾರಿ ಸೆಡಾನ್ ಕಾರು ಖರೀದಿಸಲು ಬಯಸುವರು ಮರ್ಸಿಡಿಸ್ ಬೆಂಝ್ Maybach 57S ಖರೀದಿಸಬಹುದು. ಇದು ವಿಶೇಷ ಸ್ಪೋರ್ಟಿ ಸೆಡಾನ್ ಕಾರು. ಇದರ ದರ 5 ಕೋಟಿ ರುಪಾಯಿ ಆಸುಪಾಸಿನಲ್ಲಿದೆ. ಹೀಗಾಗಿ ಕೋಟ್ಯಧಿಪತಿಗಳು ಮಾತ್ರ ಖರೀದಿಸಬಹುದು.
ಮೆಬಾಕ್ 57 ಎಸ್ ಮತ್ತು 62 ಎಂಬ ಎರಡು ಮೆಬಾಕ್ ಆವೃತ್ತಿಗಳನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ಮಾರಾಟ ಮಾಡುತ್ತಿದೆ. ಜಾಗತಿಕವಾಗಿ ಈಗ ಸುಮಾರು 200ರ ಆಸುಪಾಸಿನಲ್ಲಿ ಮೆಬಾಕ್ ಕಾರುಗಳು ಮಾರಾಟಗೊಂಡಿದೆಯಷ್ಟೇ.
ನೂತನ ಮೆಬಾಕ್ ಕಾರು 6.0 ಲೀಟರ್ ಬೈ ಟರ್ಬೊ ವಿ12 ಎಂಜಿನ್ ಹೊಂದಿದೆ. ಇದು ವಿಶೇಷ ಎಂಜಿನ್ ಆಗಿದ್ದು, 4,800-5100 ಆವರ್ತನಕ್ಕೆ 604 ಅಶ್ವಶಕ್ತಿ ನೀಡುತ್ತದೆ. ಇದು 2-4 ಸಾವಿರ ಆವರ್ತನಕ್ಕೆ 738 ಟಾರ್ಕ್ ಪವರ್ ನೀಡುತ್ತದೆ. ಇಷ್ಟು ಪವರ್ ಮತ್ತು ಟಾರ್ಕ್ ಇರುವ ಎಂಜಿನಿಂದಾಗಿ ಮೆಬಾಕ್ ಶಕ್ತಿಮಾನ್ ಕಾರಾಗಿದೆ.
ಮೆಬಾಕ್ 57ಎಸ್ ಕಾರಿನ ಎಲ್ಲಾ ಚಕ್ರಗಳಿಗೂ ಎಬಿಎಸ್ ಸಿಸ್ಟಮ್ ಇದೆ. ನಾಲ್ಕು ಡೋರಿನ ಈ ಸೆಡಾನ್ ಕಾರಿನಲ್ಲಿ ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ಡ್ರೈವರ್ ಮತ್ತು ಪ್ರಯಾಣಿಕರ ಸೀಟಿಗೆ ಏರ್ ಬ್ಯಾಗ್ ಇದೆ. ಮೂರು ಪಾಯಿಂಟಿನ ಸೀಟ್ ಬೆಲ್ಟ್ ಎಲ್ಲಾ ಸೀಟುಗಳಿಗಿವೆ.
ಮೆಬಾಕ್ ಮೈಲೇಜ್: ಈ ದುಬಾರಿ ಕಾರು ಸಿಟಿ ರಸ್ತೆಯಲ್ಲಿ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 4.0 ಕಿ.ಮೀ. ಮತ್ತು ಹೆದ್ದಾರಿ ಸುಮಾರು 8.4 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಕಾರು ಅತ್ಯಧಿಕ ಪವರ್ ನೀಡುವ ಕಾರಣ ಹೆಚ್ಚು ಇಂಧನ ಕುಡಿಯುತ್ತದೆ.
ಮೆಬಾಕ್ 57ಎಸ್ ಕಾರು 5 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಇದರಲ್ಲಿ ಕೇವಲ 5 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದಾಗಿದೆ.
ಅದ್ದೂರಿ ಕಾರು ಲೋಕದಲ್ಲಿ ಮೆಬಾಕಿಗೆ ಸದ್ಯ ಮೆಬಾಕ್ ಕಾರೇ ಪೈಪೋಟಿ ನೀಡಬಲ್ಲದು. ಸುಮಾರು 4-5 ಕೋಟಿ ರು. ನೀಡಿ ಖರೀದಿಸಬಹುದಾದ ಮೆಬಾಕ್ 57ಎಸ್ ಕಾರಿನ ಡ್ರೈವಿಂಗ್ ಅನುಭವ ಡೈನಾಮಿಕ್ ಮತ್ತು ಅನನ್ಯ.
ಮೆಬಾಕ್ ಸಂಪೂರ್ಣ ಮಾಹಿತಿಗಾಗಿ ಭೇಟಿ ನೀಡಿ


Click it and Unblock the Notifications









