ಹಾಯಾಗಿರಿ; ಸುಧಾರಿತ ಸೀಟುಗಳೊಂದಿಗೆ ಮೊಬಿಲಿಯೊ ಎಂಟ್ರಿ

Written By:

ನಿಮ್ಮ ದೂರ ಪ್ರಯಾಣವನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಇಂದೇ ಖರೀದಿಸಿ ಮೊಬಿಲಿಯೊ. ಏಕೆಂದರೆ ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ತನ್ನ ಜನಪ್ರಿಯ ಮೊಬಿಲಿಯೊ ಮಾದರಿಯನ್ನು ಸುಧಾರಿತ ಆಸನ ವ್ಯವಸ್ಥೆಯೊಂದಿಗೆ ಪರಿಚಯಿಸುತ್ತಿದೆ.

ಹೋಂಡಾ ಬಹುನಿರೀಕ್ಷಿತ ಬಹು ಬಳಕೆಯ ವಾಹನವಾಗಿರುವ (ಎಂಪಿವಿ) ಮೊಬಿಲಿಯೊ ಏಳು ಜನರಿಗೆ ಆರಾಮದಾಯಕ ಪಯಣವನ್ನು ಖಾತ್ರಿಪಡಿಸುತ್ತಿದೆ.

To Follow DriveSpark On Facebook, Click The Like Button
honda mobilio

ಇತರ ಮಾದರಿಗಳಿಗೆ ಹೋಲಿಸಿದರೆ ಮೊಬಿಲಿಯೊ ಕಾರಿನ ಸೀಟುಗಳು ಹೆಚ್ಚು ಆರಾಮದಾಯಕವಾಗಿದ್ದು, ಲಗ್ಗೇಜ್‌ಗಳನ್ನು ಇಡಲು ಹೆಚ್ಚು ಸ್ಥಳಾವಕಾಶವನ್ನು ಪಡೆದುಕೊಂಡಿದೆ ಎಂದು ಹೋಂಡಾ ತಿಳಿಸಿದೆ.

ಹಾಗೆಯೇ ಪ್ರಯಾಣಿಕರು ತಮಗೆ ಬೇಕಾದ ರೀತಿಯಲ್ಲಿ ಒರಗುವ ವ್ಯವಸ್ಥೆ ಮಾಡಲಾಗಿದೆ. ಆದರೆ ಮೂರನೇ ಸಾಲಿನಲ್ಲಿ ಮಾತ್ರ ಇಂತಹ ವ್ಯವಸ್ಥೆಯಿರುವುದಿಲ್ಲ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಹೊಸ ಹೋಂಡಾ ಮೊಬಿಲಿಯೊ ದೆಹಲಿ ಎಕ್ಸ್ ಶೋ ರೂಂ ಬೆಲೆ 6.49 ಲಕ್ಷ ರು.ಗಳಿಂದ 11.41 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಮೊಬಿಲಿಯೊ ಆರಾಮದಾಯಕ ಸೀಟು - ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/EyM2JFBuwk0" frameborder="0" allowfullscreen></iframe>
English summary
Japanese automobile giant Honda had launched its much awaited MPV for India. The manufacturer has christened their vehicle as ‘Mobilio'. It provides sufficient room for seven occupants for comfortable seating.&#13;
Story first published: Tuesday, January 20, 2015, 15:58 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark