ಸ್ವಿಫ್ಟ್ ಡಿಜೈರ್ ಪ್ರತಿಸ್ಪರ್ಧಿ ಸೈಲ್ ಸೆಡಾನ್ ಲಾಂಚ್

By Nagaraja

ದೇಶದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಪ್ರಬಲ ಪ್ರತಿಸ್ಪರ್ಧಿ ಎನಿಸಿಕೊಂಡಿರುವ ಷೆವರ್ಲೆ ಸೈಲ್ ಸೆಡಾನ್ ಕಾರನ್ನು ದೇಶದಲ್ಲಿ ಜನರಲ್ ಮೋಟಾರ್ಸ್ ಬಿಡುಗಡೆಗೊಳಿಸಿದೆ.

ಎಕ್ಸ್ ಶೋ ರೂಂ ಪ್ರಾರಂಭಿಕ ದರ 4.99 ಲಕ್ಷ ರು.ಗಳಿಂದ ಷೆವರ್ಲೆ ಸೈಲ್ ಸೆಡಾನ್ ಲಾಂಚ್ ಮಾಡಲಾಗಿದೆ. ಡೀಸೆಲ್ ವೆರಿಯಂಟ್ ಎಕ್ಸ್ ಶೋ ರೂಂ ದರ 6.29ರಿಂದ 7.51 ಲಕ್ಷ ರು.ಗಳ ವರೆಗಿದೆ.


ಷೆವರ್ಲೆ ಸೈಲ್ ಸೆಡಾನ್, ಸೈಲ್ ಯುವಿಎ ಹ್ಯಾಚ್‌ಬ್ಯಾಕ್‌ನ ವರ್ಷನ್‌ನ ಮುಂದುವರಿದ ಭಾಗವಾಗಿದೆ. ವಿಸ್ತರಿತ ಬೂಟ್ ಹೊರತುಪಡಿಸಿದರೆ ಕಾರಿನ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಇದು 370 ಲೀಟರ್ ಬೂಟ್ ಸ್ಪೇಸ್ ಹೊಂದಿರಲಿದೆ. ಅದೇ ಹೊತ್ತಿಗೆ ಮುಂಭಾಗದ ವಿನ್ಯಾಸವು ಸೈಲ್ ಯುವಿಇ ಜತೆ ಸಾಮತ್ಯೆಯನ್ನು ಹೊಂದಿದ್ದು, ಇಂಟಿರಿಯರ್ ಭಾಗದಲ್ಲೂ ಬದಲಾವಣೆ ತರಲಾಗಿಲ್ಲ.

ಭಾರತೀಯ ರಸ್ತೆಗೆ ಅನುಗುಣವಾಗಿ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಳವಡಿಸಲಾಗಿದೆ. ಸುಧಾರಿತ ಸಸ್ಪೆಷನ್ ಆರಾಮದಾಯಕ ಚಾಲನೆಗೆ ನೆರವಾಗಲಿದೆ. ಷೆವರ್ಲೆ ಸೈಲ್‌ನ 1.2 ಲೀಟರ್ ಪೆಟ್ರೋಲ್ ಎಂಜಿನ್ 8600 ಆರ್‌ಪಿಎಂನಲ್ಲಿ 86 ಪಿಎಸ್ ಪವರ್ ಉತ್ಪಾದಿಸಲಿದೆ. ಹಾಗೆಯೇ ಡೀಸೆಲ್ ಆವೃತ್ತಿಯಲ್ಲಿ 1.3 ಲೀಟರ್ ಮಲ್ಟಿ ಜೆಟ್ ಎಂಜಿನ್ ಹೊಂದಿರಲಿದೆ.

ದೇಶದ ಮಾರುಕಟ್ಟೆಯಲ್ಲಿ ಅಗ್ರ ಪಂಕ್ತಿಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಟೊಯೊಟಾ ಎಟಿಯೋಸ್, ಫೋರ್ಡ್ ಕ್ಲಾಸಿಕ್, ಮಹೀಂದ್ರ ವೆರಿಟೊ ಹಾಗೂ ಟಾಟಾ ಇಂಡಿಗೊ ಇಸಿಎಸ್ ಕಾರುಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

Most Read Articles

Kannada
English summary
General Motors has finally launched a car that can pose some serious challenges to India' best selling sedan, the Maruti Suzuki Swift DZire. The new Chevrolet Sail sedan has been launched in India with a mouth watering starting price of INR 4.99 lakhs. The Chevrolet Sail is also available in Diesel priced between INR 6.29 lakhs and 7.51 lakhs (all prices ex-showroom Delhi).
Story first published: Friday, February 1, 2013, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X