ನೀವು ಏಕೆ ಹ್ಯುಂಡೈ ಎಕ್ಸ್‌ಸೆಂಟ್ ಖರೀದಿಸಬೇಕು?

By Nagaraja

ಇದೀಗಷ್ಟೇ ಲಾಂಚ್ ಆಗಿರುವ ಹ್ಯುಂಡೈ ಎಕ್ಸ್‌ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು, ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಅಮೇಜ್ ಪ್ರತಿಸ್ಪರ್ಧಿ ಎಕ್ಸ್‌ಸೆಂಟ್ ಲಾಂಚ್

ಇದು ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಈಗಾಗಲೇ ಸದ್ದು ಮಾಡುತ್ತಿರುವ ಹೋಂಡಾ ಅಮೇಜ್ ಹಾಗೂ ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಸ್ವಿಫ್ಟ್ ಡಿಜೈರ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ. ಅಷ್ಟಕ್ಕೂ ಇತರ ಮಾದರಿಗಿಂತ ಹ್ಯುಂಡೈ ಕಾಂಪಾಕ್ಟ್ ಸೆಡಾನ್ ಹೇಗೆ ಭಿನ್ನವಾಗಿದೆ? ನೀವು ಏಕೆ ಹ್ಯುಂಡೈ ಎಕ್ಸ್‌ಸೆಂಟ್ ಖರೀದಿಸಬೇಕು? ಎಂಬುದನ್ನು ಸ್ಲೈಡರ್ ಮುಖಾಂತರ ತಿಳಿದುಕೊಳ್ಳಿರಿ..

ಸ್ಟೈಲಿಷ್ ಹಾಗೂ ಗರಿಷ್ಠ ತಂತ್ರಗಾರಿಕೆ

ಸ್ಟೈಲಿಷ್ ಹಾಗೂ ಗರಿಷ್ಠ ತಂತ್ರಗಾರಿಕೆ

ಸ್ಟೈಲಿಷ್ ತಾಜಾ ವಿನ್ಯಾಸ ಹಾಗೆಯೇ ಗರಿಷ್ಠ ತಂತ್ರಗಾರಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಯಶಸ್ವಿಯಾಗಿದೆ. ಇದು 20ರಿಂದ 40 ವರ್ಷ ಪ್ರಾಯದೊಳಗಿನ ಕಾರು ಖರೀದಿಗಾರರಿಗೆ ಉತ್ತಮವೆನಿಸಲಿದೆ.

ಸ್ಥಳೀಯವಾಗಿ ನಿರ್ಮಾಣ

ಸ್ಥಳೀಯವಾಗಿ ನಿರ್ಮಾಣ

ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರಿನ ತಲಹದಿಯಲ್ಲಿ ಹ್ಯುಂಡೈ ಐ10 ನಿರ್ಮಾಣವಾಗುತ್ತಿರುವುದು ಮಗದೊಂದು ಪ್ಲಸ್ ಪಾಯಿಂಟ್. ನಿಮ್ಮ ಮಾಹಿತಿಗಾಗಿ ಕಳೆದ ವರ್ಷಾಂತ್ಯದಲ್ಲಿ ಲಾಂಚ್ ಆಗಿದ್ದ ಐ10 ಈಗಾಗಲೇ 51,000 ಯಶಸ್ವಿ ಗ್ರಾಹಕರನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ನಾಮಕರಣ

ನಾಮಕರಣ

ಇನ್ನು ಐಕಾನಿಕ್ ಅಸೆಂಟ್ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಲುವಾಗಿ ನೂತನ ಕಾರಿಗೆ ಎಕ್ಸ್‌ಸೆಂಟ್ ಎಂದು ನಾಮಕರಣ ಮಾಡಲಾಗಿದೆ. ನಿಮ್ಮ ಮಾಹಿತಿಗಾಗಿ, 2013ರಲ್ಲಿ ಹಳೆಯ ಅಸೆಂಟ್ ಮಾದರಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.

ಒಳಮೈ

ಒಳಮೈ

ಡ್ಯುಯಲ್ ಟೋನ್ ಬೀಜ್, ಸೀಟು ಜತೆಗೆ ಬ್ಲ್ಯಾಕ್ ಇಂಟಿರಿಯರ್, ಗರಿಷ್ಠ ಸ್ಟೋರೆಜ್ ಸ್ಪೇಸ್, ಡೋರ್ ಟ್ರಿಮ್, ಸೆಂಟ್ರಲ್ ಕಂಟ್ರೋಲ್, ರಿಯರ್ ಏರ್ ಕಾನ್ ವೆಂಟ್ಸ್, ಸ್ಮಾರ್ಟ್ ಕೀ ಜತೆ ಫುಶ್ ಬ್ಯಾಕ್ ಬಟನ್ ಸ್ಟಾರ್ಟ್, ಎಲೆಕ್ಟ್ರೊ ಕ್ರೋಮಿಕ್ ಮಿರರ್ ಜತೆ ರಿಯರ್ ಕ್ಯಾಮೆರಾ ಡಿಸ್‌ಪ್ಲೇ ಸೌಲಭ್ಯವಿರಲಿದೆ.

