ಷೆವರ್ಲೆ ಬೀಟ್, ಸೈಲ್ ಮ್ಯಾಂಚೆಸ್ಟರ್ ಯುನೈಟೆಡ್ ಸೀಮಿತ ಆವೃತ್ತಿ ಲಾಂಚ್

By Nagaraja

ಇದೀಗ ಜಗತ್ತಿನೆಲ್ಲೆಡೆ ಫಿಫಾ ಫುಟ್ಬಾಲ್ ವಿಶ್ವಕಪ್ ಜ್ವರ ವ್ಯಾಪಿಸಿದೆ. ಈ ನಡುವೆ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಭಾರತದಲ್ಲಿ ನೂತನ ಬೀಟ್ ಹಾಗೂ ಸೈಲ್ ಹ್ಯಾಚ್‌ಬ್ಯಾಕ್ ಕಾರುಗಳ ಮ್ಯಾಂಚೆಸ್ಟರ್ ಯುನೈಟೆಡ್ ಲಿಮಿಟೆಡ್ ಎಡಿಷನ್ ಲಾಂಚ್ ಮಾಡಿದೆ.

ಈ ಸಂಬಂಧ ಹೇಳಿಕೆ ಕೊಟ್ಟಿರುವ ಜನರಲ್ ಮೋಟಾರ್ಸ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರವಿಂದ್ ಸಕ್ಸೇನಾ, "ಭಾರತೀಯ ಫುಟ್ಬಾಲ್ ಕ್ರೀಡಾಭಿಮಾನಿಗಳಿಗಾಗಿ ಷೆವರ್ಲೆ ಬೀಟ್ ಮತ್ತು ಸೈಲ್ ಹ್ಯಾಚ್‌ಬ್ಯಾಕ್ ಮ್ಯಾಂಚೆಸ್ಟರ್ ಯುನೈಟೆಡ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲು ಅತೀವ ಹೆಮ್ಮೆಪಡುತ್ತಿದ್ದೇವೆ" ಎಂದಿದ್ದಾರೆ.

ಷೆವರ್ಲೆ ಬೀಟ್, ಸೈಲ್ ಮ್ಯಾಂಚೆಸ್ಟರ್ ಯುನೈಟೆಡ್ ಸೀಮಿತ ಆವೃತ್ತಿ ಲಾಂಚ್

ಈ ಹಿಂದೆ 2014 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಈ ಎರಡು ಮಾದರಿಗಳನ್ನು, ಬೆಂಗಳೂರಿನಲ್ಲಿ ಸ್ಥಿತಗೊಂಡಿರುವ ಜನರಲ್ ಮೋಟಾರ್ಸ್ ಟೆಕ್ನಿಕಲ್ ಸೆಂಟರ್ ಇಂಡಿಯಾ (ಜಿಎಂಟಿಸಿ-ಐ) ಎಂಜಿನಿಯರ್‌ಗಳ ತಂಡ ವಿನ್ಯಾಸಗೊಳಿಸಿದೆ.

ಷೆವರ್ಲೆ ಬೀಟ್, ಸೈಲ್ ಮ್ಯಾಂಚೆಸ್ಟರ್ ಯುನೈಟೆಡ್ ಸೀಮಿತ ಆವೃತ್ತಿ ಲಾಂಚ್

ಇದರಲ್ಲಿ ಎಕ್ಸ್‌ಕ್ಲೂಸಿವ್ ಮ್ಯಾಂಚೈಸ್ಟರ್ ಯುನೈಟೆಡ್ ಕಿಟ್ ಲಭ್ಯವಾಗಲಿದೆ. ಅಲ್ಲದೆ ಸಾಮಾನ್ಯ ಆವೃತ್ತಿಗಿಂತಲೂ 69,000 ರು.ಗಳಷ್ಟು ದುಬಾರಿಯೆನಿಸಲಿದೆ ಎಂದು ಸಕ್ಸೇನಾ ವಿವರಿಸಿದರು.

ಷೆವರ್ಲೆ ಬೀಟ್, ಸೈಲ್ ಮ್ಯಾಂಚೆಸ್ಟರ್ ಯುನೈಟೆಡ್ ಸೀಮಿತ ಆವೃತ್ತಿ ಲಾಂಚ್

ನಿಮಗೂ ಜನರಲ್ ಮೋಟಾರ್ಸ್ ಷೆವರ್ಲೆ ಬೀಟ್, ಸೈಲ್ ಹ್ಯಾಚ್‌ಬ್ಯಾಕ್ ಕಾರಿನ ಸೀಮಿತ ಆವೃತ್ತಿ ಇಷ್ಟವಾದ್ದಲ್ಲಿ ಈಗಾಗಲೇ ಬುಕ್ ಮಾಡಿಕೊಳ್ಳಬಹುದಾಗಿದೆ. ಇದು ಎಲ್‌ಎಸ್ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಮ್ಯಾಂಚೆಸ್ಟರ್ ಯುನೈಟೆಡ್ ಡಿಕಾಲ್ಸ್, ಅಲಾಯ್ ವೀಲ್ಸ್, ವಿಶೇಷ ಸೀಟು ಕವರ್, ಮ್ಯೂಸಿಕ್ ಸಿಸ್ಟಂ, ಇಲ್ಯೂಮಿನೇಟಡ್ ಸಿಲ್ ಪ್ಲೇಟ್, ಔಟ್‌ಸೈಡ್ ಸೈಡ್ ರಿಯರ್ ವ್ಯೂ ಮಿರರ್ ಜತೆ ಬ್ಲಿಂಕರ್, ರೂಫ್ ರೈಲ್ ಮತ್ತು ಎಕ್ಸ್‌ಕ್ಲೂಸಿವ್ ಬ್ರಾಂಡಿಂಗ್ ಕಂಡುಬರಲಿದೆ.

ಷೆವರ್ಲೆ ಬೀಟ್, ಸೈಲ್ ಮ್ಯಾಂಚೆಸ್ಟರ್ ಯುನೈಟೆಡ್ ಸೀಮಿತ ಆವೃತ್ತಿ ಲಾಂಚ್

ಪ್ರಖ್ಯಾತ ಮ್ಯಾಂಚೈಸ್ಟರ್ ಯುನೈಟೆಡ್ ಶರ್ಟ್ ಜಾಹೀರಾತಿನ ಏಳನೇ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಹೊಸತಾದ ಸೀಮಿತ ಆವೃತ್ತಿಗಳನ್ನು ಷೆವರ್ಲೆ ಬಿಡುಗಡೆ ಮಾಡಿದೆ. ಅಲ್ಲದೆ ಈ ನಿಟ್ಟಿನಲ್ಲಿ www.ChevroletFC.com ವೆಬ್‌ಸೈಟ್‌ನಲ್ಲಿ ವಿಶೇಷ ವೀಡಿಯೋ ಸಹ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಟಿ ಶರ್ಟ್ ಧರಿಸುವ ಮೂಲಕ ತಮ್ಮ ಫೋಟೋಸ್‌ಗಳನ್ನು ಇಲ್ಲಿ ಹಂಚಿಕೊಳ್ಳುವಂತೆಯೂ ವಿನಂತಿ ಮಾಡಲಾಗಿದೆ.

More from DriveSpark

Article Published On: Tuesday, July 8, 2014, 12:50 [IST]
English summary
Celebrating the Chevrolet brand’s debut on Manchester United’s home shirt, General Motors India today launched the Chevrolet Beat and SAIL Hatchback Manchester United Limited Editions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+