ನನ್ನ ಸ್ಟೈಲ್ ಬೇರೇನೆ, ಲುಕ್ ಬೇರೇನೆ - 'ಮಹೀಂದ್ರ ಇ2ಒ'
ದೇಶಕ್ಕೆ ಮೊತ್ತ ಮೊದಲ ಬಾರಿಗೆ ವಿದ್ಯುತ್ ಚಾಲಿತ ವಾಹನ ಪರಿಚಯಮಾಡಿಕೊಟ್ಟಿರುವ ಮಹೀಂದ್ರ ರೇವಾ, ಇದೀಗ ನೂತನ ಝಿರೋ ಎಮಿಷನ್ ಎಲೆಕ್ಟ್ರಿಕ್ 'ಮಹೀಂದ್ರ ಇ2ಒ' (Mahindra e2o) ಕಾರನ್ನು ಪರಿಚಯ ಮಾಡಿಕೊಟ್ಟಿದೆ.
ನವದೆಹಲಿಯಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಾ. ಫಾರೂಕ್ ಅಬ್ದುಲ್ಲ, ಪ್ರಫುಲ್ ಪಟೇಲ್ ಹಾಗೂ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಉಪಸ್ಥಿತರಿದ್ದರು.
ಮಹೀಂದ್ರ ಇ2ಒ 'ಭವಿಷ್ಯದ ಸಂಚಾರಿ ವಾಹನ' ಎಂದೇ ಬಿಂಬಸಲ್ಪಟ್ಟಿದೆ. ಇದರ '5ಸಿಎಸ್' ಫ್ರೇಮ್‌ವರ್ಕ್ ಶುಭ್ರ, ಆರಾಮದಾಯಕ, ಸಂಪರ್ಕಿತ, ಪ್ರತಿಭಾವಂತ ಹಾಗೂ ಪರಿಣಾಮಕಾರಿ ವಾಹನ ವೆಚ್ಚ ತಂತ್ರಜ್ಞಾನವನ್ನು ಒಳಗೊಂಡಿದೆ.
ದರ ಮಾಹಿತಿ: 5.96 ಲಕ್ಷ ರು. (ಆನ್ ರೋಡ್ ದೆಹಲಿ)
21ನೇ ಶತಮಾನದಲ್ಲಿ ಮಹೀಂದ್ರ ವಿದ್ಯುತ್ ಚಾಲಿತ ವಾಹನ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ, ಇ2ಒ ಲಾಂಚ್ ಮಹೀಂದ್ರ ಸಂಸ್ಥೆಯ ಪಾಲಿಗೆ ಮಹತ್ವದ ಮೈಲುಗಲ್ಲಾಗಿದೆ ಎಂದಿದ್ದಾರೆ.
ವಾತಾವರಣಕ್ಕೆ ಹಾನಿಕಾರಕವಾಗಬಲ್ಲ ಹೊಗೆ ಹೊರಸೂಸುವಿಕೆ ಯಾಕೆ ಕಡಿಮೆ ಮಾಡಬೇಕು. ಇದರ ಬದಲು ಸಂಪೂರ್ಣ ಝಿರೋ ಎಮಿಷನ್ ಬಗ್ಗೆ ಚಿಂತಿಸಿದರೇನಂತೆ? ಯಾಕೆ ನಿಮ್ಮ ಕಾರು ನಿಮ್ಮ ಜತೆ ಸದಾ ಸಂಪರ್ಕದಲ್ಲಿರಬಾರದು? ಯಾಕೆ ನಿಮ್ಮ ಕಾರು ಆಲೋಚಿಸುತ್ತಾ ಸ್ಮಾರ್ಟ್ ಆಗಬಾರದು? ಯಾಕೆ ನಿಮ್ಮ ಕಾರು ಸೈಲೆಂಟ್ ಆಗಿದ್ದು, ಸ್ಟೇಮ್‌ಮೆಂಟ್ ಕೊಡಬಾರದು? ಯಾಕೆ ನಿಮ್ಮ ಕಾರು ನಿಧಾನವಾಗಿ ಚಲಿಸುವಾಗ ಸ್ವಯಂಚಾಲಿತವಾಗಿ ಚಾರ್ಜ್ ಆಗಬಾರದು? ನೀವು ಕಾರೊಂದನ್ನು ಮಾತ್ರ ಯಾಕೆ ಚಲಾಯಿಸಬೇಕು? ಬದಲಾಗಿ ಭವಿಷ್ಯದ ಸಂಚಾರದ ದೃಷ್ಟಿಯಲ್ಲಿ ಚಾಲನೆ ಮಾಡಬಾರದು? ಮೇಲೆ ಸೂಚಿಸಲಾದ ಎಲ್ಲ ಪ್ರಶ್ನೆಗಳಿಗೂ ಉತ್ತರ 'ಮಹೀಂದ್ರ ಇ2ಒ' ಆಗಿದೆ.

