ಬೆಂಗಳೂರಿನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಹೀಂದ್ರ 'ಇ2ಒ'

By Nagaraja

ಭಾರತದ ಪ್ರಪ್ರಥಮ ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದಕರಾಗಿರುವ ಮಹೀಂದ್ರ ರೇವಾ, ಬೆಂಗಳೂರಿನಲ್ಲಿ ಸಂಪೂರ್ಣವಾಗಿ ವಿದ್ಯುತ್ ಚಾಲಿತ, ಶೂನ್ಯ ಹೊಗೆ ಹೊರಸೂಸುವ 'ಮಹೀಂದ್ರ ಇ2ಒ' ಪ್ರಯಾಣಿಕ ಕಾರನ್ನು ಬಿಡುಗಡೆ ಮಾಡಿದ್ದು, ಇದೀಗ ಮಾಸಿಕ ಕಂತು ರು. 9,257 ಪಾವತಿಸಿ ತಮ್ಮದಾಗಿಸಿಕೊಳ್ಳಬಹುದಾಗಿದೆ.

ಮಹೀಂದ್ರ ಇ2ಒ ದರ: 6.49 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)

ಮಹೀಂದ್ರ ಇ2ಒ ಮಹೀಂದ್ರ ಸಮೂಹದ ಫ್ಯೂಚರ್ ಆಫ್ ಮೊಬಿಲಿಟಿ ಧ್ಯೇಯದ ಭಾಗವಾಗಿದ್ದು, 'ಐದು ಸಿ' ಗಳ ಸಿದ್ಧಾಂತವನ್ನು (ಕ್ಲೀನ್, ಕನ್‌ವಿನಿಯಂಟ್, ಕೆನೆಕ್ಟಡ್, ಕ್ಲೆವರ್ ಮತ್ತು ಕಾಸ್ಟ್ ಎಫೆಕ್ಟಿವ್) ಆಧರಿಸಿದೆ. ಇದು, 21ನೇ ಶತಮಾನದ ಸಂಚಾರ ವ್ಯವಸ್ಥೆಯ ರೂಪುರೇಷೆಯನ್ನು ನಿರ್ಧರಿಸಲಿದೆ. ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಕಡೆ ಸಾರ್ವಜನಿಕ ಚಾರ್ಜಿಂಗ್ ಸೌಲಭ್ಯವಿದೆ. ಗ್ರಾಹಕರಿಗೆ ಪ್ರತಿ ಐದು ಕೀ.ಮೀ. ಅಂತರದಲ್ಲಿ ಒಂದು ಕಡೆ ಚಾರ್ಜಿಂಗ್ ಸೌಲಭ್ಯವೂ ಲಭ್ಯವಿದೆ.

ಮಹೀಂದ್ರ ಇ2ಒ

ಮಹೀಂದ್ರ ಇ2ಒ

ಮಹೀಂದ್ರ ಇ2ಒ ಎಲೆಕ್ಟ್ರಿಕ್ ವಾಹನವಾಗಿದ್ದು, (ಇವಿ) ನಗರಗಳ ಸಂಚಾರದ ಅಗತ್ಯಗಳನ್ನು ಆಧರಿಸಿ ರೂಪಿಸಲಾಗಿದೆ. ಪರಿಸರ ಸ್ನೇಹಿಯಾಗಿದ್ದು, ಪರಿಸರ ರಕ್ಷಣೆ, ಪರಿಸರ ಆಧಾರಿತ ಆರೋಗ್ಯ ಸಮಸ್ಯೆಗಳು, ಪರಿಸರ ಬದಲಾವಣೆ, ಇಂಧನ ಭದ್ರತೆ, ಏರುತ್ತಿರುವ ತೈಲದ ಬೆಲೆ ಈ ಎಲ್ಲದಕ್ಕೂ ಉತ್ತರವಾಗಲಿದೆ. ಈ ವಾಹನವು ಗ್ರಾಹಕರಿಗೆ ಸ್ವಚ್ಛ, ಆಕರ್ಷಕವಾದ, ಪರಿಸರ ಸ್ನೇಹಿಯಾದ ಕೈಗೆಟುಕುವ ದರ ಸಂಚಾರ ಪರಿಹಾರ ಕ್ರಮಗಳನ್ನು ಒದಗಿಸಲಿದೆ.

