ವೀಕೆಂಡ್ ಪ್ರವಾಸಕ್ಕೆ ಸಮರ್ಥವಾದ ಕಾರು ಯಾವುದು?
ವೀಕೆಂಡ್ ಪ್ರವಾಸಕ್ಕೆ ಯೋಗ್ಯವೆನಿಸಿದ ಕಾರು ಯಾವುದು ? ನಿಮ್ಮದು ದೊಡ್ಡ ಕುಟುಂಬವೇ ? ಸೂಕ್ತ ಕಾರೊಂದರ ಆಯ್ಕೆಗಾಗಿ ಗೊಂದಲದಲ್ಲಿದ್ದೀರಾ? ಚಿಂತೆ ಬೇಡ ಒಂದು ಉತ್ತಮ ಕಾರಿನೊಂದಿಗೆ ನಾವು ನಿಮ್ಮ ಮುಂದೆ ಬಂದಿರುತ್ತೇವೆ.
ಕಾರು ಬೈಕ್ ವಿಮರ್ಶೆಗಳ ಸಮಗ್ರ ಪುಟಕ್ಕಾಗಿ ಭೇಟಿ ಕೊಡಿರಿ
ಪ್ರತಿಯೊಂದು ವಾಹನ ವೆಬ್ ಸೈಟ್ ಗಳಂತೆಯೇ ಹೋಂಡಾ ಮೊಬಿಲಿಯೊ ಕಾರನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶ ನಮಗೂ ದೊರಕಿತ್ತು. ಆದರೆ ಒಂದು ಸಾಮಾನ್ಯ ರಿವ್ಯೂಗಿಂತಲೂ ವಿಭಿನ್ನವಾಗಿ ಇದು ನಿಜಕ್ಕೂ ವೀಕೆಂಡ್ ಪ್ರವಾಸಕ್ಕೆ ಹೇಗೆ ಯೋಗ್ಯವೆನಿಸುತ್ತದೆ ಎಂಬುದಕ್ಕೆ ಮೊಬಿಲಿಯೊ ಮುಖಾಂತರ ಉತ್ತರ ಹುಡುಕುವ ಪ್ರಯತ್ನ ನಮ್ಮದಾಗಿತ್ತು. ಅಲ್ಲದೆ ನಮಗೆ ದೊರಕಿರುವ ಪ್ರತಿಕ್ರಿಯೆ ನಿಜಕ್ಕೂ ಅಚ್ಚರಿ ಕಾದಿತ್ತು. ಬೆಂಗಳೂರಿನಿಂದ ಆರಂಭವಾದ ಈ 650 ಕೀ.ಮೀ. ಗಿಂತಲೂ ಹೆಚ್ಚಿನ ದೂರದ ವೀಕೆಂಡ್ ಪ್ರವಾಸದ ಸಂಪೂರ್ಣ ಮಾಹಿತಿಗಾಗಿ ಮುಂದುವರಿಯಿರಿ.

ಅಂದೊಂದು ಶನಿವಾರ ಸಂಜೆಯ ವೇಳೆ ಮೊಬಿಲಿಯೊ ಕಾರು ನಮ್ಮ ಕೈ ಸೇರಿತ್ತು. ಇನ್ನೇನು ತಡ ಮಾಡದೇ ನೇರವಾಗಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಪ್ರಕೃತಿ ರಮಣೀಯ ಬಂಡೀಪುರ ದಟ್ಟಾರಣ್ಯದತ್ತ ಪಯಣ ಬೆಳೆಸಿದೆವು. ಹೆದ್ದಾರಿಯಲ್ಲಿ ಮೊಬಿಲಿಯೊ ಹ್ಯಾಂಡ್ಲಿಂಗ್ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿತ್ತು.

ಸೂರ್ಯ ದೇವ ಅಂಧಾಕಾರಕ್ಕೆ ಶರಣಾಗುವ ವೇಳೆಯಾಗುವಷ್ಟರಲ್ಲಿ ನಾವು ಮೈಸೂರು ಹೊರವಲಯವನ್ನು ತಲುಪಿದ್ದೆವು. ನಿಮಗೆಲ್ಲರಿಗೂ ತಿಳಿದಿರುವಂತೆಯೇ ರಾತ್ರಿ ಪಯಣಕ್ಕೆ ಅತಿ ಹೆಚ್ಚು ಗೋಚರತೆಯ ಅಗತ್ಯವಿರುತ್ತದೆ. ಮೊಬಿಲಿಯೊ ಮುಖಾಂತರ ನಾವಿದನ್ನು ಅನುಭವಿಸಿರುತ್ತೇವೆ.