 ಸುರಕ್ಷತೆ

ಸುರಕ್ಷತೆ

ಇನ್ನು ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಆಂಟಿ ಲಾಕ್ ಬ್ರೇಕ್ ಸಿಸ್ಟಂ (ಎಬಿಎಸ್), ಡ್ಯುಯಲ್ ಏರ್ ಬ್ಯಾಗ್, ರಿಯರ್ ಪಾರ್ಕಿಂಗ್ ಅಸಿಸ್ಟ್ ಮತ್ತು ರಿಯರ್ ಡಿಫಾಗರ್, ರಚನಾತ್ಮಕ ಸುರಕ್ಷತೆ, ಎಲೆಕ್ಟ್ರೋ ಕ್ರೋಮ್ ಮಿರರ್ (ಇಸಿಎಂ), ಪವರ್ ವಿಂಡೋ, ರಿಯರ್ ಪಾರ್ಕಿಂಗ್ ಕ್ಯಾಮೆರಾ ಜತೆ ಇಸಿಎಂ ಪರದೆ ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಹೆಡ್ ಲ್ಯಾಂಪ್, ವೀಲ್ಸ್

ಹೆಡ್ ಲ್ಯಾಂಪ್, ವೀಲ್ಸ್

ವಿಶಾಲವಾದ ಹೆಡ್‌ಲ್ಯಾಂಪ್, ಡೈಮಂಡ್ ಕಟ್ ಅಲಾಯ್ ವೀಲ್ಸ್, ಹೆಕ್ಸಗನಲ್ ಏರ್‌ಡ್ಯಾಮ್, ವೈಡ್ ಡೇ ಲೈಟ್ ಓಪನಿಂಗ್ ಏರಿಯಾ, ರಿಯರ್ ಕ್ರೋಮ್ ಗಾರ್ನಿಶ್, ಟೈಲ್‌ಲ್ಯಾಂಪ್ ಮತ್ತು ಕ್ರೋಮ್ ಫಿನಿಶ್ ಪಡೆದುಕೊಳ್ಳಲಿದೆ.

ವಿನ್ಯಾಸ

ವಿನ್ಯಾಸ

ಇದು ಹ್ಯುಂಡೈನ ಫ್ಯೂಯಿಡಿಕ್ ಡಿಸೈನ್ ತಂತ್ರಗಾರಿಕೆಯಿಂದ ಸ್ಫೂರ್ತಿ ಪಡೆದು ರಚಿಸಲಾಗಿದೆ. ಕಿಕ್ ಅಪ್ ಟ್ರಂಕ್ ಲಿಡ್ ವಿನ್ಯಾಸ ಸಹ ಹ್ಯುಂಡೈ ಎಕ್ಸ್‌ಸೆಂಟ್ ಕಾರಿಗೆ ಇನ್ನಷ್ಟು ಅಂದತೆ ನೀಡಿದೆ. ಇಲ್ಲಿ ವಿನ್ಯಾಸ, ಗುಣಮಟ್ಟ, ಸ್ಥಳಾವಕಾಶ, ಆರಾಮದಾಯಕ ಹಾಗೂ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ಸ್ಥಾನ

ಸ್ಥಾನ

ಮಿಡ್ ಸೆಗ್ಮೆಂಟ್‌ಗಿಂತಲೂ ಕೆಳಗಡೆ ಗುರುತಿಸಿಕೊಂಡಿರುವ ಹ್ಯುಂಡೈ ಎಕ್ಸ್‌ಸೆಂಟ್‌ಗೆ ಶೇಕಡಾ 12ರಷ್ಟು ಮಾತ್ರ ಅಬಕಾರಿ ಶುಲ್ಕ ತಗುಲಲಿದೆ. ಈ ವಿಭಾಗದಲ್ಲಿ ಶೇಕಡಾ 81ರಷ್ಟು ಮಾರಾಟವು ಸಬ್ ಫೋರ್ ಸೆಗ್ಮೆಂಟ್‌ನಿಂದಲೇ ದಾಖಲಾಗುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್

ಇನ್ನು ಅಂತಿಮವಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಮ್ಯಾನುವಲ್ ಜತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಹ ಲಭ್ಯವಿದೆ.