ನಗರದ ಸಂಚಾರ ದಟ್ಟಣೆಯ ವಾತಾವರಣದಲ್ಲಿ ಅನುಕೂಲಕರ

ನಗರದ ಸಂಚಾರ ದಟ್ಟಣೆಯ ವಾತಾವರಣದಲ್ಲಿ ಅನುಕೂಲಕರ

ನವಪೀಳಿಗೆಯ ಲಿಥಯಂ-ಇಯಾನ್ ಬ್ಯಾಟರಿ ಮತ್ತು ಮೂರು ಫೇಸ್‌ನ ಎಲೆಕ್ಟ್ರಿಕ್ ಮೋಟಾರ್ ಅನ್ನು ಆಳವಡಿಸಿರುವ ಮಹೀಂದ್ರ ಇ2ಒ ಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿರುವ ವಾಹನವಾಗಿದೆ. ನಗರದ ವಾಹನ ಚಾಲನೆಗೆ ಅನುಕೂಲಕರವಾಗಿದೆ. ಸಣ್ಣ ತಿರುವಿನಲ್ಲೂ ವಾಹನ ಚಾನೆ ಅನುಕೂಲವಾಗಿದೆ. ವಿಶೇಷವಾದ ಎಬಿಎಸ್ ಕವಚವು ಸ್ಕ್ರಾಚ್ ಆಗುವುದರ ನಿರೋಧಕವಾಗಿದೆ. ಪ್ರಸ್ತುತ ಕಾರಿನಲ್ಲಿ ನಾಲ್ವರಿಗೆ ಆರಾಮವಾಗಿ ಕುಳಿತುಕೊಳ್ಳಬಹುದಾಗಿದ್ದು, 100 ಕೀ.ಮೀ. ವ್ಯಾಪ್ತಿಯಲ್ಲಿ ಪಯಣಿಸಲು ಅನುಕೂಲಕರವಾಗಿದೆ.

ನಿಮ್ಮ ಕೈಯಲ್ಲಿಯೇ ಶಕ್ತಿ

ನಿಮ್ಮ ಕೈಯಲ್ಲಿಯೇ ಶಕ್ತಿ

ಮಹೀಂದ್ರದ ಇ2ಒ ತಂತ್ರಜ್ಞಾನವು ವಿಶೇಷ ಶಕ್ತಿಯನ್ನು ಒಳಗೊಂಡಿದ್ದು, ವಾಹನವನ್ನು ಪೂರ್ಣ ನಿಯಂತ್ರಣ ಮಾಡುವಂತೆ ರೂಪಿಸಲಾಗಿದೆ. ಅಪ್ಲಿಕೇಷನ್ ಅನ್ನು ಪೂರ್ಣ ಡೌನ್‌ಲೋಡ್ ಮಾಡಿಕೊಂಡು ನಿಯಂತ್ರಿಸಲು ಸಾಧ್ಯವಿದೆ. ಈ ಅಪ್ಲಿಕೇಷನ್ ಮೂಲಕ ಗ್ರಾಹಕರು ದೂರದಿಂದಲೇ ಮಹೀಂದ್ರ ಇ2ಒ ನಿಯಂತ್ರಿಸಲು ಅವಕಾಶವಿದೆ.

ಮಹೀಂದ್ರ ಇ2ಒ ಜೊತೆಗೆ ಸಂವಹನ ಮಾಡಿ

ಮಹೀಂದ್ರ ಇ2ಒ ಜೊತೆಗೆ ಸಂವಹನ ಮಾಡಿ

ಮಹೀಂದ್ರ ಇ2ಒದಲ್ಲಿ ಪೂರ್ಣ ಮಾಹಿತಿ ನೀಡುವಂತೆ ಕಂಪ್ಯೂಟರ್ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ನಿಮ್ಮ ಮಹೀಂದ್ರ ಇ2ಒ ವಾಹನವನ್ನು ಲಾಕ್ ಮಾಡಲಾಗಿದೆಯೇ ಇಲ್ಲವೋ ಎಂಬುದರ ಜತೆಗೆ ಪೂರ್ಣ ಹೊಂದಾಣಿಸಿದ ಉಷ್ಣಾಂಶದ ಹೊಂದಾಣಿಕೆ, ನಿಮ್ಮ ವಾಹನದ ಮುಖ್ಯ ಸ್ವಿಚನ್ ಆನ್ ಮಾಡಿಲ್ಲ ಎಂಬುದು ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸಲಿದೆ. ಮಹೀಂದ್ರ ಇ2ಒ ನೀವು ಶೇ. 100ರಷ್ಟು ಚಾಲನಾ ಮಿತವ್ಯಯ ಸಾಧಿಸುವುದರ ಜೊತೆಗೆ ಇಂಧನ ಕ್ಷಮತೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಸಲಹೆಗಳನ್ನು ನೀಡಲಿದೆ.

ಚಾರ್ಚ್ ಮಾಡುವುದು ಸುಲಭ

ಚಾರ್ಚ್ ಮಾಡುವುದು ಸುಲಭ

ಗ್ರಾಹಕರು ಮಹೀಂದ್ರ ಇ2ಒ ಅನ್ನು ಚಾರ್ಜ್ ಮಾಡುವುದು ಸುಲಭ. ನಿಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅನ್ನು ಚಾರ್ಜ್ ಮಾಡುವಂತೆ ಮಾಡಬಹುದು. ಮಹೀಂದ್ರ ಇ2ಒ ಅನ್ನು 15ಎ ಪವರ್ ಸಾಕೆಟ್ ಮೂಲಕ ಚಾರ್ಜ್ ಮಾಡಬಹುದು. ಪೂರ್ಣ ಚಾರ್ಜ್ ಮಾಡಲು ಐದು ಗಂಟೆ ಬೇಕಾಗಿದ್ದು, 100 ಕೀ.ಮೀ. ದೂರ ಸಂಚರಿಸಬಹುದಾಗಿದೆ. ಹಕ್ಕುಸ್ವಾಮ್ಯ ಪಡೆದಿರುವ REVive ತಂತ್ರಜ್ಞಾನ ಆಳವಡಿಸಲಾಗಿದ್ದು, ಪವರ್ ಕಡಿಮೆ ಆಗುತ್ತಿದೆ ಎಂದು ಅನಿಸುತ್ತಿದಂತೆ ಸ್ಮಾರ್ಟ್ ಫೋನ್ ಮೂಲಕ ಮೀಸಲು ಇರುವ ಶಕ್ತಿ ಬಳಕೆ ಚಾಲನೆ ಮಾಡಬಹುದು.

ಸೌಲಭ್ಯ ಪೂರ್ಣ ಮತ್ತು ಇಂಧನ ಮಿತವ್ಯಯಿ

ಸೌಲಭ್ಯ ಪೂರ್ಣ ಮತ್ತು ಇಂಧನ ಮಿತವ್ಯಯಿ

ಮಹೀಂದ್ರ ಇ2ಒ ಒಟ್ಟು 15.5 ಸೆಂಟಿ ಮೀಟರ್ ಟಚ್ ಸ್ಕ್ರೀನ್ ಒಳಗೊಂಡಿದ್ದು, ಜಿಪಿಎಸ್ ನೇವಿಗೇಷನ್ ವ್ಯವಸ್ಥೆ, ಡಿವಿಡಿ, ರೇಡಿಯೋ, ಬ್ಲೂಟೂತ್, ಐ ಪಾಡ್ ಕನೆಕ್ಟಿವಿಟಿ ಸಂಪರ್ಕವನ್ನು ಒಳಗೊಂಡಿದೆ. ಚಾರ್ಜಿಂಗ್ ಸ್ಟೇಷನ್‌ಗಳನ್ನು ಗುರುತಿಸುವುದು ಸುಲಭ. ಪೂರ್ಣ ದೂರ ನಿಯಂತ್ರಣದ ಮೂಲಕ ಹೊಂದಾಣಿಸಬಹುದಾದ ಕನ್ನಡಿ, ಕೀಲೆಸ್ ಎಂಟ್ರಿ, ಚಾಲನೆಗೊಳಿಸುವ, ನಿಲಿಸುವ ಬಟನ್, ಪ್ರಾಜೆಕ್ಟರ್ ಎಹಡ್‌ಲ್ಯಾಂಪ್, ಎಲ್‌ಇಡಿ ಟೇಲ್ ಲ್ಯಾಂಪ್, 2ಜೆಬಿಎಲ್ ಸ್ಪೀಕರ್‌ಗಳು, 2 ಟ್ವೀಟರ್ಸ್ ಕೂಡಾ ಇರಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಮಹೀಂದ್ರ ಇ2ಒ ಕಾರುಗಳು ಆರು ಆಕರ್ಷಕವಾದ ಬಣ್ಣಗಳಲ್ಲಿ ಲಭ್ಯವಿದೆ.

