ಇದು ಉತ್ತಮ ಕಾರು, ಆದ್ರೆ ಖರೀದಿಸಲು ಯಾರೂ ಇಲ್ಲ! ಕೇವಲ ಒಂದು ಕಾರು ಮಾತ್ರ ಮಾರಾಟವಾಗಿದೆ!

ಭಾರತದಲ್ಲಿನ ಪ್ರತಿಯೊಂದು ವಾಹನ ತಯಾರಕಾ ಕಂಪನಿ ತಮ್ಮ ಎಲ್ಲಾ ವಾಹನಗಳ ಮಾರಾಟವನ್ನು ತಿಂಗಳ ಆರಂಭದಲ್ಲಿ ಪ್ರಕಟಿಸುತ್ತವೆ. ಅನೇಕ ಕಂಪನಿಗಳು ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಬೆಳವಣಿಗೆ ಮತ್ತು ಕುಸಿತವನ್ನು ಎದುರಿಸುತ್ತವೆ. ಆದರೆ ಈ ಕಂಪನಿಯ ಪ್ರಮುಖ ಕಾರು ಮಾತ್ರ ತುಂಬಾ ಕೆಟ್ಟ ಮಾರಾಟವನ್ನು ಕಾಣುತ್ತಿದೆ.

ಭಾರತವು ಸದ್ಯ ವಿಶ್ವದ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿರುವ ದೇಶವಾಗಿದೆ. ಅಂತರಾಷ್ಟ್ರೀಯ ಕಾರುಗಳು ಕೂಡ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಸ್ಥಳೀಯವಾಗಿ ಇಲ್ಲಿ ಅನೇಕ ವಿದೇಶಿ ಬ್ರಾಂಡ್‌ಗಳು ಉತ್ಪಾದನಾ ಘಟಕಗಳನ್ನು ಹೊಂದಿವೆ. ಅದರಲ್ಲಿ ಫ್ರೆಂಚ್ ಕಂಪನಿ ಸಿಟ್ರನ್ ಕೂಡ ಒಂದಾಗಿದ್ದು, ಭಾರತದಲ್ಲಿ ವಾಹನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಗುಣಮಟ್ಟದ ಕಾರುಗಳನ್ನು ನಿರ್ಮಿಸುವಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಈ ಬ್ರಾಂಡ್‌, ಭಾರತದಲ್ಲಿ ಮಾತ್ರ ತನ್ನ ಹಿಡಿತವನ್ನು ಸಾಧಿಸುವಲ್ಲಿ ಹಿಂದೆ ಬಿದ್ದಿದೆ. ಈ ಕಂಪನಿಯ ಎಸ್‌ಯುವಿಯೊಂದು ಆಕರ್ಷಕ ವಿನ್ಯಾಸ, ಉತ್ತಮ ಫೀಚರ್ಸ್, ಅದ್ಭುತ ಗುಣಮಟ್ಟವಿದ್ದರೂ ತೀರಾ ಕೆಟ್ಟ ಮಾರಾಟವನ್ನು ಕಾಣುತ್ತಿದೆ.

citroen-c5-aircross-suv-sales-report-april-2024

ಬ್ರಾಂಡ್‌ನ ಪ್ರಮುಖ ಮಾದರಿಯಾದ ಸಿಟ್ರನ್ ಸಿ5 ಏರ್‌ಕ್ರಾಸ್ (Citroen C5 Aircross) ಕಾರು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ವಿಮರ್ಶೆಗಳನ್ನು ಪಡೆದಿದೆ. ಆದರೂ ಹೆಚ್ಚಿನ ಜನರು ಈ ಕಾರನ್ನು ಖರೀದಿಸಲು ಮುಂದಾಗುತ್ತಿಲ್ಲ. ಕಳೆದ ಆರು ತಿಂಗಳಿನಿಂದ ಈ ಕಾರಿನ ಮಾರಾಟವು ತುಂಬಾ ಕಳಪೆಯಾಗಿದೆ. ಈ ಆರು ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಕಾರುಗಳು ಮಾರಾಟವಾಗಿಲ್ಲ. ಕೆಲ ತಿಂಗಳುಗಳಲ್ಲಿ ಒಂದೇ ಒಂದು ಕಾರು ಮಾರಾಟವಾದ ಉದಾಹರಣೆಯು ಇದೆ.

