ಹ್ಯುಂಡೈ ಎಕ್ಸ್‌ಸೆಂಟ್ ಪವರ್‌ಫುಲ್ ವರ್ಷನ್ ಬರುತ್ತಾ?

Written By:

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ಹಾಗೂ ಅತ್ಯಂತ ಬೃಹತ್ ವಾಹನ ರಫ್ತುದಾರ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು, ಇನ್ನಷ್ಟು ಶಕ್ತಿಶಾಲಿ ಎಕ್ಸ್‌ಸೆಂಟ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಗ್ರಾಂಡ್ ಐ10 ತಳಹದಿಯಲ್ಲಿ ನಿರ್ಮಾಣವಾಗಿರುವ ಎಕ್ಸ್‌ಸೆಂಟ್‌ಗೆ ದೇಶದ್ಯಂತ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಸಂಸ್ಥೆಯು ಹೆಚ್ಚು ಶಕ್ತಿಶಾಲಿ 1.4 ಲೀಟರ್ ಸಿಆರ್‌ಡಿಐ ಮಾದರಿ ಪ್ರದರ್ಶಿಸುವ ಇರಾದೆ ಹೊಂದಿದೆ. ಇದು 89 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

hyundai xcent

ಈಗಾಗಲೇ ಎಲೈಟ್ ಐ20 ಹಾಗೂ ವೆರ್ನಾದಲ್ಲಿರುವ 1.4 ಲೀಟರ್ ಎಂಜಿನ್ ಅನ್ನು ಎಕ್ಸ್‌ಸೆಂಟ್‌ಗೂ ಆಳವಡಿಸುವುದು ಸಂಸ್ಥೆಯ ಇರಾದೆಯಾಗಿದೆ.

ಈಗ ಬಂದಿರುವ ಮಾಹಿತಿ ಪ್ರಕಾರು ಈಗಿರುವ 1.1 ಲೀಟರ್ ಎಂಜಿನ್ ಜೊತೆಗೆ ಹೆಚ್ಚು ಶಕ್ತಿಶಾಲಿ 1.4 ಲೀಟರ್ ಎಂಜಿನ್ ಪರಿಚಯಿಸುವುದು ಹ್ಯುಂಡೈ ಇರಾದೆಯಾಗಿದೆ. ಸಹಜವಾಗಿಯೇ ಇದು ಸಾಮಾನ್ಯ ಎಕ್ಸ್‌ಸೆಂಟ್‌ಗಿಂತಲೂ ದುಬಾರಿಯೆನಿಸಲಿದೆ.

English summary
According to reports, Hyundai Motor India is planning to launch more powerful diesel engine for its Xcent compact sedan soon. 
Story first published: Saturday, December 27, 2014, 14:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark