ಬಿಡುಗಡೆ ಮುನ್ನವೇ ರಸ್ತೆಗಿಳಿದ ಟಾಟಾ ಕರ್ವ್ ಪ್ರತಿಸ್ಪರ್ಧಿ 'ಸಿಟ್ರನ್ ಬಸಾಲ್ಟ್': ವಿಶೇಷತೆಗಳೇನು?

ಸಿಟ್ರನ್ ಕಂಪನಿಯು ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಕೂಪೆ ಪರಿಕಲ್ಪನೆಯಾದ 'ಸಿಟ್ರನ್ ಬಸಾಲ್ಟ್ ವಿಷನ್'‌ನ ಚಿತ್ರಗಳನ್ನು ಇತ್ತೀಚೆಗೆ ಅನಾವರಣಗೊಳಿಸಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಭಾರತ ಮತ್ತು ದಕ್ಷಿಣ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನ ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಮುಂಬರುವ ಸಿಟ್ರನ್ ಬಸಾಲ್ಟ್‌ನ ಸ್ಪೈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡ ಮಾದರಿಯು ಬಹುತೇಕ ಸಿಟ್ರನ್ ಸಿ3 ಏರ್ ಕ್ರಾಸ್‌ಗೆ ಹೋಲುತ್ತಿದೆ. ಆದರೆ ಹಿಂಭಾಗ ಮಾತ್ರ ವಿಶಿಷ್ಟವಾದ ಕೂಪೆ ಮಾದರಿಯ ಇಳಿಜಾರಿನ ರೂಫ್‌ನೊಂದಿಗೆ ಬರುತ್ತದೆ. ಬದಿಯಿಂದ ನೋಡಿದರೆ ಈ ಹಿಂದೆ ಅನಾವರಣಗೊಂಡಂತೆಯೇ ಕಾಣುತ್ತಿದ್ದು, ಉತ್ಪಾದನಾ ಆವೃತ್ತಿಗೂ ಇದೇ ಡಿಸೈನ್ ಇರುವ ಸಾಧ್ಯತೆಯಿದೆ. ಉಳಿದಂತೆ ವಿಡಿಯೋದಲ್ಲಿ ಕಾಣಿಸಿಕೊಂಡ ಬಸಾಲ್ಟ್' ಮಿಡ್-ಸ್ಪೆಕ್ ರೂಪಾಂತರದಂತೆ ಕಾಣುತ್ತಿದೆ. ಏಕೆಂದರೆ ಬಸಾಲ್ಟ್ ವಿಷನ್ ಅನಾವರಣಗೊಂಡಾಗ ಕಾಣಿಸಿಕೊಂಡಿದ್ದ ಅಲಾಯ್ ವೀಲ್‌ಗಳು, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್ ಅನ್ನು ಇದು ಹೊಂದಿಲ್ಲ.

citroen-basalt-seen-during-testing-launch-date-features-details

ಹಾಗಾಗಿ ಇದರ ಮೇಲಿನ ಸ್ಪೆಕ್ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡು ಬರಬಹುದು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಇನ್ನು ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ 17-ಇಂಚಿನ ಕ್ಲೋವರ್-ಲೀಫ್ ವಿನ್ಯಾಸದ ಅಲಾಯ್ ಚಕ್ರಗಳನ್ನು ಹೊಂದಿದೆ. ಬಸಾಲ್ಟ್ ಅನ್ನು ಸಿ3 ಏರ್ ಕ್ರಾಸ್‌ಗಿಂತ ಮೇಲೆ ಇರಿಸುವ ನಿರೀಕ್ಷೆಯಿದ್ದು, ಇದು ಅದ್ದಕ್ಕಿಂತ ಆಕರ್ಷಕ ಅಲಾಯ್ ವೀಲ್‌ಗಳನ್ನು ಪಡೆಯಲಿದೆ.