ಪ್ರಮುಖವಾಗಿಯೂ ನಗರ ಪ್ರದೇಶದ ಸಂಚಾರ ಸಮಸ್ಯೆಗೆ ಪರಿಹಾರವಾಗಿ ಮಹೀಂದ್ರ ಇ2ಒ ವಿದ್ಯುತ್ ಚಾಲಿತ ವಾಹನ ತಯಾರಿಸಲಾಗಿದೆ. ಇದರ ಶೂನ್ಯ ಹೊಗೆ ಹೊರಸೂಸುವಿಕೆಯು ಪರಿಸರ ಮಾಲಿನ್ಯ, ಅವನತಿ, ಆರೋಗ್ಯ ಸಮಸ್ಯೆ, ಹವಾಮಾನ ಬದಲಾವಣೆ ಸಮಸ್ಯೆಗಳಿಗೆ ಮುಕ್ತಿ ನೀಡಲಿದೆ.

ಮಹೀಂದ್ರ ಎನ್ಎಕ್ಸ್‌ಆರ್ ಪ್ರೊಜೆಕ್ಟ್‌ನಲ್ಲಿ ನಿರ್ಮಾಣವಾಗಿರುವ 'ಇ2o' ವಿಶ್ಲೇಷಣೆ ರೂಪ ಇಂತಿದೆ. ಇದರಲ್ಲಿ 'ಇ' ಎಂಬುದು ಸೂರ್ಯ ಕಿರಣದ ಶಕ್ತಿಯ ಸಂಕೇತ. ಹಾಗೆಯೇ '2' ಎಂಬುದು ಕಾರಿನಲ್ಲಿನ ಸಂಪರ್ಕ ತಂತ್ರಜ್ಞಾನ ಮತ್ತು 'o' ಎಂಬುದು ಓಕ್ಸಿಜನ್ ಪ್ರತೀಕವಾಗಿದೆ.

ಸಮಕಾಲೀನ ಪರಿಸ್ಥಿತಿಯಲ್ಲಿ ಇಂಧನ ಬೆಲೆಯು ದಿನದಿಂದ ದಿನಕ್ಕೆ ವರ್ಧಿಸುತ್ತಿರುವಂತೆಯೇ ಗ್ರಾಹಕರಿಗೆ ಇ2ಒ ಉತ್ತಮ ಆಯ್ಕೆಯಾಗಿರಲಿದೆ. ಇದು ಗ್ರಾಹಕರಿಗೆ ಶುದ್ಧ, ಸ್ಮಾರ್ಟ್ ಹಾಗೂ ಆರ್ಥಿಕವಾಗಿಯೂ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ.

ಕಿಕ್ಕಿರದ ನಗರ ಸಂಚಾರಕ್ಕೆ ಅನುಕೂಲಕರ
ಮಹೀಂದ್ರ ಇ2ಒ ಮುಂದಿನ ಜನಾಂಗದ ಇಥಿಯಂ ಇಯಾನ್ ಬ್ಯಾಟರಿಗಳಿಂದ ನಿಯಂತ್ರಿಸಲ್ಪಟ್ಟಿದ್ದು, 3 ಫೇಸ್ ಇಂಡಕ್ಷನ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಮಹೀಂದ್ರ ಇ2ಒ ಸಂಪೂರ್ಣ ಆಟೋಮ್ಯಾಟಿಕ್ ಆಗಿದ್ದು, ನಗರ ಪ್ರದೇಶದ ಚಾಲನೆಯನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ. ಅಂದರೆ ಟ್ರಾಫಿಕ್‌ಗಳಲ್ಲಿ ಪದೇ ಪದೇ ಗೇರ್ ಬದಲಾಯಿಸುವ ಅಗತ್ಯವಿರುವುದಿಲ್ಲ.

ಟರ್ನಿಂಗ್ ರೇಡಿಯಸ್ ಕೂಡಾ ಚೊಕ್ಕದಾಗಿರುವುದರಿಂದ ಯಾವುದೇ ಕಿರಿದಾದ ಪ್ರದೇಶದಲ್ಲೂ ಥಟ್ಟನೆ ತಿರುವು ಮಾಡಬಹುದಾಗಿದೆ. ಇದರ ಯೂನಿಕ್ ಹಿಲ್ ಹೋಲ್ಡ್ ವೈಶಿಷ್ಟ್ಯವು ಇಳಿಜಾರಿನಲ್ಲೂ ನಿಮ್ಮ ಡ್ರೈವಿಂಗ್ ಆತಂಕವನ್ನು ದೂರ ಮಾಡಲಿದೆ. ಹಾಗೆಯೇ ಇದರ ವಿಶೇಷ ಎಬಿಎಸ್ ಬಾಡಿ ಪ್ಯಾನೆಲ್, ಯಾವುದೇ ಅಪಾಯವಾಗದಂತೆ ನೋಡಿಕೊಳ್ಳಲಿದೆ.

ಇಂಟಿರಿಯರ್
ಇನ್ನು ಕಾರಿನ ಒಳಭಾಗದ ಬಗ್ಗೆ ಚರ್ಚಿಸುವುದಾದರೆ ನಾಲ್ಕು ಜನರಿಗೆ ಕುಳಿತುಕೊಳ್ಳಬಹುದಾದ ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ. ಹಾಗೆಯೇ ಒಮ್ಮೆ ಚಾರ್ಜ್ ಮಾಡಿಸಿದರೆ 100 ಕೀ.ಮೀ. ತನಕ ಚಲಿಸುವ ಸಾಮರ್ಥ್ಯ ಪಡೆದಿದೆ.

ನಿಮ್ಮ ಕೈಗಳಲ್ಲಿ ಶಕ್ತಿ
ಮಹೀಂದ್ರ ಇ2ಒ ಸಂಪರ್ಕಿಸಲಾದ ತಂತ್ರಜ್ಞಾನವು ಶಕ್ತಿ, ಸಂಚಾರ ಹಾಗೂ ಸಂಪರ್ಕದ ಸಂಶ್ಲೇಷಣೆಯಾಗಿದೆ. ಇದರ ಸ್ಮಾರ್ಟ್ ಫೋನ್ ಅಪ್ಲಿಕೇಷನ್, ದೂರದಲ್ಲಿದ್ದುಕೊಂಡು ಹಲವಾರು ಕಾರ್ಯಗಳನ್ನು ನಿರ್ವಹಿಸಲು ನೆರವಾಗಲಿದೆ.

ಉದಾಹರಣೆಗಾಗಿ ಇದರ ಸ್ಮಾರ್ಟ್ ಫೋನ್ ಅಪ್ಲಿಕೇಷನ್, ಕಾರು ಲಾಕ್ ಮಾಡುವುದು ಅಥವಾ ಕಾರಿನ ಎಸಿ ಆನ್ ಮಾಡಬಹುದಾಗಿದೆ. ಹಾಗೆಯೇ ಟ್ರಿಪ್ ಪ್ಲಾನರ್ ಕೂಡಾ ನೆರವಾಗಲಿದೆ. ಇನ್ನು ಇದರ ಅಲರ್ಟ್ ಸಿಸ್ಟಂ ಸದಾ ನಿಮ್ಮ ಜತೆ ಸಂಪರ್ಕದಲ್ಲಿರಲಿದೆ.