ರಾತ್ರಿ ಖಾಸಗಿ ಹೋಟೆಲ್ ವೊಂದರಲ್ಲಿ ವಿಶ್ರಾಂತಿ ಮಾಡಿದ ನಾವು ಮರುದಿನ ಮುಂಜಾವಿನಲ್ಲೇ ನಮ್ಮ ಪಯಣವನ್ನು ಮುಂದುವರಿಸಿದ್ದೆವು. ದೊಡ್ಡದಾದ ಇಂಧನ ಟ್ಯಾಂಕ್ ಇದಿದ್ದರಿಂದ ದೂರ ಪ್ರಯಾಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಬೆಳಗ್ಗೆಯಾಗಿದ್ದರಿಂದ ರಸ್ತೆಯಲ್ಲಿ ನಮಗೆ ಯಾವುದೇ ಇತರೆ ಗಾಡಿಗಳ ತೊಂದರೆಯು ಎದುರಾಗಿಲ್ಲ.

ಆ ವೇಳೆಯಾಗುವಾಗ ಆ ಅಪಘಾತ ನಡೆದೇ ಹೋಗಿತ್ತು. ತಿರುವಿನಲ್ಲೂ ಮೊಬಿಲಿಯೊ ಹ್ಯಾಂಡ್ಲಿಂಗ್ ಪರಿಣಾಮಕಾರಿ ಎನ್ನುವಷ್ಟರಲ್ಲಿ ಬದಿಯಲ್ಲಿ ನೋಡಿದಾಗ ಬೃಹತ್ ಘನ ವಾಹನವೊಂದು ಚಿರನಿದ್ರೆಗೆ ಜಾರಿತ್ತು. ಅದೃಷ್ಟವಶಾತ್ ಯಾರಿಗೂ ಏನೇ ತೊಂದರೆಯಾಗಿಲ್ಲ ಎಂದು ಭಾವಿಸುತ್ತಾ ನಮ್ಮ ಪಯಣವನ್ನು ಇನ್ನು ಮುಂದಕ್ಕೆ ಮುಂದುವರಿಸಿದೆವು.

ಇದೇ ನೋಡಿ (ಚಿತ್ರ) ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯದ ಸ್ವಾಗತ ಕಮಾನು. 874 ಚದರ ಅಡಿ ಕೀ.ಮೀ. ವಿಸ್ತಾರವಾಗಿ ಹರಡಿರುವ ಈ ಅಭಯಾರಣ್ಯವನ್ನು ಹುಲಿಗಳ ರಕ್ಷಣೆಗಾಗಿ 1974ರಲ್ಲಿ ರೂಪುಗೊಂಡಿತ್ತು. ಊಟಿ ಹಾದಿಯಲ್ಲಿ ಸಿಗುವ ಬಂಡೀಪುರ ಅಭಯಾರಣ್ಯ ದೇಶದಲ್ಲೇ ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರೂ ಭೇಟಿ ಕೊಡುವ ಸ್ಥಳವೂ ಆಗಿದೆ. ಹಾಗೊಂದು ವೇಳೆ ನೀವು ಈ ಹಾದಿಯಲ್ಲಿ (ವಿಶೇಷವಾಗಿಯೂ ರಾತ್ರಿ ವೇಳೆಯಲ್ಲಿ) ಸಂಚರಿಸುವುದಾದ್ದಲ್ಲಿ ದಯವಿಟ್ಟು ನಿಮ್ಮ ವೇಗಕ್ಕೆ ಮಿತಿ ಇರಲಿ. ಯಾಕೆಂದರೆ ರಾತ್ರಿ ವೇಳೆಯಲ್ಲಿ ವನ್ಯ ಜೀವಿಗಳು ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಈ ಮೂಲಕ ಅಮಾಯಕ ಜೀವಗಳನ್ನು ಬಲಿ ಕೊಡದಿರಿ.

ಆಗೋ ನೋಡಿ ನಾವು ಅಂದುಕೊಂಡಿದ್ದೇ ತಡ ಗಜರಾಜನೋರ್ವ ರಸ್ತೆಯನ್ನು ದಾಟುವ ಮನೋಹರ ದೃಶ್ಯ. ಗಜರಾಜನ ಜೊತೆ ನಮ್ಮ ಮೊಬಿಲಿಯೊ ಚಿತ್ರವನ್ನು ಸೆರೆ ಹಿಡಿಯಲು ಸಾಧ್ಯವಾಗಿರುವುದು ಬಹುಶ: ನಮ್ಮ ಅದೃಷ್ಟವಾಗಿರಬಹುದು. ನಮ್ಮ ಪ್ರವಾಸಕ್ಕೆ ಶುಭ ಹಾರೈಸುತ್ತಾ ಆನೆ ರಸ್ತೆ ದಾಟಿ ಕಾಡಿನತ್ತ ಹೆಜ್ಜೆಯಿಟ್ಟಿತು.

ನಮ್ಮ ಪ್ರವಾಸದಲ್ಲಿ ಕಂಡುಬಂದಿರುವ ವಿಶೇಷವೆಂದರೆ 100 ಅಶ್ವಶಕ್ತಿ ಉತ್ಪಾದಿಸಬಲ್ಲ ಮೊಬಿಲಿಯೊ ಐಡಿಟೆಕ್ ಡೀಸೆಲ್ ಎಂಜಿನ್ ಅತ್ಯುತ್ತಮ ಹ್ಯಾಂಡ್ಲಿಂಗ್ ನೀಡುತ್ತಿತ್ತು. ಇದರ ರಿಯರ್ ವ್ಯೂ ಕನ್ನಡಿ ಇನ್ನು ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿದ್ದು, ಹಿಂದಿನಿಂದ ಬರುವ ವಾಹನಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬಹುದಾಗಿದೆ.

ಅತಿ ಅಪಾಯಕಾರಿ ಹೇರ್ ಪಿನ್ ತಿರುವಿನಲ್ಲೂ ಮೊಬಿಲಿಯೊ ಕೂಲಾಗಿ ಮುಂದಕ್ಕೆ ಸಂಚರಿಸಿತ್ತು. ಇದರ ಶ್ರೇಯಸ್ಸು ಮೊಬಿಲಿಯೊ ತಿರುಗುಬಲ ಹಾಗೂ ಸಸ್ಪೆಷನ್ ವ್ಯವಸ್ಥೆಗೆ ಸೇರುತ್ತದೆ. ಇಲ್ಲಿ ಮೊಬಿಲಿಯೊ ಗ್ರೌಂಡ್ ಕ್ಲಿಯರನ್ಸ್ ಸಹ ಪ್ರಶಂಸನೀಯವೆನಿಸಿದೆ.

ಹ್ಹಾಂ, ಆವಾಗಲೇ ನಾವು ನೀಲಗಿರಿ ಬೆಟ್ಟವನ್ನು ತಲುಪಿಯೇ ಬಿಟ್ಟಿದ್ದೆವು. ನೀಲಗಿರಿಯ ಹಳೆಯ ಚರ್ಚ್ ಮುಂಭಾಗದಲ್ಲಿ ಹೊಚ್ಚ ಹೊಸ ಮೊಬಿಲಿಯೊ ಎಂಥವರನ್ನು ಒಮ್ಮೆ ಕಣ್ಮಣ ಸೆಳೆಯುವಂತಿದೆ. 19ನೇ ಶತಮಾನದ ಈ ಕ್ರಿಸ್ತ ದೇವಾಲಯ ಹಲವಾರು ಕಾರಣಗಳಿಂದಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಸಾಮಾನ್ಯ ಹಳ್ಳ ಗುಂಡಿಗಳಿಂದ ತುಂಬಿಕೊಂಡಿರುವ ನಮ್ಮ ನಾಡಿನ ರಸ್ತೆಗಳಿಗಿಂತ ವಿಭಿನ್ನವಾಗಿ ಕೊಥಗಿರಿ ಮಾರ್ಗವಾಗಿ ಮೆಟ್ಟುಪಾಲಯಂ ರಸ್ತೆ ನಮ್ಮ ಮೆಚ್ಚೆಗೆಗೆ ಪಾತ್ರವಾಗಿತ್ತು.