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

  • ಸ್ಪೋರ್ಟಿ ಹಾಗೂ ಏರೋಡೈನಾಮಿಕ್,
  • ಹೆಡ್‌ಲ್ಯಾಂಪ್ ,
  • ಕ್ರೋಮ್ ಗ್ರಿಲ್ ,
  • ಟರ್ನ್ ಇಂಡಿಕೇಟರ್ಸ್,
  • ವೈಸ್ಟ್‌ಲೈನ್ ಮೌಲ್ಡಿಂಗ್,
  • ಕ್ರೋಮ್ ಡೋರ್ ಹ್ಯಾಂಡಲ್,
  • ಟೈಲ್ ಲ್ಯಾಂಪ್,
  • ರಿಯರ್ ಕ್ರೋಮ್ ಗಾರ್ನಿಶ್,
  • ಫಾಗ್ ಲ್ಯಾಂಪ್,
  • 15 ಇಂಚು ಅಲಾಯ್ ವೀಲ್,
  • ಮೈಕ್ರೋ ರೂಫ್ ಆಂಟೆನಾ
  • ಇಂಟಿರಿಯರ್

    ಇಂಟಿರಿಯರ್

    • ಪ್ರೀಮಿಯಂ ಆಂಡ್ ಕ್ಲಾಸಿ ಇಂಟಿರಿಯರ್,
    • ಫ್ರಂಟ್ ಆಂಡ್ ರಿಯರ್ ಸೀಟಿಂಗ್,
    • ಬೂಟ್ ಸ್ಪೇಸ್,
    • ರಿಯರ್ ಎಸಿ ವೆಂಟ್ಸ್,
    • ಡಿನ್ ಇಂಟೆಗ್ರೇಟಡ್ ಆಡಿಯೋ,
    • ಫುಶ್ ಬಟನ್ ಸ್ಟಾರ್ಟ್/ಸ್ಟಾಪ್,
    • ಸೀಟ್ ಬ್ಯಾಕ್ ಪೊಕೆಟ್,
    • ಕೂಲ್ಡ್ ಗ್ಲೋವ್ ಬಾಕ್ಸ್,
    • ಫ್ಲೂರ್ ಕನ್ಸೋಲ್ ಸ್ಟೋರೆಜ್,
    • ಲಗ್ಗೇಜ್ ಲ್ಯಾಂಪ್
    • ಸ್ಟೀರಿಂಗ್ ವೀಲ್ ರಿಮೋಟ್ ಕಂಟ್ರೋಲ್

      ಸ್ಟೀರಿಂಗ್ ವೀಲ್ ರಿಮೋಟ್ ಕಂಟ್ರೋಲ್

      ಬಹುಕ್ರಿಯಾತ್ಮಕ ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್,

      ಆಡಿಯೋ ಕಂಟ್ರೋಲ್ ಸ್ವಿಚ್,

      ಬ್ಲೂಟೂತ್ ಹ್ಯಾಂಡ್ಸ್ ಫ್ರಿ

      ವೈಶಿಷ್ಟ್ಯಗಳು

      ವೈಶಿಷ್ಟ್ಯಗಳು

      ಇದು ಸಂಪೂರ್ಣ ಆಟೋಮ್ಯಾಟಿಕ್ ಏರ್‌ಕಾನ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಆಂಡ್ ಕ್ಯಾಮೆರಾ, 2ಡಿನ್ ಆಡಿಯೋ, ಯುಎಸ್‌ಬಿ, 1ಜಿಬಿ ಮೆಮರಿ, ಆಟೋ ಫೋಲ್ಡಿಂಗ್ ಮಿರರ್, ಒನ್ ಟಚ್ ಎಲೆಕ್ಟ್ರಿಕ್ ಟ್ರಂಕ್ ಓಪನಿಂಗ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಬ್ಲ್ಯೂಟೂತ್, ಗ್ಲೋವ್ ಬಾಕ್ಸ್ ಕೂಲಿಂಗ್ ಮತ್ತು ಆರ್ಮ್ ರೆಸ್ಟ್ ಕಪ್ ಹೋಲ್ಡರ್ ಪಡೆದುಕೊಳ್ಳಲಿದೆ.

