ಷೆವರ್ಲೆ ಸೈಲ್ ಯಾಕೆ ಇಷ್ಟವಾಗಬೇಕು ಅಂತೀರಾ?
ಕೆಲವು ದಿನಗಳ ಹಿಂದೆಯಷ್ಟೇ ಭಾರತೀಯ ಮಾರುಕಟ್ಟೆಗೆ ಷೆವರ್ಲೆ ಸೈಲ್ ಸೆಡಾನ್ ವರ್ಷನ್ ಅನ್ನು ಅಮೆರಿಕ ಕಾರು ತಯಾರಕ ಸಂಸ್ಥೆಯಾದ ಜನರಲ್ ಮೋಟಾರ್ಸ್ ಪರಿಚಯಪಡಿಸಿತ್ತು. ಈ ಮೂಲಕ ಹೊಸ ವರ್ಷವನ್ನು ಷೆವರ್ಲೆ ಭರ್ಜರಿಯಾಗಿ ಆರಂಭಿಸಿತ್ತು.
ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಿರುವುದು ಷೆವರ್ಲೆ ಸೈಲ್ ಸೆಡಾನ್‌ಗೆ ಇನ್ನಷ್ಟು ಬಲ ತುಂಬುವಂತಾಗಿತ್ತು. ಇದರ ಪೆಟ್ರೋಲ್ ಆವೃತ್ತಿಯ ಪ್ರಾರಂಭಿಕ ದರ 4.99 ಲಕ್ಷ ರು. ಹಾಗೂ ಡೀಸೆಲ್ ವೆರಿಯಂಟ್ 6.29 ಲಕ್ಷ ರು.ಗಳಾಗಿವೆ.
ಒಟ್ಟಿನಲ್ಲಿ ಸೈಲ್ ಸೆಡಾನ್ ಕಂಪ್ಲೀಟ್ ಪ್ಯಾಕೇಜ್ ಅನ್ನು ಹೊಂದಿದೆ. ಹಾಗಿದ್ದರೆ ಸೈಲ್ ಸೆಡಾನ್ ನಿಮಗ್ಯಾಕೆ ಇಷ್ಟವಾಗಬೇಕು ಅಂತೀರಾ? ಬನ್ನಿ ಕೆಳಗಡೆ ಕೊಡಲಾಗಿರುವ ಫೋಟೊ ಫೀಚರ್ ಮೂಲಕ ಸೈಲ್ ಸೆಡಾನ್ ವೈಶಿಷ್ಟ್ಯಗಳ ಬಗ್ಗೆ ಅರಿಯೋಣ...

Dynamic Sculpture Design
ಪ್ರಮುಖವಾಗಿಯೂ ಮುಂಭಾಗದಲ್ಲಿ ವಿನ್ಯಾಸಕ್ಕೆ ಹೆಚ್ಚು ಗಮನ ಕೊಡಲಾಗಿದೆ. ಇದರ ಡೈನಾನಿಕ್ ವಿನ್ಯಾಸ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.

Superior Boot Space
ಷೆವರ್ಲೆ ಸೈಲ್ ಸೆಡಾನ್ 370 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಹಾಗಾಗಿ ದೀರ್ಘ ಪಯಣದ ಸಂದರ್ಭದಲ್ಲಿ ಇಡೀ ಕುಟುಂಬದವರ ಲಗ್ಗೇಜ್ ಹೊತ್ತೊಯ್ಯಲು ಸಹಕಾರಿಯಾಗಲಿದೆ.

Alloy Wheels
ಇದರ ಸ್ಟೈಲಿಷ್ ಹಾಗೂ ಸ್ಪೋರ್ಟಿ 8 ಸ್ಪೋಕ್, 14 ಇಂಚು ಅಲಾಯ್ ವೀಲ್‌ಗಳು ಉತ್ತಮ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ.

Dual-Cockpit Design
ಷೆವರ್ಲೆಯ ಜನಪ್ರಿಯ ಸ್ಪೋರ್ಟ್ಸ್ ಕಾರಾದ Corvette ಮಾಡೆಲ್‌ನಿಂದ ಸ್ಪೂರ್ತಿ ಪಡೆದು ಸೈಲ್ ಸೆಡಾನ್ ಇಂಟಿರಿಯರ್ ಭಾಗಗಳನ್ನು ರೂಪಿಸಲಾಗಿದೆ.

Hawk-Wing Style Front Headlamps
ಹಾಕ್ ವಿಂಗ್ ವಿನ್ಯಾಸದ ಫ್ರಂಟ್ ಹೆಡ್‌ಲ್ಯಾಂಡ್‌ಗಳು ಖಂಡಿತವಾಗಿಯೂ ಗಮನ ಸೆಳೆಯಲಿದೆ.