  • ಆರ್ಕಿಟಿಕ್ ಸಿಲ್ವರ್
  • ಕೋರಲ್ ಬ್ಲೂ
  • ಎಕೋ ಗ್ರೀನ್
  • ಒಷಿಯಾನಿಕ್ ವೈಟ್
  • ಸ್ಪ್ಯಾನಿಷ್ ರೆಡ್
  • ಸನ್‌ಫೈರ್ ಯೆಲ್ಲೋ
  • ಸ್ವಚ್ಛ ಮತ್ತು ಹಸಿರು

    ಸ್ವಚ್ಛ ಮತ್ತು ಹಸಿರು

    ಮಹೀಂದ್ರ ರೇವಾ ಅನ್ನು ಸುಸ್ಥಿರ ತಂತ್ರಜ್ಞಾನ ಪರಿಸರ ವ್ಯವಸ್ಥೆ ಆಧರಿಸಿ ರೂಪಿಸಲಾಗಿದೆ. ಸನ್2ಕಾರು ತಂತ್ರಜ್ಞಾನವನ್ನು ಪರ್ಸನಲ್ ಸೋಲಾರ್ ಚಾರ್ಜಿಂಗ್ ಘಟಕಗಳ ಆಧಾರದಲ್ಲಿ ಮಾಡಲಾಗಿದೆ.

    ಸುರಕ್ಷಾ ಮಾನದಂಡ

    ಸುರಕ್ಷಾ ಮಾನದಂಡ

    -ಅಧಿಕ ಶಕ್ತಿಯುತವಾದ ಸ್ಟೀಲ್ ಸ್ಪೇಸ್ ಫ್ರೇಮ್

    -ವರ್ಣ ಮಾಸದ ಪಾಲಿಮಾರ್ ಕವಚದ ಪಾನೆಲ್‌ಗಳು

    -ಐಎಸ್ಒಎಫ್‌ಐಎಕ್ಸ್ ಮಕ್ಕಳ ಸೀಟುಗಳು ಎಎಲ್‌ಆರ್ ಸೀಟ್ ಬೆಲ್ಟ್‌ಗಳು ಜತೆಗೆ

    -ಹೊಂದಾಣಿಸಬಹುದಾದ ತಲೆ ಹೊತ್ತಿಗೆಗಳು

    -ಎರಡೂ ಬದಿ ಪರಿಣಾಮ ಬೀರುವ ಬೀಮ್‌ಗಳು

    -ಸೀಟುಗಳ ಕೆಳಗೆ ಬ್ಯಾಟರಿ. ಈ ಮೂಲಕ ಲೋ ಸೆಂಟರ್ ಗ್ರಾವಿಟಿಗೆ ಅವಕಾಶ.

    ಮಹೀಂದ್ರ ರೇವಾ ಬಗ್ಗೆ ಒಂದಿಷ್ಟು

    ಮಹೀಂದ್ರ ರೇವಾ ಬಗ್ಗೆ ಒಂದಿಷ್ಟು

    15.9 ಬಿಲಿಯನ್ ಡಾಲರ್ ಮೌಲ್ಯದ ಮಹೀಂದ್ರ ಸಮೂಹದ ಭಾಗವಾಗಿರುವ ಮಹೀಂದ್ರ ರೇವಾ ಸಂಸ್ಥೆ ಎಲೆಕ್ಟ್ರಿಕ್ ವೆಹಿಕಲ್ಸ್ ವಲಯದಲ್ಲಿ ಮುಂಚೂಣಿಯಲ್ಲಿದ್ದು, ವಿದ್ಯುತ್ ಚಾಲಿತ ವಾಹನ ಪರಿಚಯಿಸಿದ ಮೊದಲ ಸಂಸ್ಥೆಯಾಗಿದೆ. 1994ರಲ್ಲಿ ಸ್ಥಾಪನೆಯಾದ ರೇವಾ ಎಲೆಕ್ಟ್ರಿಕ್ ಕಾರು ಕಂಪನಿ, ಬೆಂಗಳೂರಿನ ಮೈನಿ ಸಮೂಹ ಮತ್ತು ಅಮೆರಿಕದ ಎಇವಿ ಎಲ್‌ಎಲ್‌ಸಿ ಸಂಸ್ಥೆಯ ಜಂಟಿ ಕಾರ್ಯವಾಗಿದೆ. ಇಇವಿ ಎಲ್‌ಎಲ್‌ಸಿ ಅನ್ನು 2010ರಲ್ಲಿ ಮಹೀಂದ್ರ ಸಮೂಹ ಸ್ವಾದೀನ ಪಡೆಯಿತು.