ಪ್ರೇಕ್ಷಣೀಯ ಕೊಡನಾಡ್ ಟೀ ಎಸ್ಟೇಟ್ ನಲ್ಲಿ ನವವಧುವಿನಂತೆ ಸಿಂಗಾರಗೊಂಡಿರುವ ನಮ್ಮ ಮೊಬಿಲಿಯೊ. ಈ ಬೇಸಿಗೆಯಲ್ಲೂ ಅಲ್ಲಿನ ತಂಪಾದ ವಾತಾವರಣ ಪ್ರತಿಯೊಬ್ಬ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಹಸಿರು ತೋರಣದಂತಿರುವ ಕಾಫಿ ಬೆಳೆ ಎಸ್ಟೇಟ್ ನಲ್ಲಿ ಸ್ಟೈಲಿಷ್ ವಿನ್ಯಾಸವನ್ನು ಪಡೆದುಕೊಂಡಿರುವ ಮೊಬಿಲಿಯೊದ ಒಂದು ಆಕರ್ಷಕ ನೋಟವಿದು.

ಈ ನಡುವೆ ಕೆಲವು ವಾಹನ ಪ್ರೇಮಿಗಳು ನಡೆಸುತ್ತಿದ್ದ ಕ್ಲಾಸಿಕ್ ರೋಡ್ ಟ್ರಿಪ್ ನಮಗೆ ರಸದೌತಣ ನೀಡುವಂತಿತ್ತು. ನಮಗಿಲ್ಲಿ ಕ್ಲಾಕಿಕ್ ವೆಸ್ಪಾ, ಬಜಾಜ್ ಚೇತಕ್ ಜೊತೆಗೆ ಇನ್ನಿತರ ಹಳೆಯ ಸ್ಕೂಟರ್ ಗಳನ್ನು ನೋಡುವ ಅವಕಾಶ ದೊರಕಿತ್ತು.

ಕ್ಲಾಸಿಕ್ ಸ್ಕೂಟರ್ ಕ್ಲಬ್ ವೊಂದು ಇದನ್ನು ನಡೆಸಿಕೊಂಡಿತ್ತು. ಈ ರೋಚಕ ದೃಶ್ಯಗಳು ನಮ್ಮ ಪಯಣವನ್ನು ಇನ್ನಷ್ಟು ಆನಂದದಾಯಕವಾಗಿಸಿತ್ತು.

ಹೋಂಡಾ ಮೊಬಿಲಿಯೊ ಬದಿಯಿಂದಲೂ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತದೆ. ಹೋಂಡಾದ ವಿಶೇಷ ಸ್ವಭಾವ ರೇಖೆ ಇದರ ಪ್ರಮುಖ ಆಕರ್ಷಣೆಯಾಗಿದೆ. ಇನ್ನು ಹೆಚ್ಚು ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

ಫಾಟಿ ರಸ್ತೆಯಲ್ಲಿ ಅದರಲ್ಲೂ ರಾತ್ರಿ ವೇಳೆಯಲ್ಲಿ ಓವರ್ ಟೇಕ್ ಮಾಡುವ ಗೋಜಿಗೆ ಯಾವತ್ತೂ ಹೋಗದಿರಿ. ಅಲ್ಲದೆ ರಸ್ತೆಯಲ್ಲಿ ಲೇನ್ ಕಾಪಾಡಲು ಮರೆಯದಿರಿ. ಇನ್ನು ಮುಂದಿನಿಂದ ಬರುವ ಗಾಡಿಗೆ ಸೈಡ್ ನೀಡುವಾಗಲೂ ತುಂಬಾನೇ ಸೈಡ್ ಗೆ ಬರುವುದು ಬೇಡ.

ಇನ್ನೇನು ಭಾನುವಾರ ಸಂಜೆಯಾಗುತ್ತಿದ್ದಂತೆ ನಮಗೆ ಹಿಂತಿರುಬೇಕಾದ ಎಚ್ಚರಿಕೆ ಗಂಟೆ ಬಾರಿಸಿತ್ತು. ಆದರೆ ರಸ್ತೆಯೆಲ್ಲ ವಾಹನಗಳಿಂದ ತುಂಬುಕೊಂಡಿತ್ತು. ಇಲ್ಲಿನ ವಾಹನ ದಟ್ಟಣೆಯು ನಮಗೆ ಸಹನೆಯ ಪಾಠವನ್ನು ಕಲಿಸಿ ಕೊಟ್ಟಿತ್ತು.

ಭಾವಸಿನಗರದ ರಸ್ತೆಯ ಮಿಲನದ ಆಕರ್ಷಕ ನೋಟ. ಇನ್ಯಾಕೆ ತಡ ನಮ್ಮ ಮೊಬಿಲಿಯೊಗೆ ಫೋಸ್ ಕೊಡಲು ಪರಿಪೂರ್ಣವಾದ ಜಾಗವಿದು.

