Citroen C3 Aircross Review: ಸಿಟ್ರಸ್ ಸಿ3 ಏರ್‌ಕ್ರಾಸ್ ವಿಮರ್ಶೆ, ಅದ್ಭುತ ಕಂಡ್ರಿ!
ಭಾರತದಲ್ಲಿ ಮಿಡ್ ಸೈಜ್ ಎಸ್‌ಯುವಿಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆ ಗಳಿಸತ್ತಿವೆ. ಈ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ ಕೆಲವು ವರ್ಷಗಳಿಂದ ಅಬ್ಬರಿಸುತ್ತಿದೆ. ಮಹೀಂದ್ರಾದ ಮಿಡ್ ಸೈಜ್ ಎಸ್‌ಯುವಿಗಳು ಸಖತ್ ಫೇಮಸ್ ಆಗಿವೆ. ಹೋಂಡಾದ ಕಾರುಗಳು ಪೈಪೋಟಿ ನೀಡುತ್ತಿವೆ ಇದೀಗ, ಫ್ರೆಂಚ್ ವಾಹನ ತಯಾರಕ ಸಿಟ್ರಸ್ (Citroen) ಎಂಟ್ರಿಯಾಗಿದೆ.
ಸಿಟ್ರನ್, ದೇಶೀಯ ಮಾರುಕಟ್ಟೆಯಲ್ಲಿ ಸಿ3 ಏರ್‌ಕ್ರಾಸ್ (C3 Aircross) ಮಿಡ್ ಸೈಜ್ ಎಸ್‌ಯುವಿಯನ್ನು ಪರಿಚಯಿಸಿದೆ. ಇದು, ನೋಡಲು ಅತ್ಯುತ್ತಮವಾಗಿದ್ದು, ಹೇಗೆ ಕಾರ್ಯನಿರ್ವಹಿಸುತ್ತಿದೆ. ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತಿಳಿದುಕೊಳ್ಳಬೇಕೇ.. ನಮ್ಮ ತಂಡಕ್ಕೆ ಈ ಕಾರಿನ ಟೆಸ್ಟ್ ಡ್ರೈವ್ ಮಾಡಲು ಚೆನ್ನೈ ಹಾಗೂ ಈಸ್ಟ್ ಕೋಸ್ಟ್ ರೋಡ್‌ನಲ್ಲಿ ಅವಕಾಶ ದೊರೆಯಿತು. ಬನ್ನಿ ಹೇಗಿದೆ ಎಂಬುದನ್ನು ತಿಳಿಯೋಣ.

ಸಿ3 ಏರ್‌ಕ್ರಾಸ್ ಡಿಸೈನ್, ಇಂಟೀರಿಯರ್, ಟೆಕ್ನಲಾಜಿ: ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿಯನ್ನು ನೋಡಿದವರೂ ತಕ್ಷಣ, ಇದು ಸಿ3 ಹ್ಯಾಚ್‌ಬ್ಯಾಕ್ ನಂತೆ ಕಾಣುತ್ತದೆ ಎನ್ನುತ್ತಾರೆ. ಆದರೆ, ವಿನ್ಯಾಸದಲ್ಲಿ ಈ ಕಾರು, ತುಂಬಾ ಅತ್ಯಾಕರ್ಷಕವಾಗಿದ್ದು, ಇವೆರಡು ಬೇರೆ-ಬೇರೆ ಎಂದು ಸುಲಭವಾಗಿ ಗೊತ್ತಾಗುತ್ತದೆ. ಸಿ3 ಏರ್‌ಕ್ರಾಸ್ ಎಸ್‌ಯುವಿಯು ಸಿಟ್ರಸ್ ಕಂಪನಿಯ ಸಿ-ಕ್ಯುಬೆಡ್ (C-Cubed) ಫಾರ್ಮುಲಾ ಆಧರಿಸಿರುವ ಎರಡನೇ ಕಾರಾಗಿದೆ.
ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್ ರೀತಿಯಲ್ಲಿಯೇ ಹೆಡ್‌ಲ್ಯಾಂಪ್ಸ್ ಹಾಗೂ ವೈ - ಆಕಾರದ ಡಿಆರ್‌ಎಲ್ ಅನ್ನು ಸಿ3 ಏರ್‌ಕ್ರಾಸ್ ಎಸ್‌ಯುವಿಯು ಹೊಂದಿದೆ. ಮುಂಭಾಗ ಸಿಟ್ರನ್ ಸಿ3 ಏರ್‌ಕ್ರಾಸ್ ಕಾರು, ಸಿ3 ಹ್ಯಾಚ್‌ಬ್ಯಾಕ್ ಗಿಂತ ಭಿನ್ನ ಹಾಗೂ ಆಕರ್ಷಕ ವಿನ್ಯಾಸವನ್ನು ಪಡೆದಿದೆ. ದೊಡ್ಡದಾದ ಗ್ರಿಲ್ ಒಳಗೊಂಡಿದ್ದು, ಬಂಪರ್ ಮೇಲೆ, ನಂಬರ್ ಪ್ಲೇಟ್ ಇದ್ದು, ಅದರ ಕೆಳಗೆ ಸಿಲ್ವರ್ ಫಾಕ್ಸ್ ಬ್ಯಾಷ್ ಪ್ಲೇಟ್ ಹಾಗೂ ಸರ್ಕ್ಯುಲರ್ ಫಾಗ್ ಲ್ಯಾಪ್ಸ್ ಇವೆ.

ಈ ಸಿಟ್ರನ್ ಸಿ3 ಏರ್‌ಕ್ರಾಸ್, ಸೈಡ್ ಭಾಗವು ಉತ್ತಮ ನೋಟವನ್ನು ಹೊಂದಿದ್ದು, ಇಲ್ಲಿ, ಈ ಎಸ್‌ಯುವಿಯೊಂದಿರುವ 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ವೀಕ್ಷಿಸಬಹುದು. ಜೊತೆಗಿದು 17 ಇಂಚಿನ ಡಿಮ್ಯಾಂಡ್ ಕಟ್ ಅಲಾಯ್ ವೀಲ್ ಪಡೆದಿದೆ. ವೀಲ್ ಅರ್ಚಸ್ ಕೂಡ ಅತ್ಯುತ್ತಮವಾಗಿದೆ. ಹಿಂಭಾಗವು ಸೂಪರ್ ಲುಕ್ ಹೊಂದಿದ್ದು, 3ಡಿ ಸಿ-ಶೇಪ್ಡ್ ಟೈಲ್‌ಲೈಟ್ ಒಳಗೊಂಡಿದ್ದು, ವಿಂಡ್‌ಸ್ಕ್ರೀನ್ ಕೂಡ ಚೆನ್ನಾಗಿದೆ. ಬಂಪರ್‌ನಲ್ಲಿ ದಪ್ಪನಾದ ಫಾಕ್ಸ್ ಬ್ಯಾಷ್ ಪ್ಲೇಟ್ ಇದೆ.
ಸಿಟ್ರನ್ ಸಿ3 ಏರ್‌ಕ್ರಾಸ್ ಕಾರು, ಒಳ್ಳೆಯ ಫೀಚರ್ ಪಡೆದುಕೊಳ್ಳುವ ಮೂಲಕ ಅತ್ಯಾಧುನಿಕವಾಗಿದೆ. ಡ್ಯಾಶ್ ಬೋಡ್ ಆಕರ್ಷಕವಾಗಿದ್ದು, 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಹಾಗೂ ಹೊಸದಾದ 7 ಇಂಚಿನ ಡ್ರೈವರ್‌ನ ಡಿಸ್‌ಪ್ಲೇಯನ್ನು ಹೊಂದಿದೆ. ಎಸಿ ಸೆಟಪ್ ಕೂಡ ಉತ್ತಮವಾಗಿದೆ. ಸನ್‌ರೂಫ್ ಇಲ್ಲದಿರುವುದು ಸವಾರರಿಗೆ ಬೇಸರ ತರಿಸುತ್ತದೆ.

ಈ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿಯ ಆಸನ ವ್ಯವಸ್ಥೆಯು ಉತ್ತಮವಾಗಿದ್ದು, 5+2 ಸೀಟ್ ಇರುವ ವೇರಿಯೆಂಟ್ ಲಾಸ್ಟ್ ರೋ ಸೀಟ್ ನಲ್ಲಿ ಮಕ್ಕಳು ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದು. ವಯಸ್ಕರಿಗೆ ಅದು ಸಾಧ್ಯವಾಗುವುದಿಲ್ಲ. ಈ ಕಾನ್ಫಿಗರೇಶನ್‌ನಲ್ಲಿ ಮಿಡ್ ರೋ ಆರ್ಮ್‌ರೆಸ್ಟ್ ಇಲ್ಲದಿರುವುದು ಪ್ರಯಾಣಿಕರಿಗೆ ಕಿರಿ ಕಿರಿ ಉಂಟಾಗುತ್ತದೆ. ಇದು ಬಿಟ್ಟರೆ, ಬೇರೆ ಸಮಸ್ಯೆಗಳು ಇಲ್ಲ.
ಸಿ3 ಏರ್‌ಕ್ರಾಸ್ ಎಸ್‌ಯುವಿ 511 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದ್ದು, ವಾರಾಂತ್ಯದಲ್ಲಿ ಎಲ್ಲಿಯಾದರೂ ಪ್ರವಾಸಕ್ಕೆ ಹೋಗಬೇಕಾದರೆ, ಹೆಚ್ಚಿನ ಬ್ಯಾಗ್‌ಗಳನ್ನು ಸಾಗಿಸಬಹುದು. ಆದರೆ, 5+2 ಸೀಟ್ ಕಾನ್ಫಿಗರೇಶನ್ ಕಾರಿನಲ್ಲಿ ಇದು ಕೊಂಚ ಕಷ್ಟವಾಗುತ್ತದೆ. ಐದು ಜನ ತೆರಳುವಾಗ ಸೀಟ್ ಮಡಚಿದರೆ, ಸ್ವಲ್ಪ ಹೆಚ್ಚಿನ ಸ್ಥಳಾವಕಾಶ ಸಿಗುತ್ತದೆ.

ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ, ಮೈಸಿಟ್ರಸ್ (MyCitroen) ಕನೆಕ್ಟ್ ಎಂಬ ವೈಶಿಷ್ಟ್ಯಗಳನ್ನು ಹೊಂದಿದೆ. ಇದು, ಜಿಯೋ ಫೆನ್ಸಿಂಗ್, ಫ್ಯುಯೆಲ್ ಸ್ಟೇಟಸ್, SOS ಅಲರ್ಟ್ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸುತ್ತದೆ. ಇದರೊಟ್ಟಿಗೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 6 ಏರ್ ಬಾಗ್ಸ್, ABS, EBD, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, TPMS, ISOFIX ಚೈಲ್ಡ್ ಸೀಟ್ ಆಂಕರ್ಸ್, ರೇರ್ -ವ್ಯೂ ಕ್ಯಾಮೆರಾ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ನ್ನು ಪಡೆದಿದೆ.
ಸಿಟ್ರನ್ ಸಿ3 ಏರ್‌ಕ್ರಾಸ್ ಸುತ್ತಳತೆ, ಕಾರ್ಯಕ್ಷಮತೆ & ರಸ್ತೆಯಲ್ಲಿ ಹೇಗೆ ಚಲಿಸಲಿದೆ: ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ, 4,300 ಎಂಎಂ ಉದ್ದ, 1,796 ಎಂಎಂ ಅಗಲ, 1,654 ಎಂಎಂ ಎತ್ತರ ಮತ್ತು 2,671 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಸೀಟ್ ಕಾನ್ಫಿಗರೇಶನ್‌ಗೆ ಅನುಗುಣವಾಗಿ, 444 ರಿಂದ 511 ಲೀಟರ್ ಬೂಟ್ ಸ್ಪೇಸ್ ಒಳಗೊಂಡಿದೆ.

ಈ ಕಾರು, 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5,500rpmನಲ್ಲಿ 108.4 bhp ಗರಿಷ್ಠ ಪವರ್ ಹಾಗೂ 1,750 rpmನಲ್ಲಿ 190 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. 18.5 km/l ಮೈಲೇಜ್ ನೀಡುತ್ತದೆ.
ಸಿಟ್ರನ್ ಸಿ3 ಏರ್‌ಕ್ರಾಸ್ ಓಡಿಸಬೇಕಾದರೆ, ಚಾಲಕರಿಗೆ ಅದ್ಬುತ ಅನುಭವ ನೀಡುತ್ತದೆ. ಆರಾಮದಾಯವಾಗಿ ಕುಳಿತುಕೊಂಡು ಡ್ರೈವಿಂಗ್ ಮಾಡಬಹುದು. ನೀವು ಈ ಕಾರನ್ನು ಹೆದ್ದಾರಿಯು ಉತ್ತಮವಾಗಿ ಚಾಲನೆ ಮಾಡಬಹುದು. ಉಬ್ಬು ಹಾಗೂ ಹಳ್ಳ ದಿಣ್ಣೆಯಿರುವ ರಸ್ತೆಗಳಲ್ಲಿಯೂ ಅಡೆತಡೆ ಇಲ್ಲದೆ, ಚೆನ್ನಾಗಿ ಡ್ರೈವ್ ಮಾಡಬಹುದು. ಇದರ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಕೂಡ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರ ಬ್ರೇಕ್, ಬೇಗನೇ ವೇಗವನ್ನು ಕಡಿಮೆಗೊಳಿಸುತ್ತದೆ.

ಡ್ರೆವ್ ಸ್ಪಾರ್ಕ್ ಅಭಿಪ್ರಾಯ: ಸಿಟ್ರಸ್ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಸಿ3 ಏರ್‌ಕ್ರಾಸ್ ಎಸ್‌ಯುವಿಯ 'ಮ್ಯಾಕ್ಸ್' ರೂಪಾಂತರವನ್ನು ಮಾತ್ರ ಮಾರಾಟ ಮಾಡಲಿದೆ. ಮುಂಬರುವ ದಿನಗಳಲ್ಲಿ ಬೆಲೆಯನ್ನು ಘೋಷಣೆ ಮಾಡಲಿದೆ. ರೂ.11 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇದು, ಮಿಡ್ ಸೈಜ್ ವಿಭಾಗದಲ್ಲಿ ಅತುತ್ತಮ ಎಸ್‌ಯುವಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