ಚಾರ್ಜಿಂಗ್ ಸುಲಭ
ನಿಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಟಾಬ್ಲೆಟ್ ಚಾರ್ಜ್ ಮಾಡುವ ರೀತಿಯಲ್ಲೇ ಮಹೀಂದ್ರ ರೇವಾ ಇ2ಒ ಚಾರ್ಜಿಂಗ್ ಕೂಡಾ ಅಷ್ಟೇ ಸುಲಭವಾಗಿದೆ. ಅಂದರೆ ನಿಮ್ಮ ಮನೆಯಲ್ಲಿ ಲಭ್ಯವಿರುವ 15A ಪವರ್ ಸೊಕೆಟ್‌ನಿಂದ ಚಾರ್ಜ್ ಮಾಡಿಸಬಹುದಾಗಿದೆ. ಕೇವಲ ಐದು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಿಸಬಹುದಾಗಿದೆ. ಈ ಮೂಲಕ 100 ಕೀ.ಮೀ. ತನಕ ಸಂಚರಿಸಲು ನೆರವಾಗಲಿದೆ. ಇದು ನಿಮ್ಮ ದೈನಂದಿನ ಸಂಚಾರಕ್ಕೆ ಸಾಕಾಷ್ಟಾಗಿದೆ.

ಒಂದು ವೇಳೆ ಸಂಚಾರದ ವೇಳೆ ಚಾರ್ಜಿಂಗ್ ಡೌನ್ ಆದ್ದಲ್ಲಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಮೂಲಕ ರಿಸರ್ವ್ ಎನರ್ಜಿ ಆನ್ ಮಾಡಬಹುದಾಗಿದೆ. ಈ ತಂತ್ರಜ್ಞಾನಕ್ಕಾಗಿ REVive® ಜತೆ ಕೈಜೋಡಿಸಿಕೊಂಡಿದೆ.

ವೈಶಿಷ್ಟ್ಯದಲ್ಲಿ ಶ್ರೀಮಂತ ಹಾಗೂ ದಕ್ಷ ಶಕ್ತಿ
15.5 ಸೆಂಟಿ ಮೀಟರ್ ಟಚ್ ಸ್ಕ್ರೀನ್, ಜಿಪಿಎಸ್ ನೇವಿಗೇಷನ್ ಸಿಸ್ಟಂ, ರೇಡಿಯೋ, ಡಿವಿಡಿ, ಬ್ಲ್ಯೂ ಟೂತ್ ಹಾಗೂ ಐ-ಪೊಡ್ ಕನೆಕ್ಟಿವಿಟಿಗಳಂತಹ ಆಧುನಿಕ ಫೀಚರ್‌ಗಳನ್ನು ಮಹೀಂದ್ರ ಇ2ಒ ಹೊಂದಿರಲಿದೆ. ಹಾಗಾಗಿ ಜಾಗ ಕಂಡುಹಿಡಿಯುವುದು ಅಥವಾ ಹತ್ತಿರದ ಚಾರ್ಜಿಂಗ್ ಸ್ಟೇಷನ್ ಪತ್ತೆಹಚ್ಚುವುದು ಇನ್ನಷ್ಟು ಸುಲಭವಾಗಲಿದೆ.

ಇನ್ನು ಹೈ ಎಂಡ್ ಕಾರುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಪೂರ್ಣ ಡಿಜಿಟಲ್ ಕ್ಲಸ್ಟರ್, ಎಲೆಕ್ಟ್ರಿಕ್ ಚಾಲಿತವಾದ ವಿಂಗ್ ಮಿರರ್, ಕಿಲೇಸ್ ಎಂಟ್ರಿ, ಸ್ಟಾರ್ಟ್/ಸ್ಟಾಪ್ ಬಟನ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್‌ಇಡಿ ಟೈಲ್ ಲ್ಯಾಂಪ್, ರಿವರ್ಸ್ ಕ್ಯಾಮೆರಾ ಹಾಗೂ 4ಜೆಬಿಎಲ್ ಸ್ಪೀಕರ್‌ಗಳಂತಹ ಫೀಚರ್‌ಗಳನ್ನು ಹೊಂದಿದೆ.