ನವೆಂಬರ್ 2023 ರಲ್ಲಿ ಕೇವಲ ಐದು ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಎರಡು ಕಾರುಗಳು, ಜನವರಿ 2024 ರಲ್ಲಿ ಕೇವಲ ಒಂದು ಕಾರು ಮಾರಾಟವಾಗಿದೆ. ಇನ್ನೂ ವಿಚಿತ್ರವೆಂದರೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಒಂದು ವಾಹನ ಕೂಡ ಮಾರಾಟವಾಗಿಲ್ಲ. ಉಳಿದಂತೆ ಕಳೆದ ಏಪ್ರಿಲ್‌ನಲ್ಲಿ ಕೇವಲ ಒಂದು ವಾಹನ ಮಾತ್ರ ಮಾರಾಟವಾಗಿದೆ. ಬಿಡುಗಡೆಯಾದಾಗಿನಿಂದ ಕೇವಲ 404 ವಾಹನಗಳು ಮಾತ್ರ ಮಾರಾಟವಾಗಿವೆ.

citroen-c5-aircross-suv-sales-report-april-2024

ಭರ್ಜರಿ ವಿಶೇಷತೆಗಳಿವೆ: ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 12.3 ಇಂಚಿನ ಡಿಜಿಟಲ್ ಇನ್‌ಸ್ಟ್ರಮೆಂಟ್ ಕ್ಲಸ್ಟರ್, ಸೆಂಟರ್ ಕನ್ಸೊಲ್ ಜೊತೆ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಟೋಟೈನ್‌ಮೆಂಟ್ ಸೌಲಭ್ಯವಿದೆ. ಹೈ ಎಂಡ್ ಮಾದರಿಗಳಲ್ಲಿ ಪನೊರಮಿಕ್ ಸನ್‌ರೂಫ್, ಡ್ಯುಯಯಲ್ ಜೋನ್ ಆಟೋ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್, ಏರ್ ಪ್ಯೂರಿಫೈರ್, ಪ್ರತ್ಯೇಕವಾಗಿರುವ ಆಗಿರುವ ಎಸಿ ವೆಂಟ್ಸ್ ಹೊಂದಿದೆ. ಜೊತೆಗೆ ಕಾರಿನ ಹಿಂಬದಿಯ ಆಸನ ಸಾಲಿನಲ್ಲಿ ಮೂರು ಜನ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯವನ್ನು ನೀಡಿದ್ದು, ಸೆಗ್ಮೆಂಟ್ ಮಾದರಿಯಲ್ಲೇ ಅತಿ ಹೆಚ್ಚು ಉದ್ದಳತೆ ಮತ್ತು ಅಗಲವಾದ ವಿನ್ಯಾಸವನ್ನು ಹೊಂದಿದೆ.

ಬೂಟ್ ಸಾಮರ್ಥ್ಯವು 580 ಲೀಟರ್ ನಿಂದ 720 ಲೀಟರ್ ವರೆಗೆ ಇರುತ್ತದೆ. ದೊಡ್ಡ ಪ್ರಮಾಣದ ಸ್ಥಳಾವಕಾಶದೊಂದಿಗೆ ಸಿಟ್ರನ್ ಕಂಪನಿಯು ಹೊಸ ಕಾರಿನಲ್ಲಿ 2.0-ಲೀಟರ್(1,997ಸಿಸಿ) ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ನೀಡಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 177-ಬಿಎಚ್‌ಪಿ ಪವರ್ ಮತ್ತು 400ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

citroen-c5-aircross-suv-sales-report-april-2024

ಕಾರಿನ ವಿಫಲಕ್ಕೆ ಕಾರಣವೇನು: ಕಾರಿನ ಬೆಲೆಯು ಕಳಪೆ ಮಾರಾಟಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಸಿಟ್ರನ್ ಸಿ5 ಏರ್‌ಕ್ರಾಸ್ ಬೆಲೆಯು ರೂ. 36.91 ಲಕ್ಷದಿಂದ ರೂ. 37.67 ಲಕ್ಷಗಳಾಗಿದೆ. ಈ ಬೆಲೆಯ ಕಾರುಗಳನ್ನು ಖರೀದಿಸುವವರು ಭಾರತದಲ್ಲಿ ತುಂಬಾ ಕಡಿಮೆ. ಬೆಲೆ ಹೆಚ್ಚಾದರೂ ಕಾರಿನ ನಿರ್ಮಾಣ ಗುಣಮಟ್ಟ ಹಾಗೂ ಸವಾರಿ ಗುಣಮಟ್ಟ ತುಂಬಾ ಉತ್ತಮವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 16, 2024, 13:59 [IST]
English summary
Citroen c5 aircross suv sales report april 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+