ಭಾರತ ನಿರ್ಮಿತ ಇವಿ ಕಾರುಗಳು ವಿಶ್ವ ದೇಶಗಳಿಗೆ ರಫ್ತು... ಇದು ಹೊಸ ಅಧ್ಯಾಯ!

ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ (Citroen) ಭಾರತದಲ್ಲಿ ತಯಾರಿಸಿದ E-C3 ಎಲೆಕ್ಟ್ರಿಕ್ ಕಾರುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿರುವುದಾಗಿ ಘೋಷಿಸಿದೆ. ಈ ಮೂಲಕ ಸಿಟ್ರನ್' ಭಾರತದಲ್ಲಿ ಗಮನಾರ್ಹ ಸಾಧನೆ ಸಾಧಿಸಿದ ಮೊದಲ ಬಹುರಾಷ್ಟ್ರೀಯ ಕಾರು ತಯಾರಕ ಕಂಪನಿ ಎಂದು ಗುರುತಿಸಿಕೊಂಡಿದೆ.

ಭಾರತದಿಂದ E-C3 ಎಲೆಕ್ಟ್ರಿಕ್ ಕಾರುಗಳ ರಫ್ತು, ಕಂಪನಿಯ ಉತ್ಪಾದನೆ ಮತ್ತು ಎಂಜಿನಿಯರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಜೊತೆಗೆ ಸುಸ್ಥಿರ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ EV ಉತ್ಪಾದನಾ ಪರಿಸರ ವ್ಯವಸ್ಥೆಯ ಭಾರತದ ಗುರಿಗೆ ಗಣನೀಯ ಕೊಡುಗೆ ನೀಡುತ್ತದೆ. ಈ ಕ್ರಮವು ಪ್ರಪಂಚದಾದ್ಯಂತ ಸ್ವಚ್ಛ, ಸುರಕ್ಷಿತ ಮತ್ತು ಕೈಗೆಟುಕುವ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಉತ್ತೇಜಿಸುವ ಮಹತ್ವಾಕಾಂಕ್ಷೆಯ ಮುನ್ನಡೆಯಾಗಿದೆ. ಅಲ್ಲದೇ "ಮೇಕ್ ಇನ್ ಇಂಡಿಯಾ" ಉಪಕ್ರಮಕ್ಕೆ ಅನುಗುಣವಾಗಿ ಹಾಗೂ ಸುಸ್ಥಿರ ಮತ್ತು ಶುದ್ಧ ಸಾರಿಗೆ ವಿಧಾನಗಳ ಅಳವಡಿಕೆಯನ್ನು ಹೆಚ್ಚಿಸಲು ಜಾಗತಿಕ ಮಹತ್ವಾಕಾಂಕ್ಷೆಗಳೊಂದಿಗೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಸಿಟ್ರನ್ ಕಂಪನಿ ಹೇಳಿಕೊಂಡಿದೆ.

Citroen

ಈ ಬಗ್ಗೆ ಮಾತನಾಡಿದ ಸ್ಟೆಲಾಂಟಿಸ್ (ಸಿಟ್ರನ್ ಮಾತೃಸಂಸ್ಥೆ) ಇಂಡಿಯಾದ ಸಿಇಒ ಆದಿತ್ಯ ಜೈರಾಜ್, "ಭಾರತವು ಕಾರ್ಯತಂತ್ರದ ಮಾರುಕಟ್ಟೆ ಮಾತ್ರವಲ್ಲದೆ ನಮ್ಮ ವಾಹನಗಳು, ಘಟಕಗಳು, ತಂತ್ರಜ್ಞಾನಗಳಿಗೆ ಮೂಲ ಕೇಂದ್ರವಾಗಿದೆ. 'ಮೇಡ್-ಇನ್-ಇಂಡಿಯಾ ಸಿಟ್ರನ್ E-C3' ವಾಹನವು ನಮ್ಮ ಇಂಜಿನಿಯರಿಂಗ್ ಮತ್ತು ಅಭಿವೃದ್ಧಿ ಸಾಮರ್ಥ್ಯಗಳ ಹೆಮ್ಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ ಎಂದರು.

"ಈ 'ಮೇಕ್ ಇನ್ ಇಂಡಿಯಾ' ಸಿಟ್ರನ್ ಇ-ಸಿ 3 ಭಾರತೀಯ-ಫ್ರೆಂಚ್ ಕೈಗಾರಿಕಾ ಸಹಕಾರದ ಬಲವನ್ನು ಸಂಕೇತಿಸುತ್ತದೆ. ವಾಸ್ತವವಾಗಿ, ಸಿಟ್ರನ್ e-C3 ನ ಪ್ರಯಾಣವು ಇಂಡೋ-ಫ್ರೆಂಚ್ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಮಹತ್ವಾಕಾಂಕ್ಷೆಯನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದು ಕಳೆದ ವರ್ಷ ಜುಲೈನಲ್ಲಿ ಪರಿಸರ ಪರಿವರ್ತನೆಯ ಫ್ರೆಂಚ್ ಮಂತ್ರಿಯು, G20 ಗಾಗಿ ಚೆನ್ನೈಗೆ ಬಂದಾಗ ಇದನ್ನು ಹೈಲೈಟ್ ಮಾಡಿದ್ದಾರೆ.

Citroen

ಸಿಟ್ರನ್ e-C3 ಕಾರು ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಾಣುತ್ತಿರುವುದನ್ನು ಗಮನಿಸಲು ನನಗೆ ಸಂತೋಷವಾಗಿದೆ, ಕಳೆದ ವರ್ಷ ಸಾವಿರಾರು ಕಾರುಗಳು ಮಾರಾಟವಾಗಿವೆ. ಈಗ ಇಂಡೋನೇಷ್ಯಾ ಕಡೆಗೆ ಮೊದಲ ಸಾಗಣೆಯನ್ನು ಮಾಡಲಾಗುತ್ತಿದೆ. ಸ್ಟೆಲ್ಲಂಟಿಸ್ ತನ್ನ "ಮೇಕ್ ಇನ್ ಇಂಡಿಯಾ" ಎಲೆಕ್ಟ್ರಿಕ್ ವಾಹನಗಳನ್ನು ರಫ್ತು ಮಾಡಲು ಆಸಿಯಾನ್ ದೇಶಗಳನ್ನು ಪ್ರಾಥಮಿಕವಾಗಿ ಗುರಿಯಾಗಿಸಿಕೊಂಡಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಕೈಗೆಟಕುವ ಬೆಲೆಯಲ್ಲಿ ಕ್ಲೀನರ್ ಮೊಬಿಲಿಟಿ ಪರಿಹಾರಗಳನ್ನು ತಲುಪಿಸಲು ಕೈಜೋಡಿಸಿ ಕೆಲಸ ಮಾಡುವುದು ಮುಕ್ತ, ಅಂತರ್ಗತ ಮತ್ತು ಸುಸ್ಥಿರವಾಗಿ ಅಭಿವೃದ್ಧಿ ಹೊಂದಿದ ಇಂಡೋ-ಪೆಸಿಫಿಕ್ ಪ್ರದೇಶದ ಆಗಮನಕ್ಕೆ ಇಂಡೋ-ಫ್ರೆಂಚ್ ಕೊಡುಗೆಯ ಪ್ರಮುಖ ಆಯಾಮವಾಗಿದೆ ಎಂದಿದ್ದರು.

ಕಂಪನಿಯ ಪ್ರಕಾರ, ಇಂಡೋನೇಷ್ಯಾಗೆ ಸಿಟ್ರನ್ E-C3ನ ಮೊದಲ ಹಂತವಾಗಿ 500 ಕಾರುಗಳನ್ನು ರಫ್ತು ಮಾಡಲಾಗುತ್ತಿದೆ. ಆಧುನಿಕ ವಿನ್ಯಾಸ ಮತ್ತು ನಾವೀನ್ಯತೆಯೊಂದಿಗೆ ರಚಿಸಲಾದ E-C3 ಎಲೆಕ್ಟ್ರಿಕ್ ಕಾರು, 100% DC ಫಾಸ್ಟ್ ಚಾರ್ಜ್ ಮತ್ತು 15 AMP ಹೋಮ್ ಚಾರ್ಜಿಂಗ್ ಆಯ್ಕೆಗಳೊಂದಿಗೆ ಹೆಚ್ಚುವರಿ ಅನುಕೂಲಕ್ಕಾಗಿ ARAI MIDC ನಿಂದ ಪ್ರಮಾಣೀಕರಿಸಲ್ಪಟ್ಟ 320 km ರೇಂಜ್ ನೀಡುತ್ತದೆ.

ಇದು 13 ಬಾಹ್ಯ ಬಣ್ಣಗಳು ಮತ್ತು 47 ಗ್ರಾಹಕೀಕರಣ (Customization) ಆಯ್ಕೆಗಳಲ್ಲಿ ಲಭ್ಯವಿದೆ. Citroen ಅಡ್ವಾನ್ಸ್ಡ್ ಕಂಫರ್ಟ್ ಮತ್ತು ದಕ್ಷ ಇ-ಪವರ್‌ಟ್ರೇನ್‌ನೊಂದಿಗೆ, Citroen E-C3 ಅಸಾಧಾರಣ ಪರ್ಫಾಮೆನ್ಸ್ ಮತ್ತು ಡ್ರೈವಿಂಗ್ ರೇಂಜ್ ನೀಡುತ್ತದೆ, ಇವೆಲ್ಲವೂ SUV ನಿಲುವಿನಲ್ಲಿ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಗ್ರಾಹಕರ ತೃಪ್ತಿಗೆ ಸಿಟ್ರನ್‌ನ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 13, 2024, 9:36 [IST]
English summary
Citroen exports india made evs to international markets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+