ಮಹೀಂದ್ರ ವಿದ್ಯುತ್ ಚಾಲಿತ ವಾಹನದ ಮತ್ತೊಂದು ವೈಶಿಷ್ಟ್ಯ ಏನೆಂದರೆ ನೀವು ಬ್ರೇಕ್ ಹಾಕಿದ ಅಥವಾ ನಿಧಾನವಾಗಿ ಚಲಿಸಿದ ಸಂದರ್ಭದಲ್ಲಿ ಕಾರಿನ ಬ್ಯಾಟರಿಗೆ ಎನರ್ಜಿ ರಿ ಸಪ್ಲೈ ಮಾಡಲಿದೆ. ಈ ಮೂಲಕ ಚಾರ್ಜ್ ಆಗಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಕಾರಿಗಳಿಂದ ನೀವೀಗ ಮುಕ್ತಿ ಪಡೆಯಬಹುದಾಗಿದ್ದು, ವರ್ಷಕ್ಕೊಂದು ಬಾರಿ ಮಾತ್ರ ಸರ್ವಿಸ್ ಮಾಡಿದರೆ ಸಾಕು. ಇದಕ್ಕಾಗಿ ಸರ್ವಿಸ್ ಸೆಂಟರ್ ಕೂಡಾ ಹೋಗುವ ಅಗತ್ಯವಿರುವುದಿಲ್ಲ. ಬದಲಾಗಿ ನಿಮ್ಮ ಮನೆಬಾಗಿಲಲ್ಲೇ ಸೇವೆ ಲಭ್ಯವಾಗಲಿದೆ.

ಒಟ್ಟು ಆರು ಕಲರ್ ವೆರಿಯಂಟ್‌ಗಳಲ್ಲಿ ಸ್ಟ್ರೈಲಿಷ್ ಮಹೀಂದ್ರ ಇ2ಒ ಲಭ್ಯವಿರಲಿದೆ. ಅವುಗಳೆಂದರೆ.
Arctic Silver,
Coral Blue,
Eco Green,
Oceanic White,
Spanish Red
Sunfire Yellow.

ಕ್ಲೀನ್ ಆಂಡ್ ಗ್ರೀನ್
ಭವಿಷ್ಯದ ಸಂಚಾರ ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಪರಿಸರ ಸ್ನೇಹಿ ವಾಹನವನ್ನು ಇ2ಒ ಮೂಲಕ ಮಹೀಂದ್ರ ರೂಪಿಸಿದೆ. 'ಸನ್2ಕಾರು' ತಂತ್ರಜ್ಞಾನ ಮೂಖಾಂತರ ಸೋಲರ್ ಚಾರ್ಜಿಂಗ್ ಯುನಿಟ್ ಅಭಿವೃದ್ಧಿಪಡಿಸಲಾಗಿದೆ.

ಸುರಕ್ಷತಾ ಮಾನದಂಡ:
ಗರಿಷ್ಠ ಕ್ಷಮತೆಯ ಸ್ಟೀಲ್ ಫ್ರೇಮ್ ನಿರ್ಮಾಣ
ಪಾಲಿಮಾರ್ ಬಾಡಿ ಪ್ಯಾನೆಲ್
ISOFIX ಚೈಲ್ಡ್ ಸೀಟ್ ಮೌಂಟ್ ಜತೆ ALR ಸೀಟ್ ಬೆಲ್ಟ್
ಎಲ್ಲ ನಾಲ್ಕು ಸೀಟ್‌ಗಳಿಗೂ ಹೊಂದಾಣಿಕೆಯಾಗಬಲ್ಲ ಹೆಡ್ ರೆಸ್ಟ್
ಡ್ಯುಯಲ್ ಸೈಡ್ ಇಂಪಾಕ್ಟ್ ಬೀಮ್
ಸೀಟ್ ಕೆಳಗಡೆ ಬ್ಯಾಟರಿ

ಇದೀಗ ಮಹೀಂದ್ರ ವಿದ್ಯುತ್ ಚಾಲಿತ ವಾಹನ 'ಇ2ಒ' ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ಮಹೀಂದ್ರ ಇ2ಒ

ಮಹೀಂದ್ರ ಇ2ಒ

ಮಹೀಂದ್ರ ಇ2ಒ

ಮಹೀಂದ್ರ ಇ2ಒ



Click it and Unblock the Notifications