      ಇತರ ವೈಶಿಷ್ಟ್ಯಗಳು

      ಇತರ ವೈಶಿಷ್ಟ್ಯಗಳು

      • ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣ (ಎಫ್‌ಎಟಿಸಿ)
      • ರಿಯರ್ ಪಾರ್ಸೆಲ್ ಟ್ರೇ,
      • ಸ್ಮಾರ್ಟ್ ಎಂಟ್ರಿ,
      • ಟಿಲ್ಟ್ ಸ್ಟೀರಿಂಗ್,
      • ಆಕ್ಸ್ (AUX) ಆಂಡ್ ಯುಎಸ್‌ಬಿ ಪೋರ್ಟ್,
      • ಸ್ವಯಂಚಾಲಿತವಾಗಿ ಮಡಚಬಹುದಾದ ಎಲೆಕ್ಟ್ರಿಕ್ ಮಿರರ್,
      • ಆರ್ಮ್‌ರೆಸ್ಟ್ ಕಂಟ್ರೋಲ್,
      • ಸೆಂಟರ್ ಕನ್ಸಾಲ್,
      • ಮ್ಯಾಪ್ ಪಾಕೆಟ್.
      • ಮೈಲೇಜ್

        ಮೈಲೇಜ್

        ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆ ಪ್ರಕಾರ ಎಕ್ಸ್‌ಸೆಂಟ್ ಡೀಸೆಲ್, ಪೆಟ್ರೋಲ್ ಹಾಗೂ ಆಟೋಮ್ಯಾಟಿಕ್ ಆವೃತ್ತಿಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 24.4, 19.1 ಹಾಗೂ 16.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. (ಡೀಸೆಲ್ ಹೊರತುಪಡಿಸಿದರೆ ಅಮೇಜ್‌ಗಿಂತಲೂ ಉತ್ತಮ ಮೈಲೇಜ್ ಕಾಪಾಡಿಕೊಂಡಿದೆ.)

        ಆಯಾಮ

        ಆಯಾಮ

        ಉದ್ದ 3995 ಎಂಎಂ

        ಅಗಲ 3765 ಎಂಎಂ

        ವೀಲ್‌ಬೇಸ್ 2425 ಎಂಎಂ

        ಬೂಟ್ ಸ್ಪೇಸ್ 407 ಲೀಟರ್ (ಅಮೇಜ್ 400)

        ಗ್ರಾಂಡ್ ಐ10ಗಿಂತಲೂ ಹೆಚ್ಚು ಲೆಗ್ ರೂಂ

        ಕಲರ್ ವೆರಿಯಂಟ್

        ಕಲರ್ ವೆರಿಯಂಟ್

        ಐದು ಬಣ್ಣಗಳಲ್ಲಿ ಲಭ್ಯ - ಕಪ್ಪು, ನೀಲಿ, ಕೆಂಪು, ಸಿಲ್ವರ್ ಬಿಳಿ.

         ದರ

        ದರ

        ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಾಂಚ್ ಆಗಿರುವ ಹ್ಯುಂಡೈ ಎಕ್ಸೆಸೆಂಟ್ ಕಾರಿನ ದರ 4.66 ಲಕ್ಷ ರು.ಗಳಿಂದ 7.38 ಲಕ್ಷ ರು.ಗಳ ವರೆಗೆ ನಿಗದಿಯಾಗಿದೆ. (ಎಕ್ಸ್ ಶೋ ರೂಂ ದೆಹಲಿ). ಈ ಪೈಕಿ ಪೆಟ್ರೋಲ್ ವೆರಿಯಂಟ್ 4.66 ಲಕ್ಷ ರು.ಗಳಿಂದ ಆರಂಭವಾಗಿ 6.47 ಲಕ್ಷ ರು.ಗಳ ವರೆಗಿರಲಿದೆ. ಹಾಗೆಯೇ ಡೀಸೆಲ್ ವೆರಿಯಂಟ್ 5.56 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ 7.38 ಲಕ್ಷ ರು.ಗಳಷ್ಟು ದುಬಾರಿಯಾಗಿರಲಿದೆ.

        ಎಂಜಿನ್

        ಎಂಜಿನ್

        1.2 ಕಪ್ಪ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್

        1.1 ಯು2 ಡೀಸೆಲ್ ಎಂಜಿನ್

        ಗೇರ್ ಶಿಫ್ಟ್ ಇಂಟಿಕೇಟರ್

        ನೀವು ಏಕೆ ಹ್ಯುಂಡೈ ಎಕ್ಸ್‌ಸೆಂಟ್ ಖರೀದಿಸಬೇಕು?

        ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

More from DriveSpark

Article Published On: Friday, March 14, 2014, 11:21 [IST]
English summary
The first sub-4 meter of 2014 is here.While 2013 was the year of Honda Amaze will this year see the Hyundai Xcent dominate the compact sedan segment category in India?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+