ಆಕರ್ಷಕ ಸಿಟ್ರನ್ C3 ಏರ್‌ಕ್ರಾಸ್ ಆಟೋಮ್ಯಾಟಿಕ್ ಎಸ್‍ಯುವಿ ರಿವ್ಯೂ

ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ತನ್ನ C3 ಏರ್‌ಕ್ರಾಸ್‌ ಮಾದರಿಯು ಎಸ್‍ಯುವಿ ವಿಭಾಗವನ್ನು ಪ್ರವೇಶಿಸಿತು. ಈ ಸಿಟ್ರನ್ C3 ಏರ್‌ಕ್ರಾಸ್‌ (Citroen C3 Aircross) ಎಸ್‍ಯುವಿ ಲುಕ್, ಆರಾಮದಾಯಕ ಸವಾರಿ ಮತ್ತು ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಬಂದಿದೆ.

ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಮಾದರಿಗೆ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಬೆಂಗಳೂರಿನಂತಹ ಕಿಕ್ಕಿರಿದ ಮಹಾನಗರಗಳಲ್ಲಿ ಆಟೋಮ್ಯಾಟಿಕ್ ಕಾರುಗಳು ಡ್ರೈವಿಂಗ್ ಹೆಚ್ಚು ಸುಲಭವಾಗಿದೆ. ಇದೀಗ ಈ ಸಿಟ್ರನ್ C3 ಏರ್‌ಕ್ರಾಸ್‌ ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪರಿಚಯಿಸಿದೆ. ಈ ಮೊದಲು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡಲಾಗಿತ್ತು.

Citroen C3 Aircross Automatic

ಈ ಮೂರು-ಸಾಲು ಸಿಟ್ರನ್ C3 ಏರ್‌ಕ್ರಾಸ್‌ ಆಟೋಮ್ಯಾಟಿಕ್ (Citroen C3 Aircross Automatic) ಮಾದರಿಯು ಮ್ಯಾಕ್ಸ್ ಮತ್ತು ಪ್ಲಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ನಾವು ನಾವು ಇತ್ತೀಚೆಗೆ ಸಿಟ್ರನ್ C3 ಏರ್‌ಕ್ರಾಸ್‌ ಆಟೋಮ್ಯಾಟಿಕ್ ಎಸ್‍ಯುವಿಯನ್ನು ಡ್ರೈವ್ ಮಾಡಿದ್ದೇವೆ. ಈ ಆಟೋಮ್ಯಾಟಿಕ್ ಮಾದರಿಯಲ್ಲಿನ ಬದಲಾವಣೆ, ಡ್ರೈವಿಂಗ್ ಅನುಭವ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಬದಲಾವಣೆ: ಹೊಸ ಸಿಟ್ರನ್ C3 ಏರ್‌ಕ್ರಾಸ್‌ಗೆ ಮಾಡಿದ ಏಕೈಕ ಬದಲಾವಣೆಯು ಪವರ್‌ಟ್ರೇನ್‌ಗೆ ಮಾತ್ರ. ಹೊಸ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಜಪಾನೀ ಗೇರ್ ಬಾಕ್ಸ್ ಪರಿಣಿತರಾದ ಐಸಿನ್‌ನಿಂದ ಮೂಲವಾಗಿದೆ. ಹೊಸ ಗೇರ್‌ಬಾಕ್ಸ್ ಎಂದರೆ 1.2-ಲೀಟರ್ ಟರ್ಬೊ ಎಂಜಿನ್ ಕೆಲವು ಹೆಚ್ಚುವರಿ ಟಾರ್ಕ್‌ಗಳನ್ನು ಪಡೆದುಕೊಂಡಿದೆ - ನಿಖರವಾಗಿ 15Nm - ಮತ್ತು ಇದು ಈಗ 205Nm ಆಗಿದೆ.