    ಮಹೀಂದ್ರ ರೇವಾ ಬಗ್ಗೆ ಒಂದಿಷ್ಟು

    ಮಹೀಂದ್ರ ರೇವಾ ಬಗ್ಗೆ ಒಂದಿಷ್ಟು

    ರೇವಾ ಕೈಗೆಟುಕುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಒತ್ತು ನೀಡಲಿದ್ದು, 2001ರಲ್ಲಿ ಭಾರತದಲ್ಲಿ ಹಾಗೂ 2004ರಲ್ಲಿ ಲಂಡನ್‌ನಲ್ಲಿ ಎಲೆಕ್ಟ್ರಿಕ್ ವಾಹನವನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿತ್ತು.

    ಮಹೀಂದ್ರ ಇ2ಒ ಮುಖ್ಯಾಂಶಗಳು:

    ಮಹೀಂದ್ರ ಇ2ಒ ಮುಖ್ಯಾಂಶಗಳು:

    -ಮಹೀಂದ್ರದಿಂದ ಭವಿಷ್ಯದ, ನವಪೀಳಿಗೆಯ ಪೂರ್ಣ ವಿದ್ಯುನ್ಮಾನ ವ್ಯವಸ್ಥೆಯ, ಶೂನ್ಯ ಹೊಗೆ ಹೊರಸೂಸುವಿಕೆಯ ಮಹೀಂದ್ರ ಇ2ಒ (ರೇವಾ ಉತ್ಪಾದನೆ) ಬೆಂಗಳೂರಿನಲ್ಲಿ ಬಿಡುಗಡೆ.

    -ಮಹೀಂದ್ರ ಇ2ಒ ಈಗ ಸುಲಭ ಕಂತುಗಳಲ್ಲಿ ಮಾಸಿಕ ರೂ. 9,257 ರೂಪಾಯಿ (ಇಎಂಐ ಮತ್ತು ವೆಚ್ಚ ಸೇರಿ ಮಾಸಿಕ ರೂ. 9,857)ಗಳಲ್ಲಿ ಲಭ್ಯ.

    -ಮಹೀಂದ್ರ ಇ2ಒ ವಾಹನವು ಮಹೀಂದ್ರದ ಮುಂದಿನ ಪೀಳಿಗೆಯ ಸಂಚಾರ ವ್ಯವಸ್ಥೆಯ ಧ್ಯೇಯದ ಭಾಗ. ಐದು 'ಸಿ'- ಕ್ಲೀನ್, ಕನ್ವಿನಿಯೆಂಟ್, ಕನೆಕ್ಟಡ್, ಕ್ಲೆವರ್ ಮತ್ತು ಕಾಸ್ಟ್ ಎಫೆಕ್ಟಿವ್ ಆಧಾರದಲ್ಲಿ ನಿರ್ಮಾಣ.

    ಮಹೀಂದ್ರ ಇ2ಒ ಮುಖ್ಯಾಂಶಗಳು:

    ಮಹೀಂದ್ರ ಇ2ಒ ಮುಖ್ಯಾಂಶಗಳು:

    -ಪೂರ್ಣ ಸ್ವಯಂಚಾಲಿತ ವ್ಯವಸ್ಥೆ, 100 ಕೀ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲ.

    -ಎಲ್ಲ ಮನೆಗಳಲ್ಲಿ ಲಭ್ಯವಿರುವ 15ಎ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು.

    -ವಿಶೇಷವಾದ ಕಾರು ತಂತ್ರಜ್ಞಾನವು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕವು (ಎಸಿ ಚಾಲನೆ, ಲಾಕ್ ಮಾಡುವುದು, ಅನ್‌ಲಾಕ್ ಮಾಡುವುದು ಇತ್ಯಾದಿ) ನಿರ್ವಹಣೆ ಮಾಡಬಹುದು.

    -ರೇವಾ REVive ಪ್ರಥಮ ದೂರ ನಿಯಂತ್ರಿತ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಅನ್ನು ಹೊಂದಿದೆ.

More from DriveSpark

Article Published On: Thursday, April 4, 2013, 9:41 [IST]
English summary
The launch of the Mahindra e2o marks an important milestone for the Mahindra Group. The two-door, four-seater car is powered by new generation lithiumion batteries and a three phase induction electric motor. It has driving range of 100 kms per charge, which takes 5 hours for one full charging. The fully automatic car is aimed for city driving.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+