ಒಟ್ಟಿನಲ್ಲಿ ಒಂದು ಪರಿಪೂರ್ಣ ವೀಕೆಂಡ್ ಪ್ರವಾಸವನ್ನು ಬಯಸುವವರು ಮೊಬಿಲಿಯೊ ಕೊಂಡುಕೊಳ್ಳಬಹುದಾಗಿದೆ. ಪ್ರತಿ ಬಾರಿಯಂತೆ ಕಾರಿನ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಈ ಜಪಾನ್ ಸಂಸ್ಥೆ ಯಶ ಕಂಡಿದೆ. ಹೋಂಡಾ ಮೊಬಿಲಿಯೊ ಆನ್ ರೋಡ್ ಬೆಲೆ ಮಾಹಿತಿಗಾಗಿ ಇಲ್ಲಿ ಭೇಟಿ ಕೊಡಿ

ಹೋಂಡಾ ಮೊಬಿಲಿಯೊ - ಕೆಲವು ವಿಶೇಷತೆಗಳು
ಹೊರಮೈ
- ವಿಂಗ್ ಮುಖದ ಫ್ರಂಟ್ ಕ್ರೋಮ್ ಗ್ರಿಲ್,
- ಆಕರ್ಷಕ ಹೆಡ್ ಲ್ಯಾಂಪ್,
- ಮೆಕ್ರೋ ಆಂಟೆನಾ,
- ರಿಯರ್ ಡಿಫಾಗರ್,
- ಎಲ್ ಇಡಿ ಸ್ಟಾಪ್ ಲ್ಯಾಂಪ್,
- ಫಾಗ್ ಲ್ಯಾಂಪ್,
- ರಿಯರ್ ವೈಪರ್ ಜೊತೆ ವಾಶರ್,
- ಹಿಂದುಗಡೆ ಕಾಂಬಿ ಲ್ಯಾಂಪ್,
- ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಓಆರ್ ವಿಎಂ,
- 10 ಸ್ಪೋಕ್ ಅಲಾಯ್ ವೀಲ್
- ಟಿಲ್ಟ್ ಸ್ಟೀರಿಂಗ್,
- ಆಕ್ಸೆಸರಿ ಸಾಕೆಟ್, ಯುಎಸ್ ಬಿ ಪೋರ್ಟ್ ,
- 2 ಡಿನ್ ಇಂಟೆಗ್ರೇಟಡ್ ಆಡಿಯೋ ಸಿಸ್ಟಂ,
- ಎತ್ತರ ಹೊಂದಾಣಿಕೆಯ ಡ್ರೈವಿಂಗ್ ಸೀಟು,
- ಎರಡನೇ ಸಾಲಿನಲ್ಲೂ ಎಸಿ ವೆಂಟ್ಸ್,
- ಕೀಲೆಸ್ ಎಂಟ್ರಿ,
- ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
- 15.7 ಸೆಂಟಿಮೀಟರ್ ಟಚ್ ಸ್ಕ್ರೀನ್ ಆಡಿಯೋ ವಿಷ್ಯುವಲ್ ನೇವಿಗೇಷನ್ ಸಿಸ್ಟಂ,
- ಸ್ಪೋರ್ಟಿ ಇನ್ಸ್ಟ್ರಮೆಂಟ್ ಕ್ಲಸ್ಟರ್,
- ನೇವಿಗೇಷನ್, ಬ್ಲೂಟೂತ್,
- ರಿಯರ್ ವ್ಯೂ ಪಾರ್ಕಿಂಗ್ ಕ್ಯಾಮೆರಾ,
- ಯುಎಸ್ ಬಿ, ಆಕ್ಸ್, ಐ-ಪೊಡ್, ಡಿವಿಡಿ/ಸಿಡಿ, ಎಎಂ/ಎಫ್ಎಂ
- ಫ್ರಂಟ್ ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್,
- ಎಬಿಎಸ್ ಜೊತೆ ಇಬಿಡಿ,
- ಇಂಮೊಬಿಲೈಜರ್ ಆ್ಯಂಟಿ ಥೆಫ್ಟ್ ಸಿಸ್ಟಂ
- ಸೀಟು ಬೆಲ್, ಏಸ್ ದೇಹ ರಚನೆ

ಒಳಮೈ

ಎಂಜಿನ್ ತಾಂತ್ರಿಕತೆ
1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್,
100 ಅಶ್ವಶಕ್ತಿ, 25.5 kmpl
1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್,
119 ಅಶ್ವಶಕ್ತಿ, 17.3 kmpl
5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್



Click it and Unblock the Notifications