Ample Leg Room
ಷೆವರ್ಲೆ ಸೈಲ್ ಸೆಡಾನ್ ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿದೆ. ಇದರ ದೊಡ್ಡ ಕ್ಯಾಬಿನ್ ಉತ್ತಮ ಸ್ಥಳಾವಕಾಶವನ್ನು ಖಾತ್ರಿಪಡಿಸುತ್ತದೆ.

Stylish Armrest in the Rear Seat

Fun-Wide Audio System
ಮನರಂಜನೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು ಇದು ಫನ್-ವೈಡ್ ಆಡಿಯೋ ಸಿಸ್ಟಂ ಎಲ್ಲ ತರಹದ ಮ್ಯೂಸಿಕ್ ಪ್ಲೇ ಮಾಡಲು ಸಹಕಾರಿಯಾಗಲಿದೆ.

Fuel Efficient Engines
ಷೆವರ್ಲೆ ಸೈಲ್ ಸೆಡಾನ್ ಪೆಟ್ರೋಲ್ ಆವೃತ್ತಿಯು 1.2 ಲೀಟರ್ ಹಾಗೂ ಡೀಸೆಲ್ ವೆರಿಯಂಟ್ 1.3 ಲೀಟರ್ ಎಂಜಿನ್ ಹೊಂದಿರಲಿದೆ.

Remote Keyless Entry
ರಿಮೋಟ್ ಕಿಲೇಸ್ ಎಂಟ್ರಿ ಡೋರ್ ಲಾಕ್ ಹಾಗೂ ಅನ್‌ಲಾಕ್ ಮಾಡಲು ನೆರವಾಗಲಿದೆ.

Climate Control
ವಾತಾವರಣ ನಿಯಂತ್ರಣ ಸಹಿತ ಎಸಿ ಸಿಸ್ಟಂ ಹೊಂದಿದೆ.

Comfortable Rear Seat
ಹಿಂದಿನ ಸೀಟಿನಲ್ಲಿ ಸಂಚರಿಸುವ ಪ್ರಯಾಣಿಕರು ಕೂಡಾ ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದಾಗಿದೆ.

Driver side controls
ಡ್ರೈವರ್ ಸೈಡ್ ವಿಂಡೋ ನಿಯಂತ್ರಣದತ್ತ ಒಂದು ನೋಟ.

ಪ್ರಾಯೋಗಿಕವಾಗಿಯೂ ಸೈಲ್ ಸೆಡಾನ್ ಉತ್ತಮ ಅನುಭವ ನೀಡಲಿದೆ.

Tilt Steering
ಆರಾಮದಾಯಕ ಡ್ರೈವಿಂಗ್‌ಗಾಗಿ ಟಿಲ್ಟ್ ಸ್ಟೀರಿಂಗ್ ನೆರವು ಮಾಡಲಿದೆ.

Digital and Analog Display
ಸೈಲ್ ಸೆಡಾನ್‌ನಲ್ಲಿರುವ ಸ್ಟೈಲಿಷ್ ಡಿಜಿಟಲ್ ಅನಲಾಗ್ ಸ್ಪೀಡೊಮೀಟರ್.

Dual Airbags
ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್ ನೆರವು ಮಾಡಲಿದೆ.

ABS
ಷೆವರ್ಲೆ ಸೈಲ್ ಸೆಡಾನ್ ಯಾವ ರೀತಿ ಎಬಿಎಸ್ ನಿರ್ವಹಿಸಲಿದೆ ಎಂಬುದನ್ನು ಗ್ರಾಫಿಕ್ಸ್ ಮೂಲಕ ತೋರಿಸಿಕೊಡಲಾಗಿದೆ.

Body Coloured Side Mirror
ಕಾರಿನ ಬಾಡಿಗೆ ಹೊಂದಿಕೆಯಾಗುವ ರೀತಿಯಲ್ಲಿ ಸೈಲ್ ಸೆಡಾನ್ ಸೈಡ್ ಮಿರರ್‌ಗೆ ಕ್ಲಾಸ್ ಟಚ್ ನೀಡಲಿದೆ.

diesel engine's technical specs
ಮಾಕ್ಸಿಮಮ್ ಪವರ್ (PS @ rpm) 78 @ 4000
ಮಾಕ್ಸಿಮಮ್ ಟರ್ಕ್ಯೂ (Nm@rpm) 205 @ 1750

petrol variant's technical specs
ಮಾಕ್ಸಿಮಮ್ ಪವರ್ (PS @ rpm) 86@ 6000
ಮಾಕ್ಸಿಮಮ್ ಟರ್ಕ್ಯೂ (Nm@rpm) 113@5000

Will the Sail Win?
ಸೈಲ್ ಸೆಡಾನ್ ಪ್ರಮುಖವಾಗಿಯೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್‌ಗೆ ಪೈಪೋಟಿ ನೀಡಲಿದೆ. ಆದರೆ ಯಾವ ರೀತಿ ಗ್ರಾಹಕರನ್ನು ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸೈಲ್ ಸೆಡಾನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ


Click it and Unblock the Notifications