ಏನೆಲ್ಲ ನಿರೀಕ್ಷಿಸಬಹುದು: ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಳು, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋ-ಡಿಮ್ಮಿಂಗ್ ಐಆರ್‌ವಿಎಂ, ರೇನ್-ಸೆನ್ಸಿಂಗ್ ವೈಪರ್, ಆಟೋ ಹೆಡ್‌ಲೈಟ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್, ವೆಂಟಿಲೇಟೆಡ್ ಸೀಟುಗಳು ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು. ಹಾಗೆಯೇ 6 ಏರ್‌ಬ್ಯಾಗ್‌ಗಳು, ಐಎಸ್‌ಒ ಫಿಕ್ಸ್ ಪಾಯಿಂಟ್‌ಗಳು ಮತ್ತು ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವ ಸಾಧ್ಯತೆಯಿದೆ.

ಎಂಜಿನ್ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳು: ಕನಿಷ್ಠ ಸಿಂಗಲ್-ಪ್ಯಾನ್ ಸನ್ ರೂಫ್ ಅನ್ನು ನೀಡುವುದರ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸ್ಕ್ರೀನ್ ಜೊತೆಗೆ ಬ್ಲೋವರ್ ನೊಂದಿಗೆ ರೂಫ್-ಮೌಂಟೆಡ್ ಹಿಂಭಾಗದ ಎಸಿ ವೆಂಟ್‌ಗಳನ್ನು ನೀಡಲಾಗುವುದು. ಎಂಜಿನ್ ವಿಷಯಕ್ಕೆ ಬಂದರೆ, ಅದೇ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್, 110 ಪಿಎಸ್ ಪವರ್ ಮತ್ತು 190 ಎನ್ಎಂ ಪೀಕ್ ಟಾರ್ಕ್ ಹೊಂದಿರುವ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ನೀಡಲಾಗುವುದು. 2024 ರ ದ್ವಿತಿಯಾರ್ಧದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಂಪನಿ ಪ್ರಕಾರ, ಈ ಪವರ್‌ಫುಲ್ ಮತ್ತು ಸ್ಟೈಲಿಶ್ ಮಾದರಿಯು ಗ್ರಾಹಕರಿಗೆ ಕೂಪೆಯ ಅನುಭವ, ಎಲಿವೇಟೆಡ್ ಎಸ್‌ಯುವಿಯ ಅನುಕೂಲಗಳು, ದೃಢತೆ ಮತ್ತು 5-ಡೋರ್ ವಿನ್ಯಾಸದಲ್ಲಿ ಸಿಗಲಿದೆ. ಬಸಾಲ್ಟ್ ವಿಷನ್ ಪ್ರಮುಖ ಮಾರುಕಟ್ಟೆಗಳಲ್ಲಿ ಸಿಟ್ರನ್ ಸಿ-3 ಮತ್ತು ಸಿ-3 ಏರ್ ಕ್ರಾಸ್ ಜೊತೆಗೆ ಅಂತರರಾಷ್ಟ್ರೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಹೊಸ ಕಾರು ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆ ಸೃಷ್ಟಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸಿಟ್ರನ್ ಬಸಾಲ್ಟ್ ವಿಷನ್ ಎಸ್‌ಯುವಿ ಕೂಪೆ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಸಾಕಷ್ಟು ಸ್ಥಳಾವಕಾಶದೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ರಕ್ಷಣಾತ್ಮಕ ಕವಚಗಳು ಮತ್ತು ಸೈಡ್ ಗಾರ್ಡ್ ಗಳೊಂದಿಗೆ ಸಂಯೋಜಿಸಲ್ಪಟ್ಟ ಬಸಾಲ್ಟ್ ಸುರಕ್ಷತೆ ಮತ್ತು ಭದ್ರತೆಯ ಭಾವನೆಯನ್ನು ಒದಗಿಸುತ್ತದೆ. ಇದು ಕಷ್ಟಕರವಾದ ಚಾಲನಾ ಪರಿಸ್ಥಿತಿಗಳನ್ನು ಸುಲಭವಾಗಿ ನಿಭಾಯಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, May 8, 2024, 13:43 [IST]
English summary
Citroen basalt seen during testing launch date features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+