Citroen C3 Aircross Automatic

ಮತ್ತೊಂದೆಡೆ ಪವರ್ ಉತ್ಪಾದನೆಯು 108.4bhp ನಲ್ಲಿ ಒಂದೇ ಆಗಿರುತ್ತದೆ. ಆದರೆ ಸಿಟ್ರನ್ C3 ಏರ್‌ಕ್ರಾಸ್‌ನ ತೂಕದಲ್ಲಿ ಬದಲಾವಣೆಯಾಗಿದ್ದು, ಇದು 34 ಕೆಜಿಯಷ್ಟು ಹೆಚ್ಚಾಗಿದೆ. C3 ಏರ್‌ಕ್ರಾಸ್‌ಗೆ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೆಲ್, ಸಿಟ್ರನ್ C3 ಏರ್‌ಕ್ರಾಸ್‌ನಲ್ಲಿ ಎಲ್ಲಿಯೂ ಆಟೋಮ್ಯಾಟಿಕ್ ಬ್ಯಾಡ್ಜ್ ಅನ್ನು ಹಾಕಿಲ್ಲ, ಆದ್ದರಿಂದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಡ್ರೈವಿಂಗ್ ಅನುಭವ: ಮ್ಯಾನುವಲ್ ಆವೃತ್ತಿಗೆ ಹೋಲಿಸಿದರೆ ತೂಕ ಹೆಚ್ಚಳದ ಹೊರತಾಗಿಯೂ ಆಕರ್ಷಕವಾಗಿದೆ. ಪ್ರಬಲವಾದ ಮಿಡ್ ರೇಂಜ್ ಮತ್ತು ಟಾಪ್ ಎಂಡ್‌ನೊಂದಿಗೆ ಎಂಜಿನ್ ಇನ್ನೂ ಉತ್ಸಾಹಭರಿತ ಮತ್ತು ಟರ್ಬೋಚಾರ್ಜ್ಡ್ ಆಗಿದೆ. C3 ಏರ್‌ಕ್ರಾಸ್‌ಗಾಗಿ ನೀಡಿದ ಹೊಸ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಾಕಷ್ಟು ಮೃದುವಾದ ಆಪರೇಟರ್ ಆಗಿದೆ. ಇದು ತ್ವರಿತವಾಗಿ ಮತ್ತು ಸುಲಭವಾಗಿ ಗೇರ್‌ಗಳ ಮೂಲಕ ಚಲಿಸುತ್ತದೆ.

Citroen C3 Aircross Automatic

C3 ಏರ್‌ಕ್ರಾಸ್‌ ಆಟೋಮ್ಯಾಟಿಕ್ ಮಾದರಿಯು ಓವರ್‌ಟೇಕ್‌ ಮಾಡುವಾಗಲು ಉತ್ತಮ ಪರ್ಫಾಮೆನ್ಸ್ ನೀಡುತ್ತದೆ. ಯಾವುದೇ ಲ್ಯಾಗ್ ಅನುಭವ ಆಗಿವುದಿಲ್ಲ. ಇನ್ನು ಸಿಟಿಗಳಲ್ಲಿ ಉತ್ತಮ ಡ್ರೈವಿಂಗ್ ಅನುಭವ ನೀಡುತ್ತದೆ. ಇನ್ನು ವಾಹನ ಪ್ರೇಮಿಗಳಿಗೆ ಸ್ಟೀರಿಂಗ್ ವ್ಹೀಲ್ ಪಕ್ಕ ಪ್ಯಾಡಲ್ ಶಿಫ್ಟರ್‌ಗಳ ಸೆಟ್ ಅನ್ನು ಸಿಟ್ರನ್ ಅನ್ನು ನೀಡಬೇಕೆಂಬ ಅಗ್ರಹ ಬರಬಹುದು.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಹೊಸ ಸಿಟ್ರನ್ C3 ಏರ್‌ಕ್ರಾಸ್‌ ಆಟೋಮ್ಯಾಟಿಕ್ ಮಾದರಿಯ ದೊಡ್ಡ ಪ್ಲಸ್ ಪಾಯಿಟ್ ಸುಲಭ ಡ್ರೈವಿಂಗ್ ಆಗಿದೆ. ಸಿಟಿ ಜನರಿಗೆ ಈ ಹೊಸ ಮಾದರಿಯು ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಈ ಮೂರು ಸಾಲಿನ ಎಸ್‍ಯುವಿಯನ್ನು ಫ್ಯಾಮಿಲಿ ಕಾರ್ ಆಗಿ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಆಗಾಗ ಗೇರ್ ಗಳನ್ನು ಬದಲಾಯಿಸಿ ವಾಹನ ಡ್ರೈವ್ ಮಾಡುವುದು ಕಷೃ ವೆಂದು ಅನಿಸಿದರೆ ಈ ಆಟೋಮ್ಯಾಟಿಕ್ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

Citroen C3 Aircross Automatic

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 29, 2024, 11:30 [IST]
English summary
Citroen c3 aircross automatic review driving impression engine performance